Film News

ಬಾಲಿವುಡ್ ರಾಜಕೀಯದ ಬಗ್ಗೆ ಪ್ರಿಯಾಂಕಾ ಚೋಪ್ರಾ ಶಾಕಿಂಗ್ ಕಾಮೆಂಟ್ಸ್, ನನಗೆ ಆಫರ್ ಬಾರದಂತೆ ಮಾಡಿದ್ರು ಎಂದು ಫೈರ್….!

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿ ಪ್ರಿಯಾಂಕಾ ಚೋಪ್ರಾ ಟಾಪ್ ಸ್ಟಾರ್‍ ಗಳ ಜೊತೆಗೆ ಅನೇಕ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಬ್ಯೂಟಿ 2000 ನೇ ಇಸವಿಯಲ್ಲಿ ಮಿಸ್ ವರ್ಲ್ಡ್ ಟೈಟಲ್ ಸಹ ಪಡೆದುಕೊಂಡರು. ತಮಿಳು ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಬಳಿಕ ಬಾಲಿವುಡ್ ನಲ್ಲೆ ಸೆಟಲ್ ಆದರು. 2013 ರಲ್ಲಿ ರಾಮ್ ಚರಣ್ ಜೊತೆಗೆ ಜಂಜೀರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇನ್ನೂ ಸದ್ಯ ಆಕೆ ಹಾಲಿವುಡ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ಬಾಲಿವುಡ್ ಸಿನಿರಂಗದಿಂದ ದೂರ ಆಗಿದ್ದು ಏಕೆ ಎಂಬ ವಿಚಾರದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸುಮಾರು ಎರಡು ದಶಕಗಳಿಂದ ಪ್ರಿಯಾಂಕಾ ಚೋಪ್ರಾ ಸಿನಿಮಾಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಬಾಲಿವುಡ್ ನಿಂದ ಆಕೆ ಸದ್ಯ ಹಾಲಿವುಡ್ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಅಲ್ಲಿಯೇ ಆಕೆ ಟೆಲಿವಿಷನ್ ಸೀರಿಸ್ ಗಳು, ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ ಸದ್ಯ ಆಕೆ ಹಾಲಿವುಡ್ ನಲ್ಲೇ ಸ್ಥಿರವಾಗಿದ್ದಾರೆ. ಇದೀಗ ಆಕೆ ಬಾಲಿವುಡ್ ಸಿನಿರಂಗವನ್ನು ಉದ್ದೇಶಿಸಿ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮಿಡಿಯಾದೊಂದಿಗೆ ಮಾತನಾಡಿದ ಆಕೆ ಬಾಲಿವುಡ್ ರಾಜಕೀಯದ ಬಗ್ಗೆ ಅನೇಕ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ. ಅಷ್ಟಕ್ಕು ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನಲ್ಲಿರುವ ರಾಜಕೀಯದ ಬಗ್ಗೆ ಏನು ಹೇಳಿದರು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸಿನಿರಂಗ ನನ್ನನ್ನು ಸೈಡ್ ಟ್ರಾಕ್ ಮಾಡಿತ್ತು. ಉದ್ದೇಶ ಪೂರ್ವಕವಾಗಿಯೇ ನನಗೆ ಅವಕಾಶಗಳು ಬಾರದಂತೆ ಮಾಡಿದರು. ಇದರಿಂದ ಕೆಲವರೊಂದಿಗೆ ಗಲಾಟೆ ಆಯಿತು. ಬಾಲಿವುಡ್ ರಾಜಕೀಯದಲ್ಲಿ ನಾನು ತುಂಬಾ ಸಮಸ್ಯೆ ಅನುಭವಿಸಿದ್ದೆ. ರಾಜಕೀಯ ಮಾಡಲು ನನಗೆ ಬರುವುದಿಲ್ಲ. ಅದರಿಂದಲೇ ನಾನು ಬಾಲಿವುಡ್ ನಿಂದ ದೂರವಾದೆ. ಸ್ಟಾರ್‍ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿರಂಗದ ಮೇಲೆ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಸುಮಾರು ದಿನಗಳಿಂದ ಪ್ರಿಯಾಂಕಾ ಈ ಹೇಳಿಕೆಗಳನ್ನು ಹೇಳಲು ಕಾಯುತ್ತಿದ್ದು, ಇದೀಗ ಆಕೆ ಬಹಿರಂಗ ಪಡಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಪ್ರಿಯಾಂಕಾ ಬಾಲಿವುಡ್ ರಂಗದ ಮೇಲೆ ನೀಡಿದ ಆರೋಪಗಳಿಗೆ ಬಾಲಿವುಡ್ ನಿಂದ ಯಾರಾದರೂ ರಿಯಾಕ್ಟ್ ಆಗುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಪ್ರಿಯಾಂಕಾ ಕಳೆದ 2018 ರಲ್ಲಿ ಅಮೇರಿಕಾ ಮೂಲದ ಖ್ಯಾತ ಸಿಂಗರ್‍ ನಿಕ್ ಜೋನಸ್ ರನ್ನು ವಿವಾಹವಾದರು. ಇನ್ನೂ ಪ್ರಿಯಾಂಕಾ ಗಿಂತ ನಿಕ್ 10 ವರ್ಷ ಚಿಕ್ಕವನು. ಈ ಕಾರಣದಿಂದ ಆಕೆಯನ್ನು ಅನೇಕ ಬಾರಿ ಟ್ರೋಲ್ ಸಹ ಮಾಡಲಾಗಿತ್ತು. ಆದರೆ ಈ ಜೋಡಿ ಮಾತ್ರ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಸೆರಗೋಸಿ ಪದ್ದತಿ ಮೂಲಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಸದ್ಯ ಪ್ರಿಯಾಂಕಾ ಹಾಗೂ ನಿಕ್ ಅಮೇರಿಕಾದ ಲಾಸ್ ಏಂಜಲ್ಸ್ ನಲ್ಲಿ ಸೆಟಲ್ ಆಗಿದ್ದಾರೆ.

Most Popular

To Top