ಅಭಿಮಾನಿ ಸೆಲ್ಫಿ ಕೇಳಿದ್ರೆ, ಸೆಲ್ಫಿ ವಿತ್ ಹಗ್ ಕೊಟ್ಟ ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್, ವಿಡಿಯೋ ವೈರಲ್…..!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳದೇ ಇದ್ದರೂ ಸಹ ಯುವಕರಲ್ಲಿ ಕ್ರೇಜ್ ಹೊಂದಿರುವ ನಟಿಯರಲ್ಲಿ ಪಾಯಲ್ ರಾಜ್ ಪೂತ್ ಸಹ ಒಬ್ಬರಾಗಿದ್ದಾರೆ. ಮೊದಲನೇ ಸಿನೆಮಾದ ಮೂಲಕ ಅನೇಕ ಯುವಕರ ಕ್ರಷ್ ಆದರು. ಮೊದಲನೇ ಸಿನೆಮಾದಲ್ಲಿ…

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳದೇ ಇದ್ದರೂ ಸಹ ಯುವಕರಲ್ಲಿ ಕ್ರೇಜ್ ಹೊಂದಿರುವ ನಟಿಯರಲ್ಲಿ ಪಾಯಲ್ ರಾಜ್ ಪೂತ್ ಸಹ ಒಬ್ಬರಾಗಿದ್ದಾರೆ. ಮೊದಲನೇ ಸಿನೆಮಾದ ಮೂಲಕ ಅನೇಕ ಯುವಕರ ಕ್ರಷ್ ಆದರು. ಮೊದಲನೇ ಸಿನೆಮಾದಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಆಕೆಗೆ ಸೆಲ್ಫಿ ಕೇಳಿದ ಅಭಿಮಾನಿಗೆ ಹಗ್ ನೀಡಿದ್ದಾರೆ. ಅದರಿಂದ ಅಭಿಮಾನಿ ಶಾಕ್ ಆಗಿದ್ದಾನೆ.

ನಟಿ ಪಾಯಲ್ ರಾಜ್ ಪೂತ್ ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. RX100 ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಕಳೆದ 2018 ರಲ್ಲಿ ತೆರೆಕಂಡ ಈ ಸಿನೆಮಾ ಭಾರಿ ಸಂಚಲನ ಮೂಡಿಸಿತ್ತು. ಜೊತೆಗೆ ಒಳ್ಳೆಯ ಕಲೆಕ್ಷನ್ ಗಳಿಸಿ, ಸಕ್ಸಸ್ ಕಂಡಿತ್ತು. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ಆಗುತ್ತಾಳೆ, ಆಫರ್‍ ಗಳು ಹರಿದು ಬರಲಿದೆ ಎಂಬ ಮಾತುಗಳು ಕೇಳಿಬಂದವು. ಆದರೆ ಈ ಸಿನೆಮಾದ ಬಳಿಕ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಸಿಗಲಿಲ್ಲ. ಬಳಿಕ ಆಕೆ ಸ್ಟಾರ್‍ ನಟರ ಎರಡು ಸಿನೆಮಾಗಳಲ್ಲಿ ಸಹ ನಟಿಸಿದ್ದರು. ವಿಕ್ಟರಿ ವೆಂಕಟೇಶ್ ಜೊತೆಗೆ ವೆಂಕಿಮಾಮ ಹಾಗೂ ಮಾಸ್ ಮಹಾರಾಜ ರವಿತೇಜ ಜೊತೆಗೆ ಡಿಸ್ಕೋ ರಾಜಾ ಎಂಬ ಸಿನೆಮಾಗಳಲ್ಲಿ ನಟಿಸಿದ್ದು. ವೆಂಕಿ ಮಾಮ ಸಿನೆಮಾ ಕೊಂಚ ಸಕ್ಸಸ್ ಕಂಡರೂ, ಡಿಸ್ಕೋರಾಜಾ ಸಿನೆಮಾ ಮಾತ್ರ ಪ್ಲಾಫ್ ಆಗಿತ್ತು. ಆದರೂ ಸಹ ಪಾಯಲ್ ಕೆಲವೊಂದು ಸಿನೆಮಾಗಳಲ್ಲಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆಕೆಯೊಂದಿಗೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದಿದ್ದಾರೆ. ಇನ್ನೂ ಅವರಿಗೆ ನಿರಾಸೆ ಮೂಡಿಸದೇ ಪಾಯಲ್ ಸಹ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿಯ ಮೇಲೆ ಕೈ ಹಾಕಿದ್ದಾರೆ. ಜೊತೆಗೆ ಸ್ಮಾಲ್ ಹಗ್ ಸಹ ಕೊಟ್ಟಿದ್ದಾರೆ. ಇದರಿಂದಾಗಿ ಅಭಿಮಾನಿ ಕೆಲ ಸಮಯ ತಬ್ಬಿಬ್ಬಾಗಿದ್ದಾನೆ. ಇನ್ನೂ ಈ ವಿಡಿಯೋಅನ್ನು ಪಾಯಲ್ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವಿಡಿಯೋದಲ್ಲಿ ಪಾಯಲ್ ಸಹ ತುಂಬಾ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಆಕೆ ಆದಿ ಸಾಯಿಕುಮಾರ್‍ ಜೊತೆಗೆ ತೀಸ್ ಮಾರ್‍ ಖಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲೂ ಸಹ ಪಾಯಲ್ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದರು. ಆದರೆ  ಮಿಶ್ರ ಸಕ್ಸಸ್ ಕಂಡಿತ್ತು. ಬಳಿಕ ಮಂಚು ವಿಷ್ಣು ಜೊತೆಗೆ ಜಿನ್ನಾ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಆದರೆ ಈ ಸಿನೆಮಾ ಸಹ ಡಿಸಾಸ್ಟರ್‍ ಆಯಿತು. ಇದೀಗ ಆಕೆ ಮಾಯಾ ಪೆಟಿಕ, ಕಿರಾತಾಕ ಸಿನೆಮಾಗಳ ಜೊತೆಗೆ ವೆಬ್ ಸಿರೀಸ್ ಗಳತ್ತ ಸಹ ಮುಖ ಮಾಡಿದ್ದಾರೆ.