Film News

ಜೀವನದಲ್ಲಿ ಅಷ್ಟೊಂದು ಸಮಸ್ಯೆಗಳು ಬರುತ್ತೆ ಎಂದು ಅಂದುಕೊಂಡಿರಲಿಲ್ಲ, ಎಮೋಷನಲ್ ಆದ ಸಮಂತಾ…..!

ಸ್ಟಾರ್‍ ನಟಿ ಸಮಂತಾ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯಾಗಿದ್ದಾರೆ. ಅನೇಕ ಯುವಕರ ಡ್ರೀಮ್ ಗರ್ಲ್ ಆಗಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಪ್ರೀತಿಗೆ ಬಿದ್ದು ಮದುವೆಯಾದರು. ಮದುವೆಯಾದ ನಾಲ್ಕು ವರ್ಷಗಳಲ್ಲೇ ಅವರು ವಿಚ್ಚೇದನ ಪಡೆದುಕೊಂಡು ಬೇರೆಯಾದರು. ವಿಚ್ಚೇದನದ ಬಳಿಕ ಆಕೆ ಅನೇಕ ಸಮಸ್ಯೆಗಳನ್ನು ಎದುರಿಸಿದರು. ಕಳೆದ ವರ್ಷ ಆಕೆ ಮಯೋಸೈಟೀಸ್ ಎಂಬ ವ್ಯಾಧಿಗೂ ಸಹ ಗುರಿಯಾಗಿದ್ದರು. ಇದೀಗ ಆಕೆ ಆ ವ್ಯಾಧಿಯಿಂದ ಗುಣಮುಖರಾಗುತ್ತಾ ಮತ್ತೆ ಸಿನೆಮಾಗಳ ಮೇಲೆ ಪೋಕಸ್ ಇಡುತ್ತಿದ್ದಾರೆ.

ನಟಿ ಸಮಂತಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಆಕೆ ಆಗಾಗ ಪೊಟೋಶೂಟ್ಸ್, ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದರ ಜೊತೆಗೆ ಕೆಲವೊಮ್ಮೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ಸಹ ನೀಡಿದ್ದಾರೆ. ಈ ವೇಳೆ ಆಕೆ ಆಕ್ಷನ್ ಸಿನೆಮಾಗಳಲ್ಲಿ ನಟಿಸುವುದಾಗಿ, ಹಾಗೂ ಕೆಲವೊಂದು ಎಮೋಷನಲ್ ಮಾತುಗಳನ್ನು ಹೇಳಿದ್ದಾರೆ. ತನ್ನ ಜೀವನ ಹೀಗಿರುತ್ತೆ ಎಂದು ಊಹಿಸಿರಲಿಲ್ಲವಂತೆ.

ಇನ್ನೂ ಇದೇ ಚಿಟ್ ಚಾಟ್ ಸೆಷನ್ ನಲ್ಲಿ ಇಂದಿನ ಯುವಜನತೆಗೆ ಕೆಲವೊಂದು ಸಂದೇಶಗಳನ್ನು ಸಹ ನೀಡಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಜೀವನ ಹೀಗಾಯ್ತು ಎಂದು ಫೀಲ್ ಆಗಬೇಡಿ. ಈಗಲೇ ನಿಮ್ಮ ಜೀವನ ಮೊದಲಾಯ್ತು ಎಂದುಕೊಳ್ಳೀ. ಜೀವನ ಎಂಬ ಪ್ರಯಾಣದಲ್ಲಿ ತುಂಬಾ ಕಷ್ಟಗಳು, ಸಮಸ್ಯೆಗಳು ಬರುತ್ತವೆ. ಅವುಗಳನ್ನು ಧೈರ್ಯವಾಗಿ ಎದುರಿಸಬೇಕು. ಸತ್ಯ ಹೇಳಬೇಕೆಂದರೇ ಜೀವನದಲ್ಲಿ ಎದುರಾಗುವಂತಹ ಕಷ್ಟಗಳು, ಸಮಸ್ಯೆಗಳು ನಮ್ಮನ್ನು ಮತಷ್ಟು ಸ್ಟ್ರಾಂಗ್ ಆಗಿ ಮಾಡುತ್ತವೆ. ನನಗೆ 25 ವರ್ಷ ಇದ್ದಾಗ ಊಹಿಸಲಾರದಂತಹ ಸಮಸ್ಯೆಗಳು ಎದುರಾದವು. ನಾನು ಅಂತಹ ಸಮಸ್ಯೆಗಳಲ್ಲಿ ಸಿಲುಕುತ್ತೇನೆ ಎಂದುಕೊಂಡಿರಲಿಲ್ಲ. ಏನೇ ನಡೆದರು ಪಾಸಿಟೀವ್ ಮೈಂಡ್ ಸೆಟ್ ನಿಂದ ಮುಂದೆ ಸಾಗಬೇಕು, ಆಗಿದ್ದೆಲ್ಲಾ ನಮ್ಮ ಒಳ್ಳೆಯದಕ್ಕೆ ಎಂದುಕೊಳ್ಳಬೇಕೆಂದು ಸಮಂತಾ ಹೇಳಿದ್ದಾರೆ.

ಇನ್ನೂ ಸಮಂತಾ ಆಕ್ಷನ್ ಸಿನೆಮಾಗಳಲ್ಲಿ ನಟಿಸಬೇಕೆಂದು ಅಭಿಮಾನಿಗಳು ಕೋರಿದ್ದು, ಅದಕ್ಕೆ ಸಹ ಸಮಂತಾ ಉತ್ತರ ನೀಡಿದ್ದಾರೆ. ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಆಕ್ಷನ್ ದೃಶ್ಯಗಳಿರುತ್ತವೆ. ಈ ಸಿರೀಸ್ ನಲ್ಲಿ ತನ್ನ ಪಾತ್ರ ಹಾಟ್ ಹಾಗೂ ಫನ್ನಿಯಾಗಿ ಅನೇಕ ಸವಾಲುಗಳಿಂದ ಕೂಡಿರುತ್ತದೆ. ನನಗೂ ಸಹ ಆಕ್ಷನ್ ಸಿನೆಮಾಗಳ ಎಂದರೇ ತುಂಬಾ ಇಷ್ಟ. ಅಭಿಮಾನಿಗಳಿಗಾಗಿ ಆಕ್ಷನ್ ಸಿನೆಮಾಗಳನ್ನು ತಪ್ಪದೇ ಮಾಡುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಆಕೆ ಆಸ್ಟ್ರೇಲಿಯಾ ವೆಕೇಷನ್ ನಲ್ಲಿದ್ದು, ವೆಕೇಷನ್ ಎಂಜಾಯ್ ಮಾಡುತ್ತಿರುವುದಾಗಿ ಆಕೆ ತಿಳಿಸಿದ್ದಾರೆ. ಇನ್ನೂ ಸಮಂತಾ ಅಭಿನಯದ ಖುಷಿ ಸಿನೆಮಾ ಬಿಡುಗಡೆಯಾಗಿದ್ದು, ಒಳ್ಳೆಯ ಸಕ್ಸಸ್ ಕಂಡಿದೆ.

Most Popular

To Top