ಪುಲ್ ಹ್ಯಾಪಿ ಮೋಡ್ ನಲ್ಲಿ ಚೈತ್ರಾ ಕುಂದಾಪುರ, ಸ್ವಾಮೀಜಿ ಬಂಧನದಿಂದ ಚೈತ್ರಾ ಖುಷಿಯಾದ್ರಾ?

ಉಡುಪಿ ಮೂಲದ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನ ಹಲವರು ಈಗಾಗಲೇ ಪೋಲಿಸರ ಅತಿಥಿಗಳಾಗಿದ್ದಾರೆ. ನಿನ್ನೆಯಷ್ಟೆ ಪ್ರಮುಖ ಆರೋಪಿ ಅಭಿನವ ಹಾಲಶ್ರೀ…

ಉಡುಪಿ ಮೂಲದ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂಪಾಯಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನ ಹಲವರು ಈಗಾಗಲೇ ಪೋಲಿಸರ ಅತಿಥಿಗಳಾಗಿದ್ದಾರೆ. ನಿನ್ನೆಯಷ್ಟೆ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನವಾಗಿದ್ದು, ಈ ಸುದ್ದಿಯನ್ನು ತಿಳಿಯುತ್ತಿದ್ದಂತೆ ಚೈತ್ರಾ ಕುಂದಾಪುರ ಪುಲ್ ಖುಷಿಯಾಗಿದ್ದಾರೆ. ಆಕೆ ಖುಷಿಯಿಂದ ಇರುವ ಕೆಲವೊಂದು ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಬಿದಿದ್ದೆ.

ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ಬಂಧನವಾದಾಗಿನಿಂದ ಸಪ್ಪೆಯಾಗಿದ್ದಳು. ಇದೀಗ ಆಕೆ ಪುಲ್ ಖುಷಿಯಾಗಿದ್ದಾರೆ. ಅಭಿನವ ಹಾಲಶ್ರೀ ಬಂಧನದ ವಿಚಾರ ತಿಳಿದ ಕೂಡಲೇ ಚೈತ್ರಾ ಪುಲ್ ಹ್ಯಾಪಿಯಾಗಿದ್ದಾಳೆ. ಈ ಹಿಂದೆ ಚೈತ್ರಾ ಬಂಧನವಾಗಿದ್ದಾಗ ಸಹ ಸ್ವಾಮೀಜಿ ಬಂಧನವಾಗಲಿ, ದೊಡ್ಡ ದೊಡ್ಡವರ ಹೆಸರುಗಳು ಹೊರಬರಲಿದೆ. ಯಾರೂ A1 ಆರೋಪಿ ಎಂದು ತಿಳಿಯುತ್ತದೆ ಎಂದು ಗುಡುಗಿದ್ದಳು. ಇದೀಗ ಚೈತ್ರಾ ಸಿಸಿಬಿ ಕಚೇರಿಯಿಂದ ನಗುತ್ತಲೇ ಸಾಂತ್ವನ ಕೇಂದ್ರಕ್ಕೆ ತೆರಳಿದ್ದಾರೆ. ಈ ವೇಲೆ ಮಾದ್ಯಮಗಳ ಕ್ಯಾಮೆರಾ ಕಣ್ಣಿಗೆ ಚೈತ್ರಾ ಪುಲ್ ಖುಷಿಯಾಗಿರುವುದು ಕಂಡುಬಂದಿದೆ.

ಇನ್ನೂ ಚೈತ್ರಾ ಹಾಗೂ ಶ್ರೀಕಾಂತ್ ರವರನ್ನು ಒಟ್ಟಿಗೆ ಕೂರಿಸಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ನಾನು ಎಲ್ಲಾ ಸತ್ಯವನ್ನು ಹೇಳುತ್ತೇನೆ. ನನ್ನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರಂತೆ. ಇನ್ನೂ ಈ ಪ್ರಕರಣದಲ್ಲಿ ಯಾರೆಲ್ಲಾ ಕೈವಾಡವಿದೆ ಎಂಬುದನ್ನೂ ಸಹ ಹೇಳುತ್ತೇನೆ ಎಂದು ಚೈತ್ರ ಪೋಲಿಸರ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಈ ಪ್ರಕರಣದಲ್ಲಿ ಯಾರ ಯಾರ ಹೆಸರುಗಳು ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಹತ್ತು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.