Film News

ನಾನು ಬಯಸಿರಲಿಲ್ಲ, ಆದರೂ ಕಠಿಣ ನಿರ್ಣಯ ತೆಗೆದುಕೊಳ್ಳಬೇಕಾಯ್ತು ಎಂದ ಸಮಂತಾ, ವೈರಲ್ ಆದ ಕಾಮೆಂಟ್ಸ್……!

ಸ್ಟಾರ್‍ ನಟಿ ಸಮಂತಾ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಸ್ಟಾರ್‍ ನಟರಿಗಿಂತ ಕಡಿಮೆಯಿಲ್ಲ ಎಂಬಂತೆ ಫೇಮಸ್ ಆಗಿದ್ದಾರೆ. ಆಕೆಯ ವೈಯುಕ್ತಿಕ ಜೀವನದಲ್ಲಿ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ವಿಚ್ಚೇದನದ ಕಾರಣದಿಂದ ಆಕೆ ಡಿಪ್ರೆಷನ್ ಗೆ ಹೋಗಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಅನೇಕ ಟ್ರೋಲ್ ಗಳನ್ನು ಎದುರಿಸಿದ್ದರು. ಈ ನಡುವೆ ಆಕೆ ಮಯೋಸೈಟೀಸ್ ಎಂಬ ಮಾರಕ ವ್ಯಾದಿಗೆ ಗುರಿಯಾಗಿ ತುಂಬಾನೆ ಸಮಸ್ಯೆ ಎದುರಿಸಿದ್ದರು. ಇದೀಗ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡ ಸಂಪೂರ್ಣ ಆರೋಗ್ಯ ಪಡೆದುಕೊಳ್ಳಲು ಯೋಗ, ಮೆಡಿಟೇಷನ್ ಸೇರಿದಂತೆ ಆಧ್ಯಾತ್ಮಿಕ ಕೇಂದ್ರಗಳನ್ನು ಸಂದರ್ಶನ ಮಾಡುತ್ತಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ನಟಿ ಸಮಂತಾ ಮಯೋಸೈಟೀಸ್ ಎಂಬ ಮಾರಕ ವ್ಯಾದಿಗೆ ಗುರಿಯಾಗಿದ್ದರು. ಈ ವ್ಯಾಧಿಯಿಂದ ಆಕೆ ಸುಮಾರು ತಿಂಗಳುಗಳ ಕಾಲ ಅಜ್ಞಾತದಲ್ಲೇ ಇದ್ದರು. ಈ ವ್ಯಾದಿಯಿಂದ ಆಕೆ ತುಂಬಾನೆ ನೋವು ಪಟ್ಟರು. ಇದೀಗ ಆಕೆ ಸಂಪೂರ್ಣವಾಗಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಕೆ ಹೆಚ್ಚಾಗಿ ಆಧ್ಯಾತ್ಮಿಕ ಪ್ರದೇಶಗಳು, ಯೋಗ, ಪೂಜೆ ಗಳನ್ನು ಮಾಡುತ್ತಾ ಫಿಟ್ ನೆಸ್ ಟ್ರೈನಿಂಗ್ ಸಹ ಪಡೆದುಕೊಳ್ಳುತ್ತಿದ್ದಾರೆ. ಆಕೆ ತುಂಬಾ ಬೇಡಿಕೆಯುಳ್ಳ ನಟಿಯಾಗಿದ್ದು, ಆರೋಗ್ಯದ ಕಾರಣದಿಂದ ಆಕೆ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರು. ಇದೀಗ ಆಕೆ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಶೀಘ್ರದಲ್ಲೇ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

ಇದೀಗ ಸಮಂತಾ ತಾನು ಒಂದು ವರ್ಷ ಏತಕ್ಕಾಗಿ ಬ್ರೇಕ್ ಪಡೆದುಕೊಂಡಿದ್ದು ಎಂಬ ವಿಚಾರವನ್ನು ತಿಳಿಸಿದ್ದಾರೆ.  ಒಂದು ವರ್ಷ ಬ್ರೇಕ್ ಪಡೆದುಕೊಳ್ಳುವುದು ಎಂದರೇ ತುಂಬಾ ಕಠಿಣವಾದ ನಿರ್ಣಯವಾಗಿದೆ. ಕೆರಿಯರ್‍ ಹಾಗೂ ಆರೋಗ್ಯ ಎರಡನ್ನು ಹೋಲಿಕೆ ಮಾಡಿದಾಗ. ಆರೋಗ್ಯ ಮುಖ್ಯ ಎಂದೆನ್ನಿಸಿತ್ತು. ಅದರಿಂದಲೇ ನಾನು ಈ ನಿರ್ಣಯ ತೆಗೆದುಕೊಂಡೆ. ಇನ್ನು ಮುಂದೆ ಜೀವನದಲ್ಲಿ ಯಾವುದೇ ಸಮಸ್ಯೆ ಇರೊಲ್ಲ ಎಂದು ಭಾವಿಸುತ್ತೇನೆ. ನಾನು ಬ್ರೇಕ್ ತೆಗೆದುಕೊಂಡಿದ್ದು, ಸಮಯ ವ್ಯರ್ಥ ಮಾಡೋಕೆ ಅಲ್ಲ. ನನ್ನ ಆರೋಗ್ಯಕ್ಕಾಗಿ. ಇದಕ್ಕಾಗಿ ತುಂಬಾ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದೂ ಸಹ ನನಗೆ ತಿಳಿದಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಬ್ರೇಕ್ ತೆಗೆದುಕೊಳ್ಳಬೇಕಾಯ್ತು ಎಂದು ಹೇಳಿದ್ದಾರೆ. ಇನ್ನೂ ಸಮಂತಾ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಜೊತೆಗೆ ಶೀಘ್ರದಲ್ಲೇ ಆಕೆ ಸಿನೆಮಾಗಳನ್ನು ಒಪ್ಪಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Most Popular

To Top