ಬ್ಲಾಕ್ ಕಲರ್ ಮಾಡ್ರನ್ ವೇರ್ ನಲ್ಲಿ ಮಾದಕ ನೋಟ ಬೀರಿದ ಶ್ರೀವಲ್ಲಿ, ಬ್ಲಾಕ್ ಬ್ಯೂಟಿ ಈಸ್ ಫೈಯರ್ ಎಂದ ಫ್ಯಾನ್ಸ್……!

ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಜೊತೆಗೆ ಬಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ ತುಂಬಾ ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದ ರಶ್ಮಿಕಾ ಮಂದಣ್ಣ ಗೆ ಭಾರಿ ಬೇಡಿಕೆಯಿದೆ. ಜೊತೆಗೆ ದುಬಾರಿ ಸಂಭಾವನೆ ಸಹ ಪಡೆದುಕೊಳ್ಳುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು, ಸಾಲು ಸಾಲು ಪೋಸ್ಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬ್ಲಾಕ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿವೆ.

ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ದೊಡ್ಡ ಸ್ಟಾರ್‍ ಆದರು. ಅದರಲ್ಲೂ ಆಕೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರ ಜೊತೆಗೆ ಪುಷ್ಪಾ ಸಿನೆಮಾದಲ್ಲಿ ಕಾಣಿಸಿಕೊಂಡ ಬಳಿಕ ಆಕೆ ನ್ಯಾಷನಲ್ ಕ್ರಷ್ ಎಂಬ ಬಿರುದು ಸಹ ಪಡೆದುಕೊಂಡರು. ಬಳಿಕ ಬಾಲಿವುಡ್ ನಲ್ಲೂ ಸಹ ಭಾರಿ ಫೇಂ ಪಡೆದುಕೊಂಡರು. ಇತ್ತೀಚಿಗೆ ತೆರೆಕಂಡ ಬಾಲಿವುಡ್ ನ ಅನಿಮಲ್ ಸಿನೆಮಾದಲ್ಲಿ ರಶ್ಮಿಕಾ ರಣಬೀರ್‍ ಜೊತೆಗೆ ನಾಯಕಿಯಾಗಿ ನಟಿಸಿ ಮತಷ್ಟು ಸುದ್ದಿಯಾದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಬಾಲಿವುಡ್ ಗೆ ಹಾರಿದ ಬಳಿಕ ರಶ್ಮಿಕಾ ಮತಷ್ಟು ಹಾಟ್ ಅವತಾರ ತಾಳಿದ್ದಾರೆ ಎನ್ನಬಹುದಾಗಿದೆ.

ಇನ್ನೂ ರಶ್ಮಿಕಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಸದ್ಯ ಆಕೆ ಬ್ಲಾಕ್ ಕಲರ್‍ ಮಾಡ್ರನ್ ವೇರ್‍ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಆಕೆಯ ಮಾದಕ ನೋಟಕ್ಕೆ ಫಿದಾ ಆಗದೇ ಇರಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಆಕೆ ಈ ಪೊಟೊಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಪುಷ್ಪಾ ಶ್ರೀವಲ್ಲಿ ಈಸ್ ಫೈಯರ್‍ ಎಂದು ಕ್ರೇಜಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ರಶ್ಮಿಕಾ ಹುಟ್ಟುಹಬ್ಬ ಜರುಗಿದ್ದು, ಆಕೆಯ ಹುಟ್ಟುಹಬ್ಬದ ಅಂಗವಾಗಿ ಪುಷ್ಪಾ-2 ಸಿನೆಮಾದ ಲುಕ್ ರಿವೀಲ್ ಮಾಡಲಾಗಿತ್ತು. ಪುಷ್ಪಾ-1 ಕ್ಕಿಂತ ಪುಷ್ಪಾ-2 ಸಿನೆಮಾದಲ್ಲಿ ರಶ್ಮಿಕಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ ಆಕೆ ರೆಬೆಲ್ ಪಾತ್ರದಲ್ಲಿ ಸದ್ದು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಜೊತೆಗೆ ಆಕೆ ದಿ ಗರ್ಲ್‌ಫ್ರೆಂಡ್, ಚಾವಾ, ರೈನ್ ಬೋ ಸೇರಿದಂತೆ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.