Film News

ಅಲ್ಲು ಅರ್ಜುನ್ ಜೊತೆಗೆ ಕೋಟಿ ಕೊಟ್ಟರೂ ನಟಿಸೊಲ್ಲ ಎಂದ ಕ್ರೇಜಿ ಬ್ಯೂಟಿ ಶ್ರೀಲೀಲಾ, ಕಾರಣವಾದರೂ ಏನು?

ಸೌತ್ ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ಇದೆ ಎಂದು ಹೇಳಬಹುದಾಗಿದೆ. ಈ ಸಾಲಿಗೆ ಕ್ರೇಜಿ ಬ್ಯೂಟಿ ಶ್ರೀಲೀಲಾ ಸಹ ಸೇರುತ್ತಾರೆ. ಅದರಲ್ಲೂ ಟಾಲಿವುಡ್ ನಲ್ಲಿ ಶ್ರೀಲೀಲಾ ಭಾರಿ ಸದ್ದು ಮಾಡುತ್ತಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಶ್ರೀಲೀಲಾ ಸ್ಟಾರ್‍ ನಟಿಯರಿಗೂ ಪೈಪೋಟಿ ನೀಡುತ್ತಿದ್ದಾರೆ. ಇದೀಗ ಆಕೆ ಅಲ್ಲು ಅರ್ಜುನ್ ಜೊತೆಗೆ ನಟಿಸುವ ಅವಕಾಶ ಬಂದರೇ ಅದನ್ನು ರಿಜೆಕ್ಟ್ ಮಾಡಿದ್ದಾರಂತೆ ಕೋಟಿ ಕೊಟ್ಟರೂ ನಟಿಸೊಲ್ಲ ಎಂದಿದ್ದಾರೆ ಎನ್ನಲಾಗಿದೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ವೈರಲ್ ಆಗುತ್ತಿದ್ದು, ಅಷ್ಟಕ್ಕೂ ಶ್ರೀಲೀಲಾ ರಿಜೆಕ್ಟ್ ಮಾಡಿದ್ದಾರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ತೆಲುಗು ಸಿನಿರಂಗಕ್ಕೆ ನಟಿ ಶ್ರೀಲೀಲಾ ಸುನಾಮಿಯಂತೆ ಎಂಟ್ರಿ ಕೊಟ್ಟರು ಎಂದೇ ಹೇಳಬಹುದು. ಎಂಟ್ರಿ ಕೊಟ್ಟ ಮೊದಲ ಸಿನೆಮಾ ಫ್ಲಾಪ್ ಆದರೂ ಸಹ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುವ ಮೂಲಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜಿ ನಟಿಯಾಗಿದರು. ಜೊತೆಗೆ ಅನೇಕರ ನಟಿಯರಿಗೆ ಬಂದಂತಹ ಅವಕಾಶಗಳನ್ನು ಸಹ ಆಕೆ ತನ್ನ ತೆಕ್ಕೆಗೆ ಹಾಕಿಕೊಂಡರು ಎಂದೂ ಸಹ ಹೇಳಲಾಗುತ್ತಿದೆ. ಮೊದಲಿಗೆ ಒಳ್ಳೆಯ ಸಕ್ಸಸ್ ಕಂಡುಕೊಂಡ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಾಣುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಶ್ರೀಲೀಲಾ ಹಾಗೂ ಮೃಣಾಲ್ ಠಾಕೂರ್‍ ಹವಾ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಇದೀಗ ನಟಿ ಶ್ರೀಲೀಲಾ ಎರಡು ಕ್ರೇಜಿ ಆಫರ್‍ ಗಳನ್ನು ರಿಜೆಕ್ಟ್ ಮಾಡಿದ್ದಾರಂತೆ. ಅದರಲ್ಲಿ ಒಂದು ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಗಾಗಿ ಶ್ರೀಲೀಲಾ ಭಾರಿ ಸಂಭಾವನೆ ಸಹ ಆಫರ್‍ ಮಾಡಿದರಂತೆ. ಆದರೆ ಅದಕ್ಕೆ ಶ್ರೀಲೀಲಾ ನೋ ಎಂದಿದ್ದಾರಂತೆ.

ಜೊತೆಗೆ ಮತ್ತೊಂದು ಸ್ಟಾರ್‍ ಹಿರೋ ಸಿನೆಮಾದಲ್ಲೂ ಸಹ ಸ್ಪೇಷಲ್ ಸಾಂಗ್ ನಲ್ಲಿ ನಟಿಸೋಕೆ ಅವಕಾಶ ಬಂದಿತ್ತಂತೆ. ಆದರೆ ಆ ಆಫರ್‍ ಸಹ ಆಕೆ ರಿಜೆಕ್ಟ್ ಮಾಡಿದ್ದಾರಂತೆ. ಸದ್ಯ ಶ್ರೀಲೀಲಾ ಕೆರಿಯರ್‍ ಆರಂಭದ ಹಂತದಲ್ಲಿದೆ. ಇದೀಗ ಸ್ಪೇಷಲ್ ಸಾಂಗ್ಸ್ ಮಾಡುವುದು ಸರಿಯಲ್ಲ ಆದ್ದರಿಂದ ಶ್ರೀಲೀಲಾ ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಆಕೆ ಎಂಬಿಬಿಎಸ್ ಪರೀಕ್ಷೆಗಾಗಿ ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎಂದು ಕೇಳಿಬಂದಿತ್ತು. ಕೊನೆಯದಾಗಿ ಶ್ರೀಲೀಲಾ ಗುಂಟೂರು ಖಾರಂ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಈ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಸಹ ಪಡೆದುಕೊಂಡರು.

ಇನ್ನೂ ಶ್ರೀಲೀಲಾ ಕ್ರೇಜ್ ಇದೀಗ ಜೋರಾಗಿದೆ ಎನ್ನಬಹುದಾಗಿದೆ. ಸಿನೆಮಾಗೆ ಆಕೆ ಇಲ್ಲಿಯವರೆಗೂ ಒಂದೂವರೆ ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಇದೀಗ ಆಕೆ ಮುಂದಿನ ಸಿನೆಮಾಗಳಿಗಾಗಿ ಮೂರು ಕೋಟಿಯವರೆಗೂ ಪಡೆದುಕೊಳ್ಳುತ್ತಿದ್ದಾರಂತೆ. ಜೊತೆಗೆ ಆಕೆ ಯಾವುದಾದರೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೇ ಗಂಟೆಗೆ 10 ರಿಂದ 12 ಲಕ್ಷ ಪಡೆಯುತ್ತಾರಂತೆ. ಸದ್ಯ ಸೌತ್ ನಲ್ಲಿ ಸ್ಟಾರ್‍ ನಟಿಯರಿಗೆ ದೊಡ್ಡ ಪೈಪೋಟಿಯನ್ನೇ ನೀಡುತ್ತಿದ್ದಾರೆ ಎನ್ನಬಹುದಾಗಿದೆ.

Most Popular

To Top