ಕೋಟಿ ಕೋಟಿ ಸಂಬಳ ಬಯಸುವ ಅರ್ಹರಿಗೆ ಈ ದೇಶದಲ್ಲಿದೆ ಅವಕಾಶ, ಎಲ್ಲಿ ಗೊತ್ತಾ, ಈ ಸ್ಟೋರಿ ಓದಿ…..!

Follow Us :

ಎಲ್ಲಾ ಗ್ರಹಗಳಿಗಿಂತ ಭೂಮಿ ಅತ್ಯಂತ ಸುಂದರವಾದ ಗ್ರಹ ಎಂದೇ ಕರೆಯಲಾಗುತ್ತದೆ. ಈ ಭೂಮಿಯಲ್ಲಿ ಅನೇಕ ಸುಂದರವಾದ ದ್ವೀಪಗಳೂ ಸಹ ಇದೆ. ಅನೇಕರು ದ್ವೀಪಗಳಿಗೆ ಪ್ರವಾಸ ಸಹ ಕೈಗೊಳ್ಳುತ್ತಿರುತ್ತಾರೆ. ಈ ಪ್ರವಾಸಕ್ಕಾಗಿ ಲಕ್ಷಾಂತರ ಖರ್ಚು ಸಹ ಆಗುತ್ತದೆ. ಅಂತಹ ದ್ವೀಪವೊಂದರಲ್ಲಿ ಕೆಲಸ ಮಾಡಲು ಬಯಸುವಂತಹ ಅರ್ಹರಿಗೆ ಕೋಟಿ ಕೋಟಿ ಸಂಬಳ ಆಫರ್‍ ಮಾಡಲಾಗುತ್ತಿದೆಯಂತೆ. ಇದೀಗ ಆ ದ್ವೀಪ ಯಾವುದು ಎಂಬುದನ್ನು ತಿಳಿಯೋಣ.

ಸ್ಕಾಟ್ಲೆಂಡ್ ಎಂಬ ದೇಶದಲ್ಲಿ ಸುಂದರವಾದ ಉಯಿಸ್ಟ್ ಹಾಗೂ ಪೆನ್ಬೆಕುಲಾ ಎಂಬ ಎರಡು ದ್ವೀಪಗಳಿವೆ. ಈ ದ್ವೀಪಗಳಲ್ಲಿ ತುಂಬಾ ಕಡಿಮೆ ಜನರು ವಾಸ ಮಾಡುತ್ತಾರೆ. ಈ ದ್ವೀಪಗಳಿಗೆ ಬೇಸಿಗೆ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗಿದೆ. ಈ ದ್ವೀಪದಲ್ಲಿ ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುತ್ತದೆಯಂತೆ. ವಾರ್ಷಿಕ 1 ಕೋಟಿ ಸಂಭಾವನೆ ನೀಡಲಾಗುತ್ತದೆಯಂತೆ. ಸಂಬಳದ ಜೊತೆಗೆ 8 ಲಕ್ಷ ವರ್ಗಾವಣೆ ಭತ್ಯೆ, 13 ಲಕ್ಷ ಗ್ರಾಚ್ಯೂಟಿ ಹಾಗೂ 11 ಲಕ್ಷ  ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ. ಎಲ್ಲಾ ಸೇರಿಸಿದರೆ ಒಬ್ಬ ವೈದ್ಯರಿಗೆ ವಾರ್ಷಿಕ 1.5 ಕೋಟಿ ಸಂಭಾವನೆ ಸಿಗುತ್ತದೆ ಎನ್ನಲಾಗುತ್ತಿದೆ.

ಈ ಹುದ್ದೆಯನ್ನು ಪಡೆಯಲು ಹುದ್ದೆಗೆ ಬೇಕಾದ ಅಗತ್ಯ ಅರ್ಹತೆಯನ್ನು ಹೊಂದಿರಬೇಕಾಗುತ್ತದೆಯಂತೆ. ಜೊತೆಗೆ ಗ್ರಾಮೀಣ ಔಷಧದ ಬಗ್ಗೆ ಜ್ಞಾನ, ಕಡಲ ತೀರದ ಪ್ರದೇಶಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು. ವಿದೇಶಿಯರಿಗೆ ಮಾತ್ರ ಇಲ್ಲಿ ಕೆಲಸ ಮಾಡಲು ಅವಕಾಶವಿದೆಯಂತೆ. ವಾರಕ್ಕೆ ಕೇವಲ 4 ಗಂಟೆ ಮಾತ್ರ ಕೆಲಸ ಮಾಡಬೇಕಾಗುತ್ತದೆ ಎನ್ನಲಾಗಿದೆ. ಇನ್ನೂ ಈ ದ್ವೀಪದಲ್ಲಿ ಐದು ವಿದ್ಯಾರ್ಥಿಗಳಿಗೆ ಶಾಲೆಯೊಂದನ್ನು ನಡೆಸಲಾಗುತ್ತಿದೆಯಂತೆ. ಈ ಶಾಲೆಗೆ ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರನ್ನೂ ಸಹ ಹುಡುಕಲಾಗುತ್ತಿದೆಯಂತೆ. 5 ವರ್ಷದಿಂದ 11 ವರ್ಷದೊಳಗಿನ ಐದು ಮಂದಿ ವಿದ್ಯಾರ್ಥಿಗಳು ಓದುತ್ತಿದ್ದಾರಂತೆ. ಈ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವಾರ್ಷಿಕ 62 ಲಕ್ಷ ಸಂಭಾವನೆ ನೀಡಲಾಗುತ್ತದೆಯಂತೆ. ಇದೀಗ ಈ ಹುದ್ದೆಗಳ ಮಾಹಿತಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನಿಮಗೆ ಈ ಹುದ್ದೆಗಳ ಅರ್ಹತೆಯಿದ್ದರೇ ಅರ್ಜಿ ಸಲ್ಲಿಸಬಹುದಾಗಿದ್ದು, ಕೆಲವೊಂದು ಷರತ್ತುಗಳನ್ನು ಸಹ ಒಪ್ಪಿ ಸಹಿ ಮಾಡಬೇಕಾಗಿದೆಯಂತೆ.