Film News

ಎಲ್ಲರೂ ಅಂದುಕೊಂಡಂತೆ ವಿಜಯ್ ದೇವರಕೊಂಡಂತೆ ಅಂತಹವನಲ್ಲ, ವಿಜಯ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಸಮಂತಾ…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಸದ್ಯ ಸಿನೆಮಾಗಳಿಂದ ದೂರವುಳಿದು ಅಮೇರಿಕಾದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಆಕೆ ಒಪ್ಪಿಕೊಂಡಿದ್ದ ಖುಷಿ ಹಾಗೂ ಸಿಟಾಡೆಲ್ ವೆಬ್ ಸಿರೀಸ್ ಶೂಟಿಂಗ್ ಮುಗಿಸಿ ಅಮೇರಿಕಾಗೆ ಹೋಗಿದ್ದಾರೆ. ಇನ್ನೂ ಅಮೇರಿಕಾದಲ್ಲಿ ಆಕೆ ಪುಲ್ ಹ್ಯಾಪಿ ಮೋಡ್ ನಲ್ಲಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಆಕೆ ವಿಜಯ್ ದೇವರಕೊಂಡ ಬಗ್ಗೆ ಹೇಳಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಮಹಾನಟಿ ಸಿನೆಮಾದಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಜೊತೆಗೆ ನಟಿಸಿದ್ದರು. ಈ ಸಿನೆಮಾದ ಬಳಿಕ ಈ ಜೋಡಿ ಖುಷಿ ಎಂಬ ಸಿನೆಮಾದಲ್ಲಿ ಮತ್ತೊಮ್ಮೆ ನಟಿಸಿದ್ದಾರೆ. ಐದು ವರ್ಷಗಳ ಬಳಿಕ ಈ ಜೋಡಿ ಖುಷಿ ಎಂಬ ರೊಮ್ಯಾಂಟಿಕ್ ಸಿನೆಮಾದ ಮೂಲಕ ಒಂದಾಗಿದ್ದಾರೆ.  ಶಿವ ನಿರ್ವಾಣ ನಿರ್ದೆಶನದಲ್ಲಿ ಮೂಡಿ ಬಂದ ಈ ಸಿನೆಮಾ ಇದೇ ಸೆ.1 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಹೈದರಾಬಾದ್ ನಲ್ಲಿ ಮ್ಯೂಜಿಕಲ್ ಕಾನ್ಸರ್ಟ್ ಎಂಬ ಕಾರ್ಯಕ್ರಮ ಸಹ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ವಿಜಯ್ ಹಾಗೂ ಸಮಂತಾ ರೊಮ್ಯಾಂಟಿಕ್ ಡ್ಯಾನ್ಸ್ ಸಹ ಸಖತ್ ಸದ್ದು ಮಾಡಿತ್ತು. ಇದು ಓವರ್‍ ಆಯ್ತು ಎಂಬ ವಿಮರ್ಶೆಗಳೂ ಸಹ ಕೇಳಿಬಂದಿದೆ.

ಇನ್ನೂಇತ್ತಿಚಿಗೆ ಸಮಂತಾ ಕಾಲಿವುಡ್ ಮಿಡಿಯಾದೊಂದಿಗೆ ಮಾತನಾಡುತ್ತಾ ವಿಜಯ್ ದೇವರಕೊಂಡ ಲಕ್ಷಣಗಳ ಬಗ್ಗೆ ಕೊಂಡಾಡಿದ್ದಾರೆ. ವಿಜಯ್ ದೇವರಕೊಂಡ ಮಿಸ್ಟರ್‍ ಫರ್ಪೆಕ್ಟ್ ಎಂದು ಹೇಳಿದ್ದಾರೆ. ಎಲ್ಲರೂ ಅಂದುಕೊಂಡಗೆ ವಿಜಯ್ ರೌಡಿ, ರೆಬಲ್ ಅಲ್ಲ. ಎಲ್ಲರೂ ವಿಜಯ್ ದೇವರಕೊಂಡ ರವರನ್ನು ರೌಡಿ ಎಂದು ಕರೆಯುತ್ತಿದ್ದರೇ ನಾನು ಆತ ತುಂಬಾ ರೆಬೆಲ್ ಅಂದುಕೊಂಡಿದ್ದೆ. ಆದರೆ ವಿಜಯ್ ತುಂಬಾ ಒಳ್ಳೆಯವನು. ಆತನಿಗೆ ಒಂದು ಕೆಟ್ಟ ಅಭ್ಯಾಸವಿಲ್ಲ. ಪ್ರತಿನಿತ್ಯ ವ್ಯಾಯಾಮ ಮಾಡುತ್ತಾನೆ. ಆತನ ಬಗ್ಗೆ ತಿಳಿದ ಮೇಲೆ ನನ್ನ ಅಭಿಪ್ರಾಯ ಸಂಪೂರ್ಣವಾಗಿ ಬದಲಾಯ್ತು. ಆತನ ವ್ಯಕ್ತಿತ್ವದ ಬಗ್ಗೆ ತಿಳಿದ ಬಳಿಕ ನಾನೇ ಶಾಕ್ ಆದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಸಮಂತಾ ಹಂಚಿಕೊಂಡ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ವಿಜಯ್ ದೇವರಕೊಂಡ ಕೆಲವೊಂದು ಕಾರ್ಯಕ್ರಮಗಳಲ್ಲೂ ರಗಡ್ ಆಗಿಯೇ ಮಾತನಾಡುತ್ತಿರುತ್ತಾರೆ. ಆತ ಮಾತನಾಡುವ ವಿಧಾನ ನೋಡಿದರೇ ಆತನ ಭಾರಿ ಆಟಿಟ್ಯೂಡ್, ಆಲ್ಕೋಹಾಲಿಕ್ ಮೊದಲಾದ ಅಭ್ಯಾಸಗಳಿವೆ ಎಂದು ಅನೇಕರು ಭಾವಿಸುತ್ತಿರುತ್ತಾರೆ. ಇದೀಗ ಸಮಂತಾ ವಿಜಯ್ ದೇವರಕೊಂಡ ಬಗ್ಗೆ ನೀಡಿದ ಕಾಮೆಂಟ್ ಗಳ ಮೂಲಕ ಆ ಅಭಿಪ್ರಾಯ ಬದಲಾಗುವಂತೆ ಮಾಡಿದ್ದಾರೆ. ಇನ್ನೂ ಸಮಂತಾ ನೀಡಿರುವ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top