News

ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಗೆ ಬಿಗ್ ಶಾಕ್, ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ?

ಕೋವಿಡ್ ಮಹಾಮಾರಿ ಹಾವಳಿಯ ವೇಳೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತ ಭಾರಿ ಸುದ್ದಿಯಾಗಿತ್ತು. ಇದೀಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಕೋವಿಡ್ ಸಮಯದಲ್ಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಆಯೋಗ ರಚನೆ ಮಾಡಲು ತೀರ್ಮಾನ ಮಾಡಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ತನಿಖೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದ್ದು, ಇದರಿಂದ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‍ ರವರಿಗೆ ಶಾಕ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಕುರಿತು ಇತ್ತೀಚಿಗಷ್ಟೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಕೋವಿಡ್ ಸಮಯದಲ್ಲಾದ ಅಕ್ರಮಗಳನ್ನು ತನಿಖೆ ಮಾಡಲು ಆಯೋಗ ರಚನೆ ಮಾಡಲಾಗುತ್ತದೆ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಕೊಟ್ಟ ವರದಿಯಂತೆ ತನಿಖೆ ನಡೆಸಲು ತೀರ್ಮಾನ ಮಾಡಲಾಗಿದೆ. ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಈ ಆಯೋಗ ತನಿಖೆ ನಡೆಸುವುದಿಲ್ಲ. ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ನಡೆಯುತ್ತದೆ. ಶೀಘ್ರದಲ್ಲೇ ಆಯೋಗ ತನಿಖೆ ನಡೆಸಲಿದೆ. ಇನ್ನೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ವರದಿಯಲ್ಲಿ ಏನಿದೆ, ಜನರಿಂದ ಕೇಳಿಬಂದ ಆರೋಪಗಳೆಲ್ಲದರ ಬಗ್ಗೆ ತನಿಖೆ ಪ್ರಮಾಣಿಕವಾಗಿ ನಡೆಯಲಿದೆ. ಈ ತನಿಖೆಯಿಂದ ಸ್ಪಷ್ಟವಾದ ಮಾಹಿತಿ ಸಿಗಲಿದೆ. ಕೋವಿಡ್ ನಿರ್ವಹಣೆಯಲ್ಲಿ ಏನಾಗಿದೆ ಎಂಬುದನ್ನು ಈಗ ನಾನು ಮಂತ್ರಿಯಾಗಿದ್ದುಕೊಂಡು ಹೇಳುವುದು ಸೂಕ್ತವಲ್ಲ. ನಾನು ಅನಾವಶ್ಯಕವಾಗಿ ಮಾತಾಡೊಲ್ಲ. ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರೊಲ್ಲ ಎಂದು ತಿಳಿಸಿದ್ದಾರೆ.

ಇನ್ನೂ ಚಾಮರಾಜನಗರ ಆಕ್ಸಿಜನ್ ದುರಂತದ ಸಮಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಮಾಜಿ ಸಚಿವ ಡಾ.ಕೆ.ಸುಧಾಕರ್‍ ಆರೋಗ್ಯ ಸಚಿವರಾಗಿದ್ದರು. ಅಂದು ಸಹ ಕಾಂಗ್ರೇಸ್ ಸರ್ಕಾರ ತೀವ್ರ ವಾಗ್ಡಾಳಿ ನಡೆಸಿತ್ತು. ಇದೀಗ ಚಾಮರಾಜನಗರ ಆಕ್ಸಿಜನ್ ದುರಂತವನ್ನು ಪ್ರತ್ಯೇಕವಾಗಿ ತನಿಖೆ ನಡೆಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುಳಿವು ನೀಡಿದ್ದು, ಇದರಿಂದ ಡಾ.ಕೆ.ಸುಧಾಕರ್‍ ರವರಿಗೆ ಸಮಸ್ಯೆ ಉಂಟಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top