ನಿಮ್ಮನ್ನು ನೋಡಿ, ನಿಮಗೆ ಸೆಲ್ಯೂಟ್ ಮಾಡಲು ನಿರ್ಧಾರ ಮಾಡಿದ್ದೆ ಎಂದು ಭಾವುಕರಾದ ಪ್ರಧಾನಿ ಮೋದಿ…..!

Follow Us :

ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಿವಂತೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿಗೆ ಆಗಮಿಸಿದ್ದರು. ಇಸ್ರೋ ತಂಡದ ವಿಜ್ಞಾನಿಗಳನ್ನು ಮೋದಿ ಮನಸಾರೆ ಅಭಿನಂದಿಸಿದ್ದಾರೆ. ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ರವರ ಕೈಕುಲಕಿ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಇದೇ ವೇಳೆ ಮೋದಿ ಭಾವುಕ ನುಡಿಗಳನ್ನಾಡಿದ್ದಾರೆ.

ಇಂದು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಮೋದಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹಾಗೂ ಚಂದ್ರಯಾನ-3 ರಲ್ಲಿ ತೊಡಗಿಸಿಕೊಂಡಿದ್ದ ತಂಡದ ಇತರೆ ವಿಜ್ಞಾನಿಗಳನ್ನು ಭೇಟಿ ಮಾಡಿದರು. ಚಂದ್ರಯಾನ ಯಶಸ್ವಿಗೊಳಿಸಿದಕ್ಕೆ ವಿಜ್ಞಾನಿಗಳನ್ನು ಅಭಿನಂದಿಸಿದರು. ಬಳಿಕ ಮೋದಿ ಮಾತನಾಡಿ ನಾನು ಇಂದು ವಿಶೇಷ ರೀತಿಯಲ್ಲಿ ಸಂತೋಷ ಅನುಭವಿಸುತ್ತಿದ್ದೇನೆ. ಇಂತಹ ಕ್ಷಣಗಳು ಬರುವುದು ತುಂಬಾನೆ ಅಪರೂಪ. ನಾನು ಈ ಬಾರಿ ತುಂಬಾ ಚಂಚಲನಾಗಿದ್ದೆ. ನಾನು ದಕ್ಷಿಣ ಆಫ್ರಿಯಾದಲ್ಲಿದ್ದೆ. ಆದರೆ ನನ್ನ ಮನಸ್ಸು ನಿಮ್ಮೊಂದಿಗೆ ಇತ್ತು. ಕೆಲವೊಮ್ಮೆ ನಾನು ನಿಮಗೆ ಅನ್ಯಾಯ ಮಾಡುತ್ತೇನೆ ಎಂದು ನನಗೆ ಅನಿಸುತ್ತದೆ. ನಿಮ್ಮನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿದೆ. ನಾನು ಭಾರತಕ್ಕೆ ಬಂದ ಕೂಡಲೇ ನಿಮ್ಮ ಬೇಗ ಭೇಟಿ ಮಾಡಿ, ನಿಮಗೆ ಸೆಲ್ಯೂಟ್ ಮಾಡಲು ತೀರ್ಮಾನ ಮಾಡಿದೆ. ನಿಮ್ಮ ಶ್ರಮಕ್ಕೆ, ನಿಮ್ಮ ಚೈತನ್ಯಕ್ಕೆ, ನಿಮ್ಮ ಉತ್ಸಾಹಕ್ಕೆ ಸೆಲ್ಯೂಟ್ ಎಂದು ನಮ್ಮ ದೇಶಕ್ಕೂ ಸೆಲ್ಯೂಟ್ ಎಂದು ಭಾವುಕರಾದರು.

ಅಷ್ಟೇಅಲ್ಲದೇ ನೀವು ದೇಶವನ್ನು ತುಂಬಾ ಎತ್ತರಕ್ಕೆ ಕೊಂಡೊಯ್ದಿದ್ದೀರಾ, ಯಾರೂ ತಲುಪದ ಸ್ಥಳಕ್ಕೆ ನಾವು ತಲುಪಿದ್ದೇವೆ. ಯಾರು ಮಾಡದ ಕೆಲಸ ನಾವು ಮಾಡಿದ್ದೇವೆ. ಇದು ಇಂದಿನ ಭಾರತ, ನಿರ್ಭೀತ ಮತ್ತು ಹೋರಾಟದ ಭಾರತ, ಹೊಸದಾಗಿ ಯೋಚಿಸುವಂತಹ ಭಾರತವಾಗಿದೆ. ಆಗಸ್ಟ್ 23 ರನ್ನು ಯಾರು ಮರೆಯಲು ಸಾಧ್ಯವಿಲ್ಲ. ಇಡೀ ದೇಶವೇ ಈ ದೃಶ್ಯವನ್ನು ಮರೆಯಲು ಹೇಗೆ ಸಾಧ್ಯ. ಕೆಲವೊಂದು ನೆನಪುಗಳು ಅಮರವಾಗುತ್ತವೆ. ಅದರಂತೆ ಚಂದ್ರಯಾನ-3 ಸಹ ಅಮರವಾಗಿದೆ. ಈ ಶತಮಾನಕ್ಕೆ ಈ ಕ್ಷಣ ಸ್ಪೂರ್ತಿಯಾಗಿದೆ. ಇಡೀ ಜಗತ್ತು ನಮ್ಮ ವಿಜ್ಞಾನಿಗಳು ತಂತ್ರಜ್ಞಾನದಲ್ಲಿ ಕಬ್ಬಿಣ ಎಂದು ಒಪ್ಪಿದ್ದಾರೆ ಎಂದು ಮೋದಿ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ಇನ್ನೂ ಚಂದ್ರನ ಮೇಲೆ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಕರೆಯಲಾಗುತ್ತದೆ. ಎಲ್ಲೆಲ್ಲೂ ತ್ರಿರಂಗಾ, ಪ್ರತಿ ಭಾರತೀಯನಲ್ಲೂ ತ್ರಿರಂಗಾ, ಇದೀಗ ಚಂದ್ರನ ಮೇಲೂ ತ್ರಿರಂಗ ಎನ್ನುತ್ತಾ, ಮೇರಿ ಆಂಖೋಂ ಕೆ ಸಾಮ್ನೆ 23 ಆಗಸ್ಟ್ ಕಾ ವೋ ದಿನ್ ವೋ ಏಕ್ ಏಕ್ ಸೆಕೆಂಡ್ ಬಾರ್‍ ಬಾರ್‍ ಘೂಮ್ ರಹಾ ಹೈ ಎಂದು ಇಸ್ರೋ ವಿಜ್ಞಾನಿಗಳನ್ನು ಹುರಿದುಂಬಿಸಿದರು. ಇನ್ನೂ ಮೋದಿ ಮಾತನಾಡುವುದಕ್ಕೂ ಮುಂಚೆ ಇಸ್ರೋ ಕಂಆಂಡ್ ಸೆಂಟರ್‍ ತಲುಪಿ ಇಸ್ರೋ ಮುಖ್ಯಸ್ಥರ ಬೆನ್ನು ತಟ್ಟಿದರು. ಇಸ್ರೋ ಮುಖ್ಯಸ್ಥ ಸೋಮನಾಥ್ ರವರು ಚಂದ್ರಯಾನ ಯೋಜನೆ ಕುರಿತು ಇಂಚಿಂಚು ಮಾಹಿತಿ ನೀಡಿದರು.