ಅಪ್ರಾಪ್ತರ ಲವ್, ಪ್ರೀತಿ ನಿರಾಕರಣೆ ಮಾಡಿದ10ನೇ ತರಗತಿ ಬಾಲಕಿಯ ಕತ್ತು ಕೊಯ್ದ 9ನೇ ತರಗತಿ ಹುಡುಗ…!

ಪ್ರೀತಿಗಾಗಿ ಆತ್ಮಹತ್ಯೆಗಳು, ಕೊಲೆಗಳು, ಗಲಾಟೆಗಳು ನಡೆಯುತ್ತಿರುವ ಬಗ್ಗೆ ಸುದ್ದಿಗಳನ್ನು ನೋಡಿರುತ್ತೇವೆ. ಇಲ್ಲಿ ಅಪ್ರಾಪ್ತರು ಪ್ರೀತಿ ಕಾರಣದಿಂದ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ, 9ನೇ ತರಗತಿಯ ವಿದ್ಯಾರ್ಥಿ ಪ್ರೀತಿ ಮಾಡಲು ಒಪ್ಪಲಿಲ್ಲ ಎಂಬ ಕಾರಣದಿಂದ ಆಕೆಯ ಕತ್ತು ಕೊಯ್ಡು ಕೊಲೆಗೆ ಯತ್ನಿಸಿದ್ದಾನೆ.

ಈ ಘಟನೆ ಕಲಬುರಗಿಯಲ್ಲಿ ನಡೆದಿದೆ ಎನ್ನಲಾಗಿದ್ದು, ಸಿನಿಮೀಯ ರೀತಿಯಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಚಾಕು ಇರಿದು ಕೊಲೆಗೆ ಯತ್ನಿಸಿದ್ದಾನೆ. ತನ್ನ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಬಾಲಕ ಈ ಕೃತ್ಯವೆಸಗಿದ್ದಾನೆ. ಬಸ್ ನಲ್ಲಿ ತೆರಳುತ್ತಿದ್ದ ಅಪ್ರಾಪ್ತೆಯನ್ನು ಬಸ್ ನಿಂದ ಕೆಳಗೆ ಇಳಿಸಿಕೊಂಡಿದ್ದು, ಈ ಸಮಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಚಾಕು ಇರಿದಿದ್ದಾರೆ. ಕಲಬುರಗಿ ಜಿಲ್ಲೆಯ ಅಟ್ಟೂರು ಕ್ರಾಸ್ ಬಳಿ ಬೈಕ್ ನಲ್ಲಿ ಬಂದು ಬಾಲಕಿಯ ಕತ್ತು ಕೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆ ಮಾಡಲು ಯತ್ನಿಸಿದ ಅಪ್ರಾಪ್ತ ಬಾಲಕ, ಹಲ್ಲೆಗೆ ಒಳಗಾದ ಬಾಲಕಿಯ ಬಳಿ ತನ್ನನ್ನು ಪ್ರೀತಿಸುವಂತೆ ಕೋರಿದ್ದಾನೆ. ಅದಕ್ಕೆ ಬಾಲಕಿ ಒಪ್ಪಿಕೊಂಡಿರಲಿಲ್ಲ. ಇದರಿಂದ ಕೋಪಗೊಂಡ ಬಾಲಕ ಬಾಲಕಿಯನ್ನು ಬಸ್ ನಿಂದ ಕೆಳಗಿಳಿಸಿ ಕತ್ತು ಕೊಯ್ದಿದ್ದಾನೆ. ಬಳಿಕ ತನಗೆ ಏನು ತಿಳಿದಿಲ್ಲ. ಏನು ನಡದೇ ಇಲ್ಲ ಎನ್ನುವಂತೆ ಶಾಲೆಗೆ ಹೋಗಿ ತಮ್ಮ ತರಗತಿಯಲ್ಲಿ ಕುಳಿತಿದ್ದಾನೆ. ಸದ್ಯ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕನ್ನು ಕ್ಲಾಸ್ ರೂಂ ನಿಂದ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.