ಇನ್ನು ಮುಂದೆ ಅಂತಹ ಹಾಡುಗಳಲ್ಲಿ ನೃತ್ಯ ಮಾಡೋಲ್ಲ ಎಂದ ಸಮಂತಾ, ವೈರಲ್ ಆದ ಕಾಮೆಂಟ್ಸ್……!

Follow Us :

ಸ್ಟಾರ್‍ ನಟಿ ಸಮಂತಾ ಏ ಮಾಯಾ ಚೆಸ್ಯಾವೋ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಂದಿನಿಂದ ಆಕೆ ನಟಿಸಿದ ಬಹುತೇಕ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿವೆ. ಸಿನೆಮಾಗಳಲ್ಲಿ ಆಕೆ ಎಷ್ಟು ಫೇಮಸ್ ಆದರೋ ಅದೇ ರೀತಿ ವೈಯುಕ್ತಿಕ ಜೀವನದಲ್ಲೂ ಸಹ ಆಕೆ ಸುದ್ದಿಯಾಗಿದ್ದರು. ಕೆಲವೊಂದು ವೈಯುಕ್ತಿಕ ಸಮಸ್ಯೆಗಳಿಂದ ಆಕೆ ತುಂಬಾನೆ ನೋವು ಪಡೆದುಕೊಂಡರು. ಇದೀಗ ಆಕೆ ಅಂತಹ ಹಾಡುಗಳಲ್ಲಿ ನೃತ್ಯ ಮಾಡೋಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಸಮಂತಾ ನಟ ಅಕ್ಕಿನೇನಿ ನಾಗಾರ್ಜುನ್ ರವರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾದ ಬಳಿಕ ಈ ಜೋಡಿ ಕೆಲವು ವರ್ಷಗಳ ಕಾಲ ಸಂತೋಷದಿಂದ ಜೀವನ ಸಾಗಿಸಿದ್ದರು. ಬಳಿಕ ಇಬ್ಬರ ನಡುವೆ ವಿಬೇಧಗಳು ಉಂಟಾಗಿ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನಕ್ಕೆ ಸಮಂತಾ ನೇ ಕಾರಣ ಎಂದು ಅಕ್ಕಿನೇನಿ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಆಕೆಯನ್ನು ತುಂಬಾನೆ ಟ್ರೋಲ್ ಮಾಡಿದ್ದರು. ಈ ಕಾರಣದಿಂದ ಆಕೆ ಮಾನಸಿಕ ಖಿನ್ನತೆಗೆ ಸಹ ಗುರಿಯಾಗಿದ್ದರು. ಇದು ಮಾಸುವ ಮುನ್ನವೇ ಆಕೆ ಮಯೋಸೈಟೀಸ್ ಎಂಬ ಮಾರಕ ಕಾಯಿಲೆಗೆ ತುತ್ತಾದರು. ಈ ವ್ಯಾದಿಯ ಕಾರಣದಿಂದ ಸುಮಾರು ದಿನಗಳ ಕಾಲ ಅಜ್ಞಾತದಲ್ಲಿದ್ದರು. ಇದೀಗ ಆಕೆ ಈ ವ್ಯಾಧಿಯಿಂದ ಗುಣಮುಖರಾಗಿದ್ದು, ಶೀಘ್ರದಲ್ಲೇ ಮತ್ತೆ ಸಿನೆಮಾಗಳಲ್ಲಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಸಮಂತಾ ಮೊದಲ ಬಾರಿ ಪುಷ್ಪಾ ಸಿನೆಮಾದಲ್ಲಿ ಊ ಅಂಟಾವ ಮಾವ ಎಂಬ ಹಾಡಿನಲ್ಲಿ ಸೆಕ್ಸಿಯಾಗಿ ಕುಣಿದಿದ್ದರು. ಈ ಹಾಡಿಗೆ ಆಕೆ ಮಾದಕತೆಯನ್ನು ತುಂಬಿಕೊಂಡು ನೃತ್ಯ ಮಾಡಿದ್ದು, ಈ ಹಾಡು ಇಡೀ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಹಾಡಿನ ಬಗ್ಗೆ ಸಮಂತಾ ಮಾತನಾಡಿದ್ದಾರೆ. ಈ ಹಾಡಿನ ಶೂಟಿಂಗ್ ಸಮಯದಲ್ಲಿ ತುಂಬಾ ಹೆದರಿದ್ದೆ. ಮೈ ನಡುಗುತ್ತಿತ್ತು. ಅದಕ್ಕೆ ನಾನು ಆರೋಗ್ಯವಾಗಿರಲಿಲ್ಲ. ಅದು ನನಗೆ ದೊಡ್ಡ ಸವಾಲಾಗಿತ್ತು. ಆದರೆ ಇನ್ನು ಮುಂದೆ ಅಂತಹ ಹಾಡುಗಳಲ್ಲಿ ನಾನು ನಟಿಸೊಲ್ಲ. ನನ್ನ ದೇಹ ಸೆಕ್ಸಿಯಾಗಿಲ್ಲ. ಮಾದಕತೆ ಎಂಬುದು ನನಗೆ ದೂರ, ನಾನು ಅದರಲ್ಲಿ ಇರೋಕೆ ಇಷ್ಟ ಪಡೊಲ್ಲ ಆದ್ದರಿಂದ ಅಂತಹ ಹಾಡುಗಳಲ್ಲಿ ಮತ್ತೆ ಎಂದೂ ನಟಿಸೊಲ್ಲ ಎಂದು ಸಮಂತಾ ಹೇಳಿದ್ದು, ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ಇನ್ನೂ ಸಮಂತಾ ಮಯೋಸೈಟೀಸ್ ವ್ಯಾದಿಗೆ ಗುರಿಯಾದ ಕಾರಣ ಆಕೆ ತುಂಬಾನೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಆಕೆಯ ದೇಹದ ಸೌಂದರ್ಯ ಸಹ ಕುಗ್ಗುತ್ತಿದೆ ಎನ್ನಲಾಗಿದೆ. ಆದ್ದರಿಂದ ಆಕೆ ಒಂದು ವರ್ಷದ ಕಾಲ ಸಿನೆಮಾಗಳಿಂದ ಬ್ರೇಕ್ ಸಹ ಪಡೆದುಕೊಂಡಿದ್ದಾರೆ. ಇದೀಗ ಆಕೆ ಆರೋಗ್ಯಕರವಾಗಿ ಬದಲಾಗಿದ್ದಾರೆ. ಮತ್ತೆ ಶೀಘ್ರದಲ್ಲೇ ಸಿನೆಮಾಗಳಲ್ಲಿ ಬರುವುದಾಗಿ ಹೇಳಿದ್ದಾರೆ.