ಪವನ್ ಕಲ್ಯಾಣ್ ರಾಜಕೀಯಕ್ಕೆ ಬಂದಿದ್ದು ಪ್ರಜೆಗಳ ಅದೃಷ್ಟ, ಪವನ್ ಕಲ್ಯಾಣ್ ಸಿಎಂ ಆಗಬೇಕು ಎಂದ ಅನನ್ಯಾ ನಾಗಳ್ಳ…..!

ಟಾಲಿವುಡ್ ಯಂಗ್ ಬ್ಯೂಟಿ ಅನನ್ಯ ನಾಗಳ್ಳ ಸದ್ಯ ಸೋಷಿಯಲ್ ಮಿಡಿಯಾದ ಮೂಲಕ ಎಲ್ಲರ ಕ್ರಷ್ ಆಗಿಬಿಟ್ಟಿದ್ದಾರೆ. ವಕೀಲ್ ಸಾಭ್ ಸಿನೆಮಾದ ಬಳಿಕ ಅನನ್ಯ ಕ್ರೇಜ್ ಮತಷ್ಟು ಹೆಚ್ಚಾಗಿದೆ. ಇದೀಗ ಸಿನೆಮಾಗಳಲ್ಲಿ ಆಕೆ ತನ್ನದೇ ಆದ ಕ್ರೇಜ್ ದಕ್ಕಿಸಿಕೊಳ್ಳುತ್ತಾ ಸಿನಿರಂಗದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಜತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದು ಆಕೆ ತನ್ನ ಗ್ಲಾಮರ್‍ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ಪವನ್ ಕಲ್ಯಾಣ್ ರವರು ಸಿಎಂ ಆಗಬೇಕು ಎಂದು ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಅನನ್ಯಾ ನಾಗಳ್ಳ ಆಂಧ್ರಪ್ರದೇಶದ 2019 ರ ಚುನಾವಣೆಯ ಬಳಿಕ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿತ್ತು. ಈ ಸಿನೆಮಾದ ಮೂಲಕ ಅನನ್ಯಾ ನಾಗಳ್ಳಗೂ ಒಳ್ಳೆಯ ಹೆಸರು ಬಂದಿತ್ತು. ಇದೀಗ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಈ ಬಾರಿ ಪವನ್ ಕಲ್ಯಾಣ್ ಪಿಠಾಪುರಂ ಕ್ಷೇತ್ರದಿಂದ ಜನಸೇನಾ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ ರವರ ರಾಜಕೀಯದ ಎಂಟ್ರಿ ಬಗ್ಗೆ ಅನನ್ಯಾ ನಾಗಳ್ಳ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಸದ್ಯ ಅನನ್ಯಾ ನಾಗಳ್ಳ ತಂತ್ರ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ನಲ್ಲಿ ಆಕೆ ಮಾಡಿದ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ತಂತ್ರ ಸಿನೆಮಾದ ಪ್ರಮೋಷನ್ ನಲ್ಲಿ ಅನನ್ಯ ನಾಗಳ್ಳ ನೀಡಿದ ಕಾಮೆಂಟ್ ಗಳು ಇದೀಗ ಹಾಟ್ ಟಾಪಿಕ್ ಆಗಿದೆ. ಪವನ್ ಕಲ್ಯಾಣ್ ರವರು ಆಂಧ್ರಪ್ರದೇಶದ ಸಿಎಂ ಆಗಬೇಕು. ಪವನ್ ಕಲ್ಯಾಣ್ ರವರು ಸಿನೆಮಾಗಳಿಗಿಂತ ರಾಜಕೀಯದ ಮೇಲೆ ತುಂಬಾ ಆಸಕ್ತಿ ಹೊಂದಿದ್ದಾರೆ. ಪವನ್ ಕಲ್ಯಾಣ್ ರವರಂತಹ ಒಳ್ಳೆಯ ವ್ಯಕ್ತಿ ರಾಜಕೀಯಕ್ಕೆ ಬಂದಿರುವುದು ಜನರ ಅದೃಷ್ಟ. ಪ್ರಜೆಗಳಿಂದ ಅವರಿಗೆ ಒಳ್ಳೆಯ ಬೆಂಬಲ ದೊರೆಯಬೇಕು. ಅವರು ಮುಖ್ಯಮಂತ್ರಿಯಾಗಬೇಕೆಂದು ನಾನು ಬಲವಾಗಿ ಪ್ರಾರ್ಥಿಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಪವನ್ ಕಲ್ಯಾಣ್ ಅಭಿಮಾನಿಗಳು  ಅನನ್ಯಾ ನಾಗಳ್ಳ ಕಾಮೆಂಟ್ ಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಅನನ್ಯಾ ನಾಗಳ್ಳ ಅಭಿನಯದ ತಂತ್ರ ಸಿನೆಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಕೆಲವರು ಈ ಸಿನೆಮಾದ ಬಗ್ಗೆ ನೆಗೆಟೀವ್ ಕಾಮೆಂಟ್ಸ್ ಮಾಡುತ್ತಿದ್ದರೇ, ಮತ್ತೆ ಕೆಲವರು ಪಾಸಿಟೀವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಅನನ್ಯಾ ನಾಗಳ್ಳ ಸರಿಯಾದ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಾ ಮೇಕರ್ಸ್ ಗಮನ ಸಹ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.