ಆ ಸಮಯದಲ್ಲಿ ನನ್ನ ಇಷ್ಟಗಳನ್ನು ತಿಳಿದುಕೊಳ್ಳಲು ವಿಫಲವಾಗಿದ್ದೆ ಎಂದ ಸಮಂತಾ, ವೈರಲ್ ಆದ ಕಾಮೆಂಟ್ಸ್……!

Follow Us :

ಸ್ಟಾರ್‍ ನಟಿ ಸಮಂತಾ ಕಳೆದೆರಡು ವರ್ಷಗಳಿಂದ ತಮ್ಮ ವೈಯುಕ್ತಿಕ ವಿಚಾರಗಳಿಂದ ಸದಾ ಸುದ್ದಿಯಲ್ಲೇ ಇದ್ದಾರೆ. ಪ್ರೀತಿಸಿ ಮದುವೆಯಾದ ನಾಗಚೈತನ್ಯ ಜೊತೆಗೆ ವಿಚ್ಚೇದನ ಬಳಿಕ ಮಯೋಸೈಟೀಸ್ ವ್ಯಾಧಿಗೆ ತುತ್ತಾಗಿ ತುಂಬಾ ಸಮಸ್ಯೆಯನ್ನು ಎದುರಿಸಿದ್ದರು. ಇದೀಗ ಆಕೆ ಸಂಪೂರ್ಣ ಆರೋಗ್ಯದ ದೃಷ್ಟಿಯಿಂದ ಒಂದು ವರ್ಷ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಈ ಹಿಂದೆ ನನ್ನ ಇಷ್ಟಗಳನ್ನು ತಿಳಿದುಕೊಳ್ಳಲು ವಿಫಲವಾಗಿದ್ದೆ ಎಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ದೇಶದ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಸದ್ಯ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಆರೋಗ್ಯದ ಕಾರಣದಿಂದ ಕೆಲವು ದಿನಗಳ ಕಾಲ ಅಮೇರಿಕಾ, ಭೂತಾನ್ ದೇಶಗಳಲ್ಲಿ ಮಯೋಸೈಟೀಸ್ ವ್ಯಾದಿಗೆ ಚಿಕಿತ್ಸೆಯನ್ನು ಸಹ ಪಡೆದುಕೊಂಡಿದ್ದರು. ಇದೀಗ ಆಕೆ ವಿಶ್ರಾಂತಿಯಲ್ಲಿದ್ದಾರೆ. ಸಿನೆಮಾಗಳಿಂದ ದೂರವೇ ಉಳಿದರೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಸೇರಿದಂತೆ ತನ್ನ ಬಗ್ಗೆ ಅಪ್ಡೇಟ್ ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಕೆಲವೊಂದು ಜಾಹಿರಾತಿನಲ್ಲಿ ಬೋಲ್ಡ್ ಆಗಿಯೇ ನಟಿಸುತ್ತಿದ್ದಾರೆ. ಇದೀಗ ಆಕೆ ತನ್ನ ಮನಸ್ಸಿನಲ್ಲಿರುವ ಮಾತುಗಳನ್ನು ಹೊರಹಾಕಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ಸಮಂತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತನ್ನ ಅಭಿಮಾನಿಗಳು ಕೇಳುವಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ತಮ್ಮ ಅಭಿಮಾನಿಗಳೊಂದಿಗೆ ಬ್ರಾಡ್ ಕಾಸ್ಟ್ ಚಾನಲ್ ನಲ್ಲಿ ಮಾತನಾಡಿದ್ದಾರೆ. ತನ್ನ ಜೀವನದಲ್ಲಾದ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಓರ್ವ ಅಭಿಮಾನಿ ನಿಮ್ಮ ಜೀವನದಲ್ಲಿ ಕಲಿತುಕೊಂಡ ಪಾಠ ಏನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸಮಂತಾ ನನ್ನ ಜೀವನದಲ್ಲಿ ಮಾಡಿದ ತಪ್ಪು ಏನು ಎಂದರೇ, ನನ್ನ ಸ್ವಂತ ಇಷ್ಟಗಳನ್ನು ಆ ಸಮಯದಲ್ಲಿ ಅರ್ಥ ಮಾಡಿಕೊಳ್ಳಲು ನಾನು ಫೈಯಲ್ ಆಗಿದ್ದೇನೆ. ಏಕೆಂದರೇ ಆ ಸಮಯದಲ್ಲಿ ನಾನು ನನ್ನೊಂದಿಗೆ ಇದ್ದ ಭಾಗಸ್ವಾಮಿಯಿಂದ ಸದಾ ಪ್ರಭಾವಿತನಾಗುತ್ತಿದೆ. ಅತ್ಯಂತ ಕ್ಲಿಷ್ಟಕರವಾದ ಸಮಯದಲ್ಲಿ ನಾನು ಕಲಿತ ಬೆಲೆಯುಳ್ಳ ಪಾಠ ಇದೆ ಎಂದು ನಾನು ಗುರ್ತಿಸಿದಾಗ ಅದು ನನ್ನ ವೈಯುಕ್ತಿಕ ಬೆಳವಣಿಗೆಗೆ ತುಂಬಾ ಪ್ರಾಮುಖ್ಯತೆ ಇದೆ ಎಂದು ಗ್ರಹಿಸಿದ್ದೇನೆ ಎಂದು ಆಕೆ ಬರೆದುಕೊಂಡಿದ್ದಾರೆ.

ಇನ್ನೂ ಸಮಂತಾ ರವರ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅನೇಕರು ಆಕೆ ತನ್ಮ ಮಾಜಿ ಪತಿಯ ಬಗ್ಗೆ ಮಾತನಾಡಿದ್ದಾರೆ. ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಆಕೆ ವೈವಾಹಿಕ ಬಂಧನದಿಂದ ಹೊರಬರಬೇಕಾಯಿತು ಎಂದು ಕಾಮೆಂಟ್ಸ್ ಮಾಡಿದ್ದಾರೆ. ಕೊನೆಯದಾಗಿ ಸಮಂತಾ ಖುಷಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆಕೆ ಅಭಿನಯಿಸಿದ ಸಿಟಾಡೆಲ್ ವೆಬ್ ಸಿರೀಸ್ ಸಹ ಶೀಘ್ರದಲ್ಲೇ ಸ್ಟ್ರೀಮಿಂಗ್ ಆಗಲಿದೆ.