Film News

ಡ್ರೋನ್ ಪ್ರತಾಪ್ ವಿರುದ್ದ ಬಿಬಿಎಂಪಿ ಅಧಿಕಾರಿ 50 ಲಕ್ಷ ಮಾನನಷ್ಟ ಮೊಕದ್ದಮೆ, ಡ್ರೋನ್ ಪ್ರತಾಪ್ ಗೆ ಸಂಕಷ್ಟ….!

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಬಿಗ್ ಬಾಸ್ ಮನೆಯಲ್ಲಿದ್ದ ಕೆಲ ಸ್ಪರ್ಧಿಗಳ ವಿರುದ್ದ ಹೊರಗಡೆ ತುಂಬಾನೆ ಚರ್ಚೆ ಸಹ ನಡೆಯುತ್ತಿದೆ. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರ್‍ ಸಂತೋಷ್ ರವರ ವಿರುದ್ದ ಪ್ರಕರಣ ದಾಖಲಾಗಿ ಆತ ಜೈಲಿಗೆ ಹೋಗಿ ಬಂದಿದ್ದು ಸಹ ನಡೆದಿದೆ. ಇದೀಗ ಡ್ರೋನ್ ಪ್ರತಾಪ್ ವಿರುದ್ದ ಸಹ ಮಾನನಷ್ಟ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಕೋವಿಡ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಬಿಬಿಎಂಪಿ ಅಧಿಕಾರಿ ಪ್ರಯಾಗ್ ಎಂಬುವವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ನಡೆದಿದ್ದು, ಪ್ರತಾಪ್ ಗೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ಹೂಡಿದ್ದ ಮೊಕದ್ದಮೆಗೆ ಉತ್ತರ ನಡಲು ಅವಕಾಶ ನೀಡಿದ್ದು, ಮುಂದಿನ ವಿಚಾರಣೆ ಕೋರ್ಟ್‌ನಲ್ಲಿ ಬಗೆಹರಿಯಲಿದೆ ಎಂದು ಹೇಳಲಾಗುತ್ತಿದೆ. ಇತ್ತಿಚಿಗೆ ಬಿಗ್ ಬಾಸ್ ಮನೆಯಲ್ಲಿ ಟ್ರೋನ್ ಪ್ರತಾಪ್ ತಾನು ಕೋವಿಡ್ ಸಮಯದಲ್ಲಿ ಅನುಭವಿಸಿದ್ದ ಕ್ವಾರೆಂಟೈನ್ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ಬಿಬಿಎಂಪಿ ನೋಡಲ್ ಅಧಿಕಾರಿ ವಿರುದ್ದ ಗಂಭೀರ ಆರೋಪ ಮಾಡಿದ್ದರು.

ನಾನು ಕ್ವಾರೆಂಟೈನ್ ನಲ್ಲಿದ್ದಾಗ ಅಧಿಕಾರಿಯೊಬ್ಬರು ನನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು. ನನ್ನನ್ನು ಮೆಂಟಲಿ ಅನ್ ಸ್ಟೇಬಲ್ ಎಂದು ತಲೆಗೆ ಹೊಡೆದು ಕಿರುಕುಳ ಕೊಟ್ಟಿದ್ದರು. ಬಳಿಕ ನನ್ನೊಂದಿಗೆ ಅವರು ನಡೆದುಕೊಂಡ ರೀತಿಯನ್ನು ಹೇಳಿದೆ. ಆ ಸಮಯದಲ್ಲಿ ಅಧಿಕಾರಿ ಅವನು ಹೇಳೊದು ಎಲ್ಲಾ ಸುಳ್ಳು ಎಂದು ಮಾದ್ಯಮಗಳಿಗೆ ಹೇಳಿಕ ಕಳುಹಿಸಿದ್ದರು. ಕ್ವಾರೆಂಟೈನ್ ನಲ್ಲಿ ಮಾನಸಿಕವಾಗಿ ಹಿಂಸೆ ಕೊಟ್ಟು, ಹುಚ್ಚ ಅಂತಾ ಕಾಗದದ ಮೇಲೆ ಸೈನ್ ಮಾಡು ಅಂತಾ ಹೇಳಿದರು ಎಂದು ಪ್ರತಾಪ್ ಆರೋಪ ಮಾಡಿದ್ದರು. ಅದೇ ಅಧಿಕಾರಿ ಪ್ರತಿಕ್ರಿಯೆ ನೀಡಿ ನಾನು ಪ್ರತಾಪ್ ರವರ ಮೇಲೆ ಮಾನಸಿಕ ಹಿಂಸೆ ನೀಡಿಲ್ಲ. ಆತನನ್ನು ಹೊಡೆದಿಲ್ಲ. ಆತ ಹೇಳುವ ಒಂದು ಮಾತಿಗೆ ಸಾಕ್ಷಿ ನೀಡಲಿ. ಆತನ ಆರೋಪ ನಿಜವಾಗಿದ್ದರೇ ನಾನೇ ರಾಜಿನಾಮೆ ಕೊಟ್ಟು ಹೋಗುತ್ತೇನೆ ಎಂದು ನೋಡಲ್ ಅಧಿಕಾರಿ ಎಚ್ಚರಿಕೆ ನೀಡಿದ್ದರು. ಇದೀಗ ಈ ಘಟನೆಯ ಬಗ್ಗೆ ಮಾನನಷ್ಟ ಮೊಕದ್ದಮೆ ಹೂಡಿದ್ದು ಇದು ಎಲ್ಲಿಯವರೆಗೂ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Popular

To Top