ದೇಶ ಬಿಟ್ಟ ಬಳಿಕ ವೇಷ ಬದಲಿಸಿದ ಸ್ಯಾಮ್, ಬ್ಲಾಕ್ ಟ್ರೆಂಡಿ ಡ್ರೆಸ್ ನಲ್ಲಿ ಬೋಲ್ಡ್ ಲುಕ್ಸ್, ವೈರಲ್ ಆದ ಪೊಟೋಸ್…..!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಕೆಲವು ದಿನಗಳ ಹಿಂದೆಯಷ್ಟೆ ಶಾಕುಂತಲಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಡಿಜಾಸ್ಟರ್‍ ಆಗಿದೆ. ಇದೀಗ ಬಾಲಿವುಡ್ ನಲ್ಲಿ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿನೆಮಾದ ವರ್ಲ್ಡ್ ಪ್ರೀಮಿಯರ್‍ ಶೋ ಗಾಗಿ ಇಂಗ್ಲೇಡ್ ಗೆ ಸಿಟಾಡೆಲ್ ಟೀಂ ಜೊತೆಗೆ ಹೋಗಿದ್ದಾರೆ. ಸಮಂತಾ ಜೊತೆಗೆ ರಾಜ್ ಅಂಡ್ ಡಿಕೆ, ನಟ ವರುಣ್ ಧವನ್ ಸಹ ಭಾಗಿಯಾಗಿದ್ದಾರೆ. ಇದೊಂದು ಇಂಟರ್‍ ನ್ಯಾಷನಲ್ ವೆಬ್ ಸಿರೀಸ್ ಆಗಿದ್ದು, ಇಂಡಿಯನ್ ವರ್ಷನ್ ನಲ್ಲಿ ಸಮಂತಾ ನಟಿಸಿದ್ದಾರೆ.

ಇನ್ನೂ ಸಮಂತಾ ಸಿಟಾಡೆಲ್ ಇಂಟರ್‍ ನ್ಯಾಷನಲ್ ಪ್ರೀಮೀಯರ್‍ ಶೋ ಗಾಗಿ ಇಂಗ್ಲೇಡ್ ಗೆ ಹಾರಿದ್ದಾರೆ. ಅಲ್ಲಿ ಸಿಟಾಡೆಲ್ ಟೀಂ ಜೊತೆಗೆ ಹಾಜರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಮಂತಾ ಆಲ್ಟ್ರಾ ಸ್ಟೈಲೀಷ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈವೆಂಟ್ ನಡೆಯುತ್ತಿರುವ ಕಾರಣದಿಂದ ಆಕೆ ಆಲ್ಟ್ರಾ ಸ್ಟೈಲಿಷ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿ‌ದ್ದಾರೆ. ಆಕೆಯ ಈ ಲೇಟೆಸ್ಟ್ ಲುಕ್ಸ್ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಇನ್ನೂ ಈ ಪೊಟೋಗಳಿಗೆ ವಿವಿಧ ರೀತಿಯಲ್ಲಿ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿವೆ. ದೇಶ ಬಿಟ್ಟ ಬಳಿಕ ವೇಷ ಸಹ ಬದಲಾಗಿದೆ ಎಂಬೆಲ್ಲಾ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇನ್ನೂ ಸಮಂತಾ ಶಾಕುಂತಲಂ ಪ್ರಮೋಷನ್ ವೇಳೆ ಬಿಳಿ ಬಣ್ಣದ ಡ್ರೆಸ್, ಸೀರೆಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡರು. ಬಿಳಿ ಸೀರೆಯಲ್ಲಿ, ಕೈಯಲ್ಲಿ ಜಪಮಾಲೆ ಇಟ್ಟುಕೊಂಡು ಸಂಪ್ರದಾಯಬದ್ದವಾಗಿ ಪ್ರಶಾಂತವಾಗಿ ಕಾಣಿಸಿಕೊಂಡಿದ್ದರು. ಇದೀಗ ಸಿಟಾಡೆಲ್ ಸಿರೀಸ್ ಗಾಗಿ ಸಮಂತಾ ಅದಕ್ಕೆ ವಿರುದ್ದವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಕಳೆದ ಏ.14 ರಂದು ಸಮಂತಾ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ಶಾಕುಂತಲಂ ಸಿನೆಮಾ ತೆರೆಗೆ ಬಂತು. ಸಮಂತಾ ಕೆರಿಯರ್‍ ನಲ್ಲೇ ಈ ಸಿನೆಮಾ ಭಾರಿ ಸೋಲನ್ನು ಕಂಡಿದೆ ಎಂದು ಹೇಳಬಹುದಾಗಿದೆ. ಈ ಸಿನೆಮಾದ ಬಂಡವಾಳದಲ್ಲಿ ಶೇ.10 ರಷ್ಟು ಆದರೂ ಸಹ ವಸೂಲಿಯಾಗುವುದು ಕಷ್ಟವೇ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಡಿಜಾಸ್ಟರ್‍ ಬಗ್ಗೆ ಸಮಂತಾ ಸಹ ರಿಯಾಕ್ಟ್ ಆಗಿದ್ದಾರೆ. ಇದೆಲ್ಲಾ ಕರ್ಮ ಫಲ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಸಮಂತಾ ಮಯೋಸೈಟೀಸ್ ವ್ಯಾದಿಯ ಕಾರಣದಿಂದ ಸುಮಾರು ತಿಂಗಳುಗಳ ಕಾಲ ಸಿನೆಮಾಗಳಿಂದ ಹಾಗೂ ಹೊರಪ್ರಪಂಚಕ್ಕೆ ದೂರವೇ ಉಳಿದಿದ್ದರು. ಈ ವ್ಯಾದಿಯಿಂದ ಹೊರಬಂದ ಬಳಿಕ ಆಕೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿರೀಸ್ ಜೊತೆಗೆ ಆಕೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಇದೇ ಸೆ.1 ರಂದು ಬಿಡುಗಡೆಯಾಗಲಿದೆ.