Film News

ಹಣಕ್ಕಾಗಿ ಮೋನಿಕಾ ರನ್ನು ಬಿಟ್ಟುಬಿಟ್ಟಿದ್ದರೇ ನಾನು ಬದುಕುವುದು ಸಹ ವ್ಯರ್ಥ ಎಂದ ಮನೋಜ್…..!

ಟಾಲಿವುಡ್ ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಒಂದಾದ ಮಂಚು ಫ್ಯಾಮಿಲಿಯ ಮಂಚು ಮನೋಜ್ ಹಾಗೂ ಭೂಮಾ ಮೋನಿಕಾರೆಡ್ಡಿ ಮದುವೆ ನಡೆಯಿತು. ಈ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮನೋಜ್ ಸಹೋದರಿ ಮಂಚು ಲಕ್ಷ್ಮೀ ವಹಿಸಿಕೊಂಡಿದ್ದರು. ಸುಮಾರು ವರ್ಷಗಳ ಕಾಲ ಪ್ರೀತಿಸಿ ಇಬ್ಬರೂ ಮದುವೆಯಾದರು. ಇನ್ನೂ ಅವರಿಬ್ಬರ ಮದುವೆಯ ಬಗ್ಗೆ ಅನೇಕ ಸುದ್ದಿಗಳೂ ಸಹ ಕೇಳಿಬಂದವು. ಈ ಮದುವೆ ಮನೋಜ್ ತಂದೆ ಮೋಹನ್ ಬಾಬು ಹಾಗೂ ಅಣ್ಣ ವಿಷ್ಣು ಗೆ ಇಷ್ಟವಿರಲಿಲ್ಲ ಎಂಬ ಮಾತುಗಳು ಸಹ ಕೇಳಿಬಂದಿದೆ. ಈ ವಿಚಾರದಿಂದಲೇ ಮನೋಜ್ ಹಾಗೂ ವಿಷ್ಣು ನಡುವೆ ಕೋಲ್ಡ್ ವಾರ್‍ ಸಹ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಮನೋಜ್ ಹಾಗೂ ಭೂಮಾ ಮೋನಿಕಾ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿ ಇತ್ತೀಚಿಗಷ್ಟೆ ವೆನ್ನಲ ಕಿಷೋರ್ ಹೋಸ್ಟ್ ಮಾಡುವಂತಹ ಅಲಾ ಮೊದಲೈಂದಿ ಶೋ ನಲ್ಲಿ ಭಾಗಿಯಾಗಿದ್ದಾರೆ. ಈ ಶೋನಲ್ಲಿ ಮನೋಜ್ ಹಾಗೂ ಮೋನಿಕಾ ಜೀವನದಲ್ಲಿ ಎದುರಿಸಿದಂತಹ ಕಷ್ಟಗಳು, ಅವರಿಬ್ಬರ ಪ್ರೀತಿ ಹುಟ್ಟಿದ್ದು ಹೇಗೆ ಎಂಬ ವಿಚಾರಗಳು ಹೊರಬಂದಿವೆ. ವೆನ್ನೆಲ ಕಿಷೋರ್‍ ಅವರ ಜೀವನದ ಬಗ್ಗೆ ಕೇಳಿದ್ದು, ಮನೋಜ್ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಇನ್ನೂ ಈ ವೇಳೆ ಮನೋಜ್ ಮಾತನಾಡುತ್ತಾ, ಮೋನಿಕಾಗೆ ನಾನೇ ಮೊದಲು ಪ್ರಪೋಸ್ ಮಾಡಿದ್ದೆ. ಮೋನಿಕಾ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ನೋಡಿದ ನನಗೆ ನನ್ನ ಕಷ್ಟಗಳೆಲ್ಲಾ ತುಂಬಾ ಚಿಕ್ಕವು ಎಂದು ಅನ್ನಿಸಿತ್ತು. ಅದೇ ಸಮಯದಲ್ಲಿ ನನಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ಆಕೆಯನ್ನು ಭೇಟಿಯಾಗಿ ನೀನೆಂದರೇ ನನಗೆ ಪ್ರಾಣ, ನಿನ್ನ ಜೊತೆಗೆ ಜೀವನ ಪರ್ಯಂತ ಸಂತೋಷದಿಂದ ಬದುಕಲು ಆಸೆ ಇದೆ. ನೀನು ಒಪ್ಪಿಕೊಂಡರೇ ನಿನ್ನ ಹಾಗೂ ಮಗನನ್ನು ನನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದೆ.

ಆ ಸಮಯದಲ್ಲಿ ಮೋನಿಕಾ ಎಲ್ಲವನ್ನೂ ತಿಳಿದೇ ಆಲೋಚಿಸಿಯೇ ಈ ನಿರ್ಣಯ ತೆಗೆದುಕೊಂಡಿದ್ದೀಯಾ, ಸಮಾಜ ಹಾಗೂ ಕುಟುಂಬದ ಬಗ್ಗೆ ಯೋಚನೆ ಮಾಡಿದ್ದೀಯಾ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದರು. ಅದೆಲ್ಲಾ ನನ್ನ ಸಮಸ್ಯೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ ಬಳಿಕ ಮೋನಿಕಾ ಸಹ ಒಪ್ಪಿಕೊಂಡರು. ಶಿವನಿಗೆ ವಿನಾಯಕ ದೊರೆತಂತೆ ನನಗೆ ಮಗ ಸಿಕ್ಕ. ಅಲ್ಲಿಂದಲೇ ನಮ್ಮ ವನವಾಸ ಶುರುವಾಗಿತ್ತು. ಇನ್ನೂ ಆಕೆಗಾಗಿ ನಾನು ಅಹಂ ಬ್ರಹ್ಮಾಸ್ಮಿ ಸಿನೆಮಾವನ್ನು ಸಹ ಬಿಟ್ಟೆ. ಮೋನಿಕಾ ನನ್ನನ್ನು ನಂಬಿ ಬಂದಿದ್ದಾರೆ. ಅಂತಹ ಸಮಯದಲ್ಲಿ ನಾನು ಕೆರಿಯರ್‍ ಗಾಗೂ ಹಣಕ್ಕಾಗಿ ಆಸೆಪಡುವುದು ನಾನು ಬದುಕಿದ್ದು ಸಹ ವ್ಯರ್ಥವಾದಂತೆ. ನಾನು ಆ ರೀತಿಯಲ್ಲಿ ಬದುಕುವುದಿಲ್ಲ. ಇಲ್ಲಿದ್ದರೆ ಸಮಸ್ಯೆಯಾಗುತ್ತದೆ ಎಂದು ಚೆನ್ನೈನಲ್ಲಿ ಒಂದೂವರೆ ವರ್ಷ ಇದ್ದೆವು. ಈ ವಿಚಾರ ಯಾರಿಗೂ ತಿಳಿದಿಲ್ಲ ಎಂದು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಸದ್ಯ ಮಂಚು ಮನೋಜ್ ವಾಟ್ ದಿ ಫಿಶ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳಿಂದ ಮಂಚು ಮನೋಜ್ ಹಾಗೂ ವಿಷ್ಣು ನಡುವಣ ಕೋಲ್ಡ್ ವಾರ್‍ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದೆ. ಮನೋಜ್ ಮಾಡುವಂತಹ ಕೆಲವೊಂಡು ಟ್ವೀಟ್ ಗಳು ಸಂಚಲನವನ್ನು ಸೃಷ್ಟಿ ಮಾಡುತ್ತಿವೆ.

Most Popular

To Top