Uncategorized

ಯಶ್ ಪೋನ್ ಮಾಡಿ ಕೆಜಿಎಫ್-3 ಗೆ ರೆಡಿಯಾಗಿ ಎಂದ್ರಂತೆ, ಕೆಜಿಎಫ್-3 ಬಗ್ಗೆ ಸುಳಿವು ಕೊಟ್ಟ ರವಿನಾ ಟಂಡನ್….!

ಸ್ಯಾಂಡಲ್ ವುಡ್ ಸಿನಿರಂಗದ ತಾಕತ್ತನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಸಿನೆಮಾ ಎಂದರೇ ಕೆಜಿಎಫ್. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿದೆ. ಅದರಲ್ಲೂ ಕೆಜಿಎಫ್-2 ಮಾತ್ರ ಅನೇಕ ಸಿನೆಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಕೆಜಿಎಫ್-2 ಸಿನೆಮಾ ಸಿನಿರಂಗದಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದೆ ಎಂದರೇ ತಪ್ಪಾಗಲಾರದು. ಇನ್ನೂ ಇತ್ತಿಚಿಗಷ್ಟೆ ಈ ಸಿನೆಮಾದ ವಾರ್ಷಿಕೋತ್ಸವ ಸಹ ನಡೆದಿದ್ದು, ಸರಳವಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ಕೆಜಿಎಫ್-3 ಸಿನೆಮಾದ ಬಗ್ಗೆ ಸಹ ಹೊಂಬಾಳೆ ಫಿಲಂಸ್ ಸುಳಿವು ಕೊಟ್ಟಿತ್ತು. ಇದೀಗ ಕೆಜಿಎಫ್-2 ನಟಿ ರವಿನಾ ಟಂಡನ್ ಸಹ ಈ ಬಗ್ಗೆ ಸುಳಿವೊಂದನ್ನು ಕೊಟ್ಟಿದ್ದಾರೆ.

ಕೆಜಿಎಫ್-2 ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ರವಿನಾ ಟಂಡನ್ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಕೆ ಮಾತನಾಡುತ್ತಾ ಕೆಜಿಎಫ್ ಸಿನೆಮಾ ವಿಭಿನ್ನವಾಗಿ ಬೇರೆ ಲೆವೆಲ್ ನಲ್ಲೇ ತಯಾರಾದ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ನಾನು ನಟಿಸಬೇಕಾದರೇ ಪ್ರತಿಯೊಂದು ಶಾಟ್ ಗೂ ಪ್ರಶಾಂತ್ ನೀಲ್ ರವರ ಬಳಿ ತೆರಳಿ ಚೆನ್ನಾಗಿ ನಟಿಸಿದ್ದೀನಾ ಎಂದು ಕೇಳುತ್ತಿದ್ದೆ, ಅದಕ್ಕೆ ಅವರು ಇನ್ನೂ ನಟಿಸಬೇಕಿತ್ತು ಎಂದರು. ಇನ್ನೂ ಸಿನೆಮಾ ಬಿಡುಗಡೆಯ ಬಳಿಕ ಯಶ್ ಹಾಗೂ ಸಂಜಯ್ ದತ್ತ್ ಜೊತೆಗೆ ನನ್ನ ಪಾತ್ರಕ್ಕೂ ಸಹ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಇನ್ನೂ ಕೆಜಿಎಫ್-2 ವಾರ್ಷಿಕೋತ್ಸವದ ಸಮಯದಲ್ಲಿ ನನಗೆ ಮೊದಲು ಯಶ್ ಪತ್ನಿ ರಾಧಿಕಾ ಪೋನ್ ಮಾಡಿ ನಿಮ್ಮನ್ನು ಹೊರತು ಆ ಪಾತ್ರಕ್ಕೆ ಯಾರೂ ನ್ಯಾಯ ಒದಗಿಸಲು ಆಗುತ್ತಿರಲಿಲ್ಲ. ನಮ್ಮ ಜೀವನಗಳು ಬದಲಾಗಲು ನೀವು ಸಹ ಕಾರಣಕರ್ತರು ಧನ್ಯವಾದ ಎಂದು ಹೇಳಿದ್ದರು. ಇನ್ನೂ ಅದೇ ದಿನ ಯಶ್ ಸಹ ಕರೆ ಮಾಡಿ ನಾವು ಕೆಜಿಎಫ್-3 ಗೆ ಸಿದ್ದವಾಗಬೇಕೆಂದರು. ಬಳಿಕ ನಾನು ಕೆಜಿಎಫ್-3 ಸಿನೆಮಾದಲ್ಲಿ ನನ್ನನ್ನು ಸಾಯಿಬಿಡಬೇಡ ಎಂದು ಮತ್ತೆ ಹೇಳಿದೆ ಎಂದು ರವಿನಾ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನೂ ಮತ್ತೆ ಪ್ರಶಾಂತ್ ನೀಲ್ ಸಹ ಕರೆ ಮಾಡಿ ನಿಮಗೆ ನೀಡಿದಂತಹ ಪ್ರತಿಯೊಂದು ದೃಶ್ಯ, ಡೈಲಾಗ್ ಸೇರಿದಂತೆ ಪ್ರತಿಯೊಂದನ್ನು ತುಂಬಾ ಅದ್ಬುತವಾಗಿ ಮಾಡಿದ್ದೀರಾ. ನಾನು ಮೊದಲಿಗೆ ಬಾಲಿವುಡ್ ನಟಿಯರೊಂದಿಗೆ ಹೇಗೆ ಕೆಲಸ ಮಾಡುವುದು ಎಂದು ಹೆದರಿದ್ದೆ. ಆದರೆ ನಿಮ್ಮ ಸಹಕಾರ ನೋಡಿದ ಬಳಿಕ ಆ ಭಯ ಹೋಗಿತ್ತು. ನಿಮ್ಮೊಂದಿಗೆ ಕೆಲಸ ಮಾಡಿದ ಸಮಯವನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮೊಟ್ಟಿಗೆ ಕೆಲಸ ಮಾಡಲು ನನಗೆ ಬಯಕೆಯಿದೆ. ನಾವು ಮತ್ತೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದು, ಕೆಜಿಎಫ್-3 ಸಹ ಇರುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನೂ ಈ ಸಿನೆಮಾದ ಕೆಲಸಗಳು ಯಾವಾಗ ನಡೆಯುತ್ತವೆ ಎಂಬುದು ಮಾತ್ರ ನನಗೆ ಗೊತ್ತಿಲ್ಲ. ಆದರೆ ಕೆಜಿಎಫ್ ಸಿನೆಮಾ ಅಭಿಮಾನಿಗಳು ಮಾತ್ರ ಕೆಜಿಎಫ್-3 ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದಿದ್ದಾರೆ.

Most Popular

To Top