ನಾನು ಕೋರಿದ್ದು ನನಗೆ ದೊರೆತಿದೆ ಎಂದ ಸ್ಯಾಮ್, ಹುಟ್ಟುಹಬ್ಬದ ಸಂಭ್ರಮದ ಬಗ್ಗೆ ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡ ಬ್ಯೂಟಿ……!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತಿಚಿಗಷ್ಟೆ ಆಕೆಯ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸಮಂತಾ ತನ್ನ ಕೆರಿಯರ್‍, ವೈಯುಕ್ತಿಕ ವಿಚಾರಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆಯ ಹುಟ್ಟುಹಬ್ಬದ ಸೆಲಬ್ರೇಷನ್ ಗೆ ಸಂಬಂಧಿಸಿದ ಕೆಲವೊಂದು ಪೊಟೋಗಳನ್ನು ಆಕೆ ಹಂಚಿಕೊಂಡಿದ್ದಾರೆ. ಈ ಪೊಟೋಗಳ ಜೊತೆಗೆ ಆಕೆ ಇಂಟ್ರಸ್ಟಿಂಗ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ಇದೀಗ ಆಕೆಯ ಪೋಸ್ಟ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಕಳೆದ ಏ.28 ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಏ.28, 2023 ಕ್ಕೆ ಆಕೆ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.  ಇನ್ನೂ ಆಕೆಯ ಹುಟ್ಟುಹಬ್ಬ ಸ್ನೇಹಿತರು ಹಾಗೂ ಹತ್ತಿರದವರ ಜೊತೆಗೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದು, ಈ ವೇಳೆ ತೆಗೆದಂತಹ ಕೆಲವೊಂದು ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಹುಟ್ಟುಹಬ್ಬಕ್ಕೆ ಸಿನೆಮಾ ಸೆಲೆಬ್ರೆಟಿಗಳೂ ಸೇರಿದಂತೆ ಅಭಿಮಾನಿಗಳು ಹಾಗೂ ಸ್ನೇಹಿತರೂ ಸಹ ಶುಭಾಷಯಗಳನ್ನು ಕೋರಿದ್ದರು.  ಇನ್ನೂ ಆಕೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಆಚರಣೆಯ ವಿಡಿಯೋ ಹಾಗೂ ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಪೊಟೋ ಹಾಗೂ ವಿಡಿಯೋಗಳಿಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಇದೀಗ ಆ ಪೋಟೋಗಳು ವೈರಲ್ ಆಗುತ್ತಿವೆ.

ನಟಿ ಸಮಂತಾ ತನ್ನ ಸೊಷಿಯಲ್ ಮಿಡಿಯಾದಲ್ಲಿ ತನ್ನ ಹುಟ್ಟುಹಬ್ಬದ ಪೊಟೋಗಳನ್ನು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದಂದು ಸರಳ ನಿಯಮಗಳು, ಸರ್ಪ್ರೈಸ್ ಅಲ್ಲ, ಕೇಕೆಗಳು ಅಲ್ಲ, ಬಲೂನ್ ಗಳು ಅಲ್ಲ, ನಾನು ಕೋರಿದ್ದು ನನಗೆ ಸ್ಪಷ್ಟವಾಗಿ ಲಭಿಸಿದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಸಮಂತಾ ಹಂಚಿಕೊಂಡು ಈ ಪೋಸ್ಟ್ ಸಖತ್ ವೈರಲ್ ಆಗುತ್ತಿವೆ. ಆಕೆಯ ಹುಟ್ಟುಹಬ್ಬವನ್ನು ಸ್ನೇಹಿತರು ಆಚರಿಸಿದ್ದಾರೆ. ಜೊತೆಗೆ ಸಿಟಾಡೆಲ್ ಚಿತ್ರತಂಡ ಸಹ ಸಮಂತಾ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಪೊಟೋಗಳು ಹಾಗೂ ವಿಡಿಯೋಗಳನ್ನು ಆಕೆ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ಆಕೆ ಮಿನಿ ಡ್ರೆಸ್ ಧರಿಸಿ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಈ ಪೊಟೋಗಳಿಗೆ ಕೆಲ ಸೆಲೆಬ್ರೆಟಿಗಳೂ ಸಹ ಕಾಮೆಂಟ್ ಮಾಡಿರುವುದು ವಿಶೇಷ ಎನ್ನಬಹುದಾಗಿದೆ.

ಇನ್ನೂ ಸಮಂತಾ ಕಳೆದ ತಿಂಗಳು ಶಾಕುಂತಲಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾ ಭಾರಿ ಡಿಜಾಸ್ಟರ್‍ ಆಗಿ ಉಳಿಯಿತು. ತೆಲುಗು ಸ್ಟಾರ್‍ ವಿಜಯ್ ದೇವರಕೊಂಡ ಜೊತೆಗೆ ಖುಷಿ ಎಂಬ ಸಿನೆಮಾದಲ್ಲೂ ಸಹ ಸಮಂತಾ ನಟಿಸುತ್ತಿದ್ದಾರೆ. ಅಮೇರಿಕಾದ ಆಕ್ಷನ್ ಥ್ರಿಲ್ಲರ್‍ ಸಿಟಾಡೆಲ್ ಎಂಬ ವೆಬ್ ಸಿರೀಸ್ ನ ಇಂಡಿಯನ್ ವರ್ಷನ್ ನಲ್ಲಿ ಬಾಲಿವುಡ್ ಸ್ಟಾರ್‍ ನಟ ವರುಣ್ ಧವನ್ ಜೊತೆಗೆ ನಟಿಸುತ್ತಿದ್ದಾರೆ.