Film News

ಆ ಕಾರಣದಿಂದಲೇ ನಾನು ಹಾಗೂ ಕಂಗನಾ ಟಾರ್ಗೆಟ್ ಆಗಿದ್ದೇವೆ ಎಂದ ಕಾಶ್ಮೀರಿ ಫೈಲ್ಸ್ ವಿವೇಕ್…..!

ಕಳೆದ 2022ರ ಮಾರ್ಚ್ ಮಾಹೆಯಲ್ಲಿ ತೆರೆಕಂಡ ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ಭಾರಿ ಸದ್ದು ಮಾಡಿದ ವಿಚಾರ ಗೊತ್ತೆ ಇದೆ. ಈ ಸಿನೆಮಾ ಅನೇಕ ವಿಮರ್ಶೆಗಳು ಹಾಗೂ ವಿವಾದಗಳನ್ನು ಸಹ ಹುಟ್ಟಿ ಹಾಕಿತ್ತು. ಈ ಸಿನೆಮಾದ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರ ಭಾರಿ ಹೆಸರು ವಾಸಿಯಾದರು. ಇನ್ನೂ ಸೋಷಿಯಲ್ ಮಿಡಿಯಾ ಸೇರಿದಂತೆ ಅನೇಕ ಕಡೆ ವಿವೇಕ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ಆ ಒಂದು ಕಾರಣದಿಂದ ಬಾಲಿವುಡ್ ಸ್ಟಾರ್‍ ಕಂಗನಾ ಹಾಗೂ ನಾನು ಟಾರ್ಗೆಟ್ ಆಗಿದ್ದೇವೆ ಎಂದು ಹೇಳುವ ಮೂಲಕ ಮತ್ತೊಂದು ಸಂಚಲನ ಸೃಷ್ಟಿಸಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋ‌ತ್ರಿ ಬಾಲಿವುಡ್ ಮಾಫಿಯಾದ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಾಲಿವುಡ್ ಸಿನಿರಂಗದಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದರೂ, ಪ್ರಶ್ನಿಸಬೇಕಾದರೂ ಕಾಂಟ್ರವರ್ಸಿಗಳನ್ನು ನಾವು ಫೇಸ್ ಮಾಡಬೇಕು. ಈ ಬಗ್ಗೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ವಿವೇಕ್ ಮಾತನಾಡಿದ್ದಾರೆ. ಬಾಲಿವುಡ್ ಮಾಫಿಯಾ ಬಗ್ಗೆ ಫೈರ್‍ ಆಗಿದ್ದಾರೆ. ಬಾಲಿವುಡ್ ಸಿನಿರಂಗ ನಮ್ಮನ್ನು ದೂರ ಇಟ್ಟಿದೆ. ಬಾಲಿವುಡ್ ನ ಕೆಲವರು ನನ್ನನ್ನು ಹಾಗೂ ಕಂಗನಾ ರವರನ್ನು ಟಾರ್ಗೆಟ್ ಮಾಡಿದ್ದಾರೆ. ಬಾಲಿವುಡ್ ನಲ್ಲಿ ನಡೆಯುವಂತಹ ಸಮಸ್ಯೆಗಳು ಹಾಗೂ ತಪ್ಪುಗಳನ್ನು ನಾವಿಬ್ಬರೂ ನೇರವಾಗಿ ಪ್ರಶ್ನೆ ಮಾಡುತ್ತೇವೆ. ತಪ್ಪು ಯಾರೆ ಮಾಡಿದರು ಪ್ರಶ್ನೆ ಮಾಡುವಂತಹ ಹಕ್ಕು ನಮಗಿರುತ್ತದೆ. ಆದ್ದರಿಂದಲೇ ನಮ್ಮ ಸಿನೆಮಾಗಳನ್ನು, ನಮ್ಮನ್ನು ಟಾರ್ಗೆಟ್ ಮಾಡಿ ದೂರ ಮಾಡಬೇಕೆಂದು ಅನೇಕರು ಅಂದುಕೊಂಡಿದ್ದಾರೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಬಾಲಿವುಡ್ ಸಿನಿರಂಗ ನನ್ನನ್ನು ಸಂಪೂರ್ಣವಾಗಿ ದೂರ ಇಟ್ಟಿದೆ. ನನ್ನ ಸಿನೆಮಾಗಳು ಎಂದು ಬರುತ್ತವೆ ಎಂಬ ಸಂದೇಹ ಸಹ ನನಗಿದೆ. ನನಗೆ ಮಧ್ಯತರಗತಿ ವರ್ಗ ಹಾಗೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ದೊರೆತಿದೆ. ಆದರೆ ಬಾಲಿವುಡ್ ಮಾತ್ರ ನನ್ನನ್ನು ದೂರ ಇಟ್ಟಿದೆ. ಸದ್ಯ ಬಾಲಿವುಡ್ ನಲ್ಲಿ ಕರಣ್ ಜೋಹಾರ್‍ ಸಿನೆಮಾಗಳು ವಾಸ್ತವ ಚಿತ್ರಣದಿಂದ ದೂರ ಇರುತ್ತವೆ. ಈ ಹಿಂದೆ ಸಿನೆಮಾಗಳು ಎಲ್ಲರೂ ನೋಡುವಂತೆ ಇರುತ್ತಿತ್ತು. ಪ್ರೇಕ್ಷಕರೂ ಸಹ ಸಿನೆಮಾಗೆ ಕನೆಕ್ಟ್ ಆಗುತ್ತಿದ್ದರು. ಆದರೆ ಇತ್ತಿಚಿಗೆ ಸಿನೆಮಾಗಳಿಗೆ ಪ್ರೇಕ್ಷಕರು ಕನೆಕ್ಟ್ ಆಗುತ್ತಿಲ್ಲ. ಈ ದುಸ್ಥಿತಿ ಬರೋದಕ್ಕೆ ಬಾಲಿವುಡ್ ಕಾರಣ. ಈ ಕಾರಣದಿಂದಲೇ ಬಾಯ್ ಕಟ್ ಬಾಲಿವುಡ್ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ ಎಂದು ಅನೇಕ ಕಾಮೆಂಟ್ ಗಳನ್ನು ಮಾಡಿದ್ದಾರೆ.

Most Popular

To Top