ಬಿಚ್ಚಗಾಡು-2 ಸಿನೆಮಾದಲ್ಲಿ ಅಂತಹ ಸನ್ನಿವೇಶಗಳೂ ಸಹ ಇರುತ್ತವೆ ಎಂದ ನಟ ವಿಜಯ್ ಆಂಟೋನಿ…..!

ಸೌತ್ ಸಿನಿರಂಗದಲ್ಲಿ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ನಟ ವಿಜಯ್ ಬಿಚ್ಚಗಾಡು ಸಿನೆಮಾದ ಮೂಲಕ ಸೆನ್ಷೇಷನಲ್ ನಟರಾದರು. ಬಿಚ್ಚಗಾಡು ಸಿನೆಮಾ ತೆಲುಗು ಹಾಗೂ ತಮಿಳಿನಲ್ಲಿ ಭಾರಿ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಮೂಲಕ ನಟ ವಿಜಯ್ ತುಂಬಾನೆ ಫೇಮಸ್ ಆದರು. ಇದೀಗ ಇದರ ಸೀಕ್ವೆಲ್ ಬಿಚ್ಚಗಾಡು 2 ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಇದೀಗ ಈ ಸಿನೆಮಾದ ಬಗ್ಗೆ ನಟ ವಿಜಯ್ ಆಂಟೋನಿ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತೆಲುಗು ಹಾಗೂ ತಮಿಳಿನಲ್ಲಿ ಬಿಚ್ಚಗಾಡು ಸಿನೆಮಾ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಬಿಚ್ಚಗಾಡು-2 ಸಿನೆಮಾ ಸಹ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾಗೆ ವಿಜಯ್ ಆಂಟೋನಿ ನಿರ್ಮಾಪಕರಾಗಿ, ಮ್ಯೂಸಿಕ್ ಡೈರೆಕ್ಟರ್‍ ಆಗಿ ಹಾಗೂ ನಾಯಕನಾಗಿಯೂ ಸಹ ನಟಿಸಿದ್ದಾರೆ. ಈ ಸಿನೆಮಾದ ಮೂಲಕ ನಿರ್ದೇಶಕನಾಗಿ ಸಹ ಕೆರಿಯರ್‍ ಆರಂಭಿಸಿದ್ದಾರೆ ವಿಜಯ್. ಈ ಸಿನೆಮಾ ವಿಜಯ್ ಆಂಟೋನಿ ಫಿಲಂ ಕಾರ್ಪೋರೇಷನ್ ಬ್ಯಾನರ್‍ ನಡಿ, ಈಕೆಯ ಪತ್ನಿ ಫಾತಿಮಾ ವಿಜಯ್ ಬಂಡವಾಳ ಹೂಡಿದ್ದಾರೆ. ವಿಜಯ್ ಗೆ ಜೋಡಿಯಾಗಿ ಕಾವ್ಯ ತಾಪರ್‍ ನಟಿಸಿದ್ದಾರೆ. ಜೊತೆಗೆ ಮನ್ಸೂರ್‍ ಅಲಿಖಾನ್, ರಾಧಾರವಿ, ವೈ.ಜಿ.ಮಹೇಂದ್ರನ್, ಹರೀಶ್, ಜಾನ್ಸ್ ವಿಜಯ್, ದೇವ್ ಗಿಲ್, ಯೋಗಿ ಬಾಬು ಸೇರಿದಂತೆ ಅನೇಕ ಕಲಾವಿದರು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಬಿಚ್ಚಗಾಡು-2 ಸಿನೆಮಾ ತಂಡ ಮಿಡಿಯಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಜಯ್ ಆಂಟೋನಿ ಸಿನೆಮಾದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಈ ಹಿಂದೆ ಯಾರ ಬಳಿ ಕೂಡ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿಲ್ಲ. ಕೇವಲ ಸಿನೆಮಾಗಳನ್ನು ನೋಡಿದ ಅನುಭವದ ಮೇರೆಗೆ ಸಂಗೀತ ನಿರ್ದೇಶಕನಾಗಿದ್ದೇನೆ. ಈ ಸಿನೆಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಹಿಂದೆ ನನ್ನ ಸಿನೆಮಾಗಳಲ್ಲಿ ರೊಮ್ಯಾನ್ಸ್ ದೃಶ್ಯಗಳು ಅಷ್ಟೊಂದು ಇರಲಿಲ್ಲ. ಆದರೆ ಈ ಸಿನೆಮಾದಲ್ಲಿ ರೊಮ್ಯಾನ್ಸ್ ದೃಶ್ಯಗಳೂ ಸಹ ಬಹಳಷ್ಟಿದೆ. ಇನ್ನೂ ಈ ಸಿನೆಮಾದ ಅಣ್ಣ-ತಂಗಿ ಅನುಬಂಧದ ಕಥೆಯನ್ನು ಆಧರಿಸಿದೆ ಎಂದಿದ್ದಾರೆ.

ಇನ್ನೂ ಸಿನೆಮಾಗಳ ಶೂಟಿಂಗ್ ಸಮಯದಲ್ಲಿ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡುವ ಸಮಯದಲ್ಲಿ ಅವಘಡಗಳು ನಡೆಯುವುದು ಸಹಜ. ಆದರೆ ನನಗೆ ಮಾತ್ರ ಹಾಡಿನ ಚಿತ್ರೀಕರಣದ ಸಮಯದಲ್ಲಿ ಪ್ರಮಾದ ಏರ್ಪಟ್ಟಿದೆ. ನಾನು ಶೂಟಿಂಗ್ ಸಮಯದಲ್ಲಿ ಪ್ರಮಾದಕ್ಕೆ ತುತ್ತಾಗಿದ್ದೆ. ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದೇನೆ ಎಂದು ವಿಜಯ್ ಆಂಟೋನಿ ಹೇಳಿದ್ದಾರೆ. ಇನ್ನೂ ಬಿಚ್ಚಗಾಡು-2 ಸಿನೆಮಾ ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ. ತೆಲುಗು ಸೇರಿದಂತೆ ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಸಹ ರಿಲೀಸ್ ಆಗಲಿದೆ.

Previous articleಮತ್ತೊಮ್ಮೆ ಬೋಲ್ಡ್ ಪೋಸ್ ಕೊಟ್ಟ ಮೃಣಾಲ್, ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಈ ರೀತಿ ಮಾಡುತ್ತಿದ್ದೀರಾ ಎಂದ ನೆಟ್ಟಿಗರು…..!
Next articleನಾನು ಕೋರಿದ್ದು ನನಗೆ ದೊರೆತಿದೆ ಎಂದ ಸ್ಯಾಮ್, ಹುಟ್ಟುಹಬ್ಬದ ಸಂಭ್ರಮದ ಬಗ್ಗೆ ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡ ಬ್ಯೂಟಿ……!