ಹೈದರಾಬಾದ್ ಗೆ ಗುಡ್ ಬೈ ಹೇಳಲಿದ್ದಾರಂತೆ ಸಮಂತಾ, ಮುಂಬೈನಲ್ಲಿ ದುಬಾರಿ ಪ್ಲಾಟ್ ಖರೀದಿಸಿದ ಸಮಂತಾ?

ಸೌತ್ ಅಂಡ್ ನಾರ್ತ್ ನಲ್ಲೂ  ಬಹುಬೇಡಿಕೆಯುಳ್ಳ ನಟಿಯರಲ್ಲಿ ಸಮಂತಾ ಸಹ ಒಬ್ಬರಾಗಿದ್ದಾರೆ. ಸಮಂತಾ ನಾಗಚೈತನ್ಯ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಆಕೆ ಮತಷ್ಟು ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾಮ ಹಾಡಿನ ಬಳಿಕ ಸಮಂತಾ ಕ್ರೇಜ್ ಮತಷ್ಟು ಏರಿತ್ತು ಎಂದು ಹೇಳಬಹುದಾಗಿದೆ. ಇನ್ನೂ ಆಕೆ ಇತ್ತೀಚಿಗೆ ಮಯೋಸೈಟೀಸ್ ವ್ಯಾದಿಗೆ ಗುರಿಯಾಗಿದ್ದರು. ಇದೀಗ ಆ ವ್ಯಾದಿಯಿಂದ ಹೊರಬಂದು ಸಿನೆಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇದೀಗ ಸಮಂತಾ ರವರಿಗೆ ಸಂಬಂಧಿಸಿದ ವಿಚಾರವೊಂದು ಹರಿದಾಡುತ್ತಿದೆ.

ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿಯೆಂದು ಸಮಂತಾ ಹಾಗೂ ನಾಗಚೈತನ್ಯ ಜೋಡಿಯನ್ನು ಕರೆಯಲಾಗುತ್ತಿತ್ತು. ಆದರೆ ಅವರು ವಿಚ್ಚೇದನ ಪಡೆದುಕೊಂಡು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇನ್ನೂ ಸಮಂತಾ ವಿಚ್ಚೇಧನದ ಬಳಿಕ ಸಿನೆಮಾಗಳಲ್ಲೇ ಪುಲ್ ಪೋಕಸ್ ಇಟ್ಟಿದ್ದಾರೆ. ಇದೀಗ ಆಕೆ ಸೌತ್ ಸಿನಿಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಸಹ ಬಹುಬೇಡಿಕೆ ಹೊಂದಿದ್ದಾರೆ. ಇದೀಗ ಆಕೆ ತನ್ನ ವೈಯುಕ್ತಿಕ ವಿಚಾರಗಳಲ್ಲೂ ಸಹ ಅನೇಕ ವಿಚಾರಗಳನ್ನು ಬದಲಿಸಿಕೊಳ್ಳುತ್ತಿದ್ದಾರಂತೆ. ಈ ಹಾದಿಯಲ್ಲೇ ಆಕೆ ಇದೀಗ ಹೈದರಾಬಾದ್ ನಿಂದ ಮುಂಬೈ ಗೆ ಶಿಫ್ಟ್ ಆಗಲಿದ್ದಾರಂತೆ. ಈ ಹಿಂದೆ ಸಹ ಈ ಬ್ಯೂಟಿ ಮುಂಬೈಗೆ ಶಿಫ್ಟ್ ಆಗಿದ್ದರು ಎನ್ನಲಾಗಿತ್ತು. ಸುಮಾರು ದಿನಗಳಿಂದ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮುಂಬೈನಲ್ಲಿ ಬೆಸ್ಟ್ ಮ್ಯಾನೇಜರ್‍ ನನ್ನು ಸಹ ಆಯ್ಕೆ ಮಾಡಿಕೊಂಡರು ಎನ್ನಲಾಗುತ್ತಿದೆ.

ಇದೀಗ ನಟಿ ಸಮಂತಾ ಸಂಪೂರ್ಣವಾಗಿ ಮುಂಬೈಗೆ ಶಿಫ್ಟ್ ಆಗಲಿದ್ದಾರಂತೆ. ಇನ್ನೂ ಮುಂಬೈನಲ್ಲೇ ನೆಲೆಯೂರಲು ಪ್ಲಾನ್ ಮಾಡುತ್ತಿದ್ದು, ಇದಕ್ಕಾಗಿ ಆಕೆ ದುಬಾರಿ ಮನೆಯನ್ನು ಸಹ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮುಂಬೈನಲ್ಲಿ ಸೆಲೆಬ್ರೆಟಿಗಳು ಇರುವಂತಹ ಪಾಷ್ ಏರಿಯಾದಲ್ಲಿ ತ್ರಿಬಲ್ ಬೆಡ್ ರೂಂ ಪ್ಲಾಟ್ ಖರೀದಿಸಿದ್ದಾರಂತೆ. ಶೀಘ್ರದಲ್ಲೇ  ಆ ಮನೆಗೆ ಶಿಫ್ಟ್ ಆಗಲಿದ್ದಾರಂತೆ ಸಮಂತಾ. ಇದೀಗ ಸಮಂತಾ ಖರೀದಿ ಮಾಡಿದ ಪ್ಲಾಟ್ ಬರೊಬ್ಬರಿ 15 ಕೋಟಿಯಂತೆ. ತುಂಬಾ ಲಗ್ಸುರಿಯಾಗಿದೆಯಂತೆ ಈ ಪ್ಲಾಟ್. ಜೊತೆಗೆ ಅಲ್ಲಿಂದ ವ್ಯೂ ಪಾಯಿಂಟ್ ಸಹ ತುಂಬಾ ಚೆನ್ನಾಗಿರುತ್ತದೆಯಂತೆ. ಇನ್ನೂ ಸಮಂತಾ ಸಹ ಇತ್ತೀಚಿಗೆ ಸನ್ ಸೆಟ್ ಎಂಜಾಯ್ ಮಾಡುತ್ತಿರುವ ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಸಮಂತಾ ಮುಂಬೈನಲ್ಲಿ ದುಬಾರಿ ಮನೆ ಖರೀದಿಸಿದ್ದಾರೆ. ಹೈದರಾಬಾದ್ ಗೆ ಗುಡ್ ಬೈ ಹೇಳಿ ಮುಂಬೈನಲ್ಲೇ ಸೆಟಲ್ ಆಗಲಿದ್ದಾರೆ ಎಂದು ಸುದ್ದಿಗಳು ಕೇಳಿಬರುತ್ತಿವೆ.

ಇನ್ನೂ ಸಮಂತಾ ಶಾಕುಂತಲಂ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಬಿಡುಗಡೆ ಮತ್ತೊಮ್ಮೆ ಮುಂದೂಡಲಾಗಿದೆ. ಇದರ ಜೊತೆಗೆ ಸಮಂತಾ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದರು. ಮುಂದಿನ ತಿಂಗಳಿನಲ್ಲಿ ಈ ಸಿನೆಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಹಿಂದಿಯಲ್ಲೂ ಸಹ ಆಕೆ ನಾಲ್ಕೈದು ಸಿನೆಮಾಗಳಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಆಕೆ ಹಾಲಿವುಡ್ ನಲ್ಲಿ ಖ್ಯಾತಿ ಪಡೆದುಕೊಂಡ ಸಿಟಾಡೆಲ್ ವೆಬ್ ಸಿರೀಸ್ ನ ಹಿಂದಿ ರಿಮೇಕ್ ನಲ್ಲೂ ಸಹ ಸಮಂತಾ ನಟಿಸುತ್ತಿದ್ದು, ಇತ್ತಿಚಿಗಷ್ಟೆ ಆಕೆ ಈ ಶೂಟಿಂಗ್ ನಲ್ಲೂ ಸಹ ಭಾಗಿಯಾಗಿದ್ದಾರೆ.