Film News

ಮಯೋಸೈಟೀಸ್ ಬಳಿಕ ಮೊದಲ ಬಾರಿಗೆ ಆಲ್ಟ್ರಾ ಸ್ಟೈಲಿಷ್ ಲುಕ್ಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಸಮಂತಾ….!

ಸೌತ್  ಸಿನಿರಂಗದಲ್ಲಿ ಸುಮಾರು ದಶಕಗಳಿಂದ ಮುನ್ನುಗ್ಗುತ್ತಿರುವ ಸಮಂತಾ ಜೀವನದಲ್ಲಿ ಕಳೆದ ವರ್ಷ ತುಂಬಾನೆ ವಿವಾದಗಳು, ನೋವುಗಳು ಎದುರಾದವು. ನಾಗಚೈತನ್ಯ ಜೊತೆಗೆ ವಿಚ್ಚೇದನದ ಕಾರಣದಿಂದ ಆಕೆ ತುಂಬಾನೆ ಡಿಪ್ರೆಷನ್ ಗೆ ಹೋಗಿದ್ದರು. ಬಳಿಕ ಆಕೆ ಸಿನೆಮಾಗಳಲ್ಲಿ ತೊಡಗಡಿಸಿಕೊಂಡರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಆಕೆ ಮಯೋಸೈಟೀಸ್ ಎಂಬ ವ್ಯಾದಿಗೆ ಗುರಿಯಾಗಿದ್ದು, ಮಯೋಸೈಟೀಸ್ ವ್ಯಾದಿಗೆ ಗುರಿಯಾದ ಬಳಿಕ ಆಕೆ ಸೋಷಿಯಲ್ ಮಿಡಿಯಾದಿಂದಲೇ ದೂರವಾಗಿದ್ದರು. ಇದೀಗ ಆಕೆ ಮೊದಲ ಬಾರಿಗೆ ಅಲ್ಟ್ರಾ ಸ್ಟೈಲಿಷ್ ಲುಕ್ಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಸಮಂತಾ ಸ್ಟ್ರಾಂಗ್ ಅಂಡ್ ಇಂಡಿಪೆಂಡೆಂಟ್ ವುಮನೆ. ಆಕೆ ತನಗೆ ಇಷ್ಟ ಬಂದಂತೆ ಬದುಕುವುದೇ ಜೀವನ ಎಂದುಕೊಳ್ಳುತ್ತಾರೆ. ಮದುವೆಯಾದರೂ ಸಹ ಆಕೆ ಸಿನೆಮಾಗಳಲ್ಲಿ ನಟಿಸುತ್ತಿದ್ದರು. ಆಕೆ ಧರಿಸುವ ಬಟ್ಟೆಗಳ ಕಾರಣದಿಂದ ವಿವಾದಗಳನ್ನು ಸಹ ಎದುರಿಸಿದ್ದರು. ಈ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡಿದ್ದರು. ಆದರೆ ಕೆಲವು ತಿಂಗಳುಗಳಿಂದ ಸಮಂತಾ ಮಯೋಸೈಟೀಸ್ ಎಂಬ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದರು. ಇದರಿಂದ ಆಕೆ ಗುಣಮುಖರಾಗಲು ತುಂಬಾನೆ ಸಮಯ ತೆಗೆದುಕೊಂಡರು. ಇನ್ನೂ ಆಕೆ ಮಯೋಸೈಟೀಸ್ ವ್ಯಾದಿಗೆ ಗುರಿಯಾದ ವಿಚಾರ ತಿಳಿಯುತ್ತಿದ್ದಂತೆ ಅನೇಕ ಸ್ಟಾರ್‍ ಗಳು ಆಕೆಗೆ ಧೈರ್ಯ ತುಂಬಿದರು. ಇದೀಗ ಸ್ಯಾಮ್ ಈಸ್ ಬ್ಯಾಕ್. ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಸಮಂತಾ ಈ ಹಿಂದೆ ಒಪ್ಪಿಕೊಂಡ ಸಿನೆಮಾಗಳನ್ನು ಸಹ ಪೂರ್ಣಗೊಳಿಸುತ್ತಿದ್ದಾರೆ. ಜೊತೆಗೆ ತುಂಬಾ ಗ್ಯಾಪ್ ಬಳಿಕ ಗ್ಲಾಮರಸ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಶಾಕುಂತಲಂ ಸಿನೆಮಾದ ಪ್ರಮೋಷನ್ ನಿಮಿತ್ತ ಆಕೆ ಈ ಪೊಟೋಶೂಟ್ಸ್ ಮಾಡಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ಸಮಂತಾ ಅಲ್ಟ್ರಾ ಸ್ಟೈಲಿಷ್ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಸಮಂತಾ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಸಮಂತಾ ಪೊಟೋಗಳನ್ನು ನೋಡಿದ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಸ್ಯಾಮ್ ಈಸ್ ಬ್ಯಾಕ್, ಸೂಪರ್‍ ಹಾಟ್, ಬ್ಯೂಟಿಪುಲ್ ಲುಕ್ಸ್ ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಸಮಂತಾ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಬ್ಯುಸಿಯಾಗಿದ್ದಾರೆ.

ಇನ್ನೂ ಸಮಂತಾ ಸದ್ಯ ಸಿಟಾಡೆಲ್ ಎಂಬ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿರೀಸ್ ಮೊದಲ ಶೆಡ್ಯೂಲ್ ಮುಂಬೈನಲ್ಲಿ ನಡೆದಿದೆ. ಬಳಿಕ ಹಿಮಾಚಲ್ ಪ್ರದೇಶದಲ್ಲಿ ಈ ಸಿರೀಸ್ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ. ಜೊತೆಗೆ ವಿದೇಶಗಳಲ್ಲೂ ಸಹ ಸಿನೆಮಾದ ಶೂಟೀಂಗ್ ನಡೆಯಲಿದೆ ಎಂದೂ ಸಹ ಹೇಳಲಾಗುತ್ತಿದೆ. ತೆಲುಗಿನಲ್ಲಿ ಖುಷಿ ಎಂಬ ಸಿನೆಮಾದಲ್ಲಿ ವಿಜಯ ದೇವರಕೊಂಡ ಜೊತೆಗೆ ನಟಿಸುತ್ತಿದ್ದಾರೆ. ಇನ್ನೂ ಖ್ಯಾತ ನಿರ್ದೇಶಕ ಗುಣಶೇಖರ್‍ ನಿರ್ದೇಶನದ ಶಾಕುಂತಲಂ ಸಿನೆಮಾದ ಸಹ ಏಪ್ರಿಲ್ 14 ರಂದು ಬಿಡುಗಡೆಯಾಗಲಿದ್ದು, ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ನಡೆಯುತ್ತಿವೆ.

Most Popular

To Top