ಕಾಲಿವುಡ್ ಸ್ಟಾರ್ ಧನುಷ್ ಹಾಗೂ ಸೀನಿಯರ್ ನಟಿ ಮೀನಾ ಮದುವೆ? ಈ ಹೇಳಿಕೆ ನೀಡಿದ ಕಾಲಿವುಡ್ ನಟನಿಗೆ ಹಿಗ್ಗಾಮುಗ್ಗಾ ತರಾಟೆ….!

ಸಿನಿರಂಗದಲ್ಲಿ ಕೆಲವರು ಯಾವುದೇ ರೀತಿಯ ಲಿಂಕ್ ಗಳು ಇಲ್ಲದೇ ಇದ್ದರೂ ಸಹ ಪ್ರಚಾರ ಗಿಟ್ಟಿಸಿಕೊಳ್ಳಲೋ ಅಥವಾ ಬೇರೆ ಕಾರಣದಿಂದಲೋ ಇಲ್ಲ ಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಕಾಲಿವುಡ್ ನಟ ಬೈಲ್ವಾನ್ ರಂಗನಾಥನ್ ಸಹ ಸಂದರ್ಶನವೊಂದರಲ್ಲಿ ಸ್ಟಾರ್‍ ನಟ ಧನುಷ್ ಹಾಗೂ ಸಿನೀಯರ್‍ ನಟಿ ಮೀನಾ ಮದುವೆಯಾಗಲಿದ್ದಾರೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಈ ಹೇಳಿಕೆ ಕಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದ್ದು, ಈ ಹೇಳಿಕೆ ನೀಡಿದ ಬೈಲ್ವಾನ್ ವಿರುದ್ದ ಧನುಷ್ ಅಭಿಮಾನಿಗಳು ಆಕ್ರೋಷ ವ್ಯಕ್ತಪಡಿಸಿ, ಆತನನ್ನು ಸೋಷಿಯಲ್ ಮಿಡಿಯಾ ಮೂಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಬೈಲ್ವಾನ್ ರಂಗನಾಥನ್ ಧನುಷ್ ಹಾಗೂ ಮೀನಾ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಧನುಷ್ ವಿಚ್ಚೇಧನ ಹಾಗೂ ಮೀನಾ ರವರ ಎರಡನೇ ಮದುವೆಯ ವಿಚಾರ ಬಂದಂತಹ ಸಮಯದಲ್ಲಿ ಬೈಲ್ವಾನ್ ರಂಗನಾಥನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಧನುಷ್ ಹಾಗೂ ಮೀನಾ ಇಬ್ಬರೂ ಭಾಗಶಃ ಒಂದೇ ವಯಸ್ಸಿನವರು. ಇಬ್ಬರೂ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಬ್ಬರೂ ಹೊಸ ಜೀವನ ಆರಂಭಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದೇ ವರ್ಷದ ಜೂನ್ ನಲ್ಲಿ ಅವರ ಮದುವೆಯಾಗಬಹುದು. ಮದುವೆಯಾಗದೇ ಇದ್ದರೂ ಸಹ ಒಂದೇ ಮನೆಯಲ್ಲಿ ಜೀವನ ಸಾಗಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಇನ್ನೂ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಬೈಲ್ವಾನ್ ರಂಗನಾಥನ್ ವಿರುದ್ದ ಧನುಷ್ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ.

ಇನ್ನೂ ನಟಿ ಧನುಷ್ ಹಾಗೂ ಐಶ್ವರ್ಯ ಬೇರೆಯಾಗಿ ಅನೇಕ ತಿಂಗಳುಗಳು ಕಳೆದಿದೆ. ಇನ್ನೂ ಕಳೆದ ವರ್ಷ ಈ ಜೋಡಿ ತಾವು ವಿಚ್ಚೇದನ ಪಡೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸುಮಾರು 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ವಿಚ್ಚೇದನ ಪಡೆದುಕೊಳ್ಳುವುದಾಗಿ ಅವರು ತಿಳಿಸಿದ್ದರು. ಆದರೆ ಕಳೆದ ಅಕ್ಟೊಬರ್‍ ಮಾಹೆಯಲ್ಲಿ ಮತ್ತೊಂದು ಸುದ್ದಿ ಸಹ ಕೇಳಿಬಂದಿದ್ದು, ಅದರಂತೆ ಮಗಳ ಸಂಸಾರವನ್ನು ಸರಿಪಡಿಸಲು ರಜನಿಕಾಂತ್ ರವರು ಅಖಾಡಕ್ಕೆ ಇಳಿದು ಧನುಷ್ ಹಾಗೂ ಐಶ್ವರ್ಯ ನಡುವಣ ವಿಬೇದಗಳನ್ನು ಸರಿಪಡಿಸಿ ಮತ್ತೆ ಅವರನ್ನು ಒಂದು ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಇನ್ನೂ ಒಂದಾಗಿಲ್ಲ. ಈ ಕಾರಣದಿಂದ ಅವರು ವಿಚ್ಚೇದನ ಪಡೆದುಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ.

ಅದೇ ರೀತಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಅನಾರೋಗ್ಯದಿಂದ ಮೀನಾ ಪತಿ ಸಾಗರ್‍ ಸಹ ಅನಾರೋಗ್ಯದಿಂದ ಮೃತಪಟ್ಟರು. ಸದ್ಯ ಪತಿಯನ್ನು ಕಳೆದುಕೊಂಡ ಮೀನಾ ತನ್ನ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಹ ಮೀನಾ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಈ ರೂಮರ್‍ ಅನ್ನು ಮೀನಾ ತಳ್ಳಿಹಾಕಿದರು.. ಇದೀಗ ಧನುಷ್ ಹಾಗೂ ಮಿನಾ ಮದುವೆಯಾಗಲಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ಬಂದಿದ್ದು, ಈ ಬಗ್ಗೆ ಅವರು ಯಾವ ರೀತಿಯಲ್ಲಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.