Film News

ಕನ್ನಡದ ಹೊಯ್ಸಳ ಸಿನೆಮಾಗೆ ಬರಿ ಶುಭಾಷಯ, ದಸರಾ ಸಿನೆಮಾಗೆ ಪುಲ್ ಖುಷ್ ಎಂದ ರಶ್ಮಿಕಾ, ಮತ್ತೆ ಟ್ರೋಲ್ ಆದ ರಶ್…!

ಕನ್ನಡದ ಸಿನೆಮಾದ ಮೂಲಕ ಸೌತ್ ಅಂಡ್ ನಾರ್ತ್ ನಲ್ಲೂ ಸ್ಟಾರ್‍ ಆಗಿರುವ ರಶ್ಮಿಕಾ ಮಂದಣ್ಣ ರವರ ಬಗ್ಗೆ ಕನ್ನಡಿಗರು ಆಗಾಗ ಕಿಡಿಕಾರುತ್ತಿರುತ್ತಾರೆ. ಅದಕ್ಕೆ ಆಕೆ ಮಾಡುವ ಕೆಲಸಗಳು ಸಹ ಹಾಗೆ ಇರುತ್ತದೆ ಎನ್ನಬಹುದಾಗಿದೆ. ಕನ್ನಡದಿಂದ ಬಂದು ಕನ್ನಡ ಸಿನೆಮಾಗಳ ಬಗ್ಗೆ ಕೀಳು ಭಾವನೆಯನ್ನು ರಶ್ಮಿಕಾ ಹೊಂದಿದ್ದಾರೆ ಎಂದು ಆಕೆಯ ವಿರುದ್ದ ಅನೇಕರು ಆಕ್ರೋಷ ಹೊರಹಾಕುತ್ತಿರುತ್ತಾರೆ. ಇದೀ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾಡಿದ ಪೋಸ್ಟ್ ನಿಂದಾಗಿ ಮತ್ತೆ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಕನ್ನಡ ಸಿನೆಮಾಗಳಿಂದ ದೂರ ಉಳಿದಿರುವ ರಶ್ಮಿಕಾ ಮಂದಣ್ಣ ಬಗ್ಗೆ ವಿಮರ್ಶೆಗಳು ಟೀಕೆಗಳು ಬರುತ್ತಲೇ ಇರುತ್ತವೆ. ಕಾಂತಾರ ಸಿನೆಮಾದ ಬಿಡುಗಡೆಯ ಸಮಯದಲ್ಲಿ ಆಕೆ ಸಿನೆಮಾ ನೋಡಿಲ್ಲ ಎಂದು ಹೇಳುವ ಮೂಲಕ ಭಾರಿ ಆಕ್ರೋಷಕ್ಕೆ ಕಾರಣವಾದರು. ಅನೇಕ ಸ್ಟಾರ್‍ ಗಳೇ ಕಾಂತಾರ ಸಿನೆಮಾ ನೋಡಿ ಮೆಚ್ಚುಗೆ ಮಾತುಗಳನ್ನಾಡಿದ್ದರು. ಆದರೆ ರಶ್ಮಿಕಾ ಮಾತ್ರ ಸಿನೆಮಾ ನೋಡಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಬಳಿಕ ಆಕೆಗೆ ಸಿನಿರಂಗದಲ್ಲಿ ಲೈಪ್ ಕೊಟ್ಟಂತಹ ಸಿನೆಮಾ ಪ್ರೊಡಕ್ಷನ್ ಹೆಸರು ಹೇಳದೇ ಸಜ್ನೆ ಮಾಡಿದ್ದಳು ಅದರಿಂದಲೂ ಆಕೆಯನ್ನು ಆಕೆಯ ಸಿನೆಮಾಗಳನ್ನು ಬ್ಯಾನ್ ಮಾಡಬೇಕೆಂಬ ಕೂಗುಗಳೂ ಸಹ ಕೇಳಿಬಂದವು. ಇದೀಗ ಮತ್ತೊಂದು ವಿವಾದಕ್ಕೆ ರಶ್ಮಿಕಾ ಕಾರಣವಾಗಿದ್ದಾರೆ.

ಮಾ.30 ರಂದು ಕನ್ನಡದ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್‍ ಅಭಿನಯದ ಬಹುನಿರೀಕ್ಷಿತ ಗುರುದೇವ ಹೊಯ್ಸಳ ಹಾಗೂ ತೆಲುಗಿನಲ್ಲಿ ನಾನಿ ಹಾಗೂ ಕೀರ್ತಿ ಸುರೇಶ್ ಅಭಿನಯದ ಪ್ಯಾನ್ ಇಂಡಿಯಾ ಸಿನೆಮಾ ದಸರಾ ಸಹ ಬಿಡುಗಡೆಯಾಗಿದೆ. ಎರಡೂ ಸಿನೆಮಾಗಳು ಬಿಗ್ ಬಜೆಟ್ ಸಿನೆಮಾಗಳಾಗಿದ್ದು, ಎರಡೂ ಸಿನೆಮಾಗಳಿಗೂ ರಶ್ಮಿಕಾ ವಿಶ್ ಮಾಡಿದ್ದಾರೆ. ಆದರೆ ರಶ್ಮಿಕಾ ಹೊಯ್ಸಳ ಸಿನೆಮಾದ ಪೋಸ್ಟರ್‍ ಹಂಚಿಕೊಂಡು ಹೊಯ್ಸಳ ಸಿನೆಮಾ ಯಶಸ್ಸು ಗಳಿಸಲಿ, ಡಾಲಿ ಧನಂಜಯ್ ಗೆ ಶುಭವಾಗಲಿ ಎಂದು ಪೋಸ್ಟ್ ಮಾಡಿದ್ದರು. ಬಳಿಕ ದಸರಾ ಸಿನೆಮಾದ ಪೋಸ್ಟರ್‍ ಸಹ ಹಂಚಿಕೊಂಡು ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಶೆಟ್ಟಿ ಹಾಗೂ ಇಡೀ ದಸರಾ ಚಿತ್ರತಂಡಕ್ಕೆ ದೊಡ್ಡ ಮಟ್ಟದ ಸಕ್ಸಸ್ ದೊರೆಯಲಿ, ನಿಮಗೆಲ್ಲರಿಗೂ ಶುಭ ಕೋರುತ್ತೇನೆ. ನಾನು ಈ ಸಿನೆಮಾ ಚಿತ್ರಮಂದಿರದಲ್ಲಿ ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಎರಡೂ ಪೋಸ್ಟರ್‍ ಗಳನ್ನು ಸೂಕ್ಷ್ಮ ವಾಗಿ ಗಮನಿಸಿದ ಕನ್ನಡಿಗರು ಆಕೆಗೆ ತೆಲುಗು ಸಿನೆಮಾದ ಮೇಲಿರುವ ಪ್ರೀತಿ ಅಕ್ಕರೇ ಕನ್ನಡ ಸಿನೆಮಾ ಮೇಲಿಲ್ಲ ಎಂದು ಮತ್ತೆ ಕಿಡಿ ಕಾರಿದ್ದಾರೆ. ಆಕೆಯ ವಿರುದ್ದ ದೊಡ್ಡ ಮಟ್ಟದ ಟ್ರೋಲ್ ಸಹ ಆಗುತ್ತಿದೆ. ಇನ್ನೂ ರಶ್ಮಿಕಾ ಕನ್ನಡ ಸಿನೆಮಾಗಳನ್ನು ಪೂರ್ಣವಾಗಿ ಮರೆತು ತೆಲುಗು, ತಮಿಳು ಹಾಗೂ ಹಿಂದಿ ಸಿನೆಮಾಗಳ ಮೇಲೆ ಒಲವು ಹೊಂದಿದ್ದಾರೆ.

Most Popular

To Top