Film News

ಜಿಮ್ ನಲ್ಲಿ ನಿಹಾರಿಕಾ ಹೆವಿ ವರ್ಕೌಟ್ಸ್, ಶಾಕಿಂಗ್ ಸೆಲ್ಫಿ ಸಖತ್ ವೈರಲ್, ಶಾಕ್ ಆದ ಅಭಿಮಾನಿಗಳು….!

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಸ್ಟಾರ್‍ ನಟಿಯಾಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮದುವೆಗೂ ಮುಂಚೆ ನಿಹಾರಿಕಾ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಯಾವ ಸಿನೆಮಾ ಸಹ ಸಕ್ಸಸ್ ಕಾಣಲಿಲ್ಲ. ಸದ್ಯ ಆಕೆ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸಿನೆಮಾ ಆಫರ್‍ ಗಳಿಗಾಗಿ ಸಹ ಟ್ರೈ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಲವು ದಿನಗಳಿಂದ ನಿಹಾರಿಕಾ ವೈಯುಕ್ತಿಕ ವಿಚಾರಗಳಿಂದ ಸಖತ್ ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ಸೆಲ್ಫಿ ಪೊಟೋ ಒಂದನ್ನು ಹಂಚಿಕೊಂಡಿದ್ದು, ಪೊಟೋ ಸಖತ್ ವೈರಲ್ ಆಗುತ್ತಿದೆ.

ನಟಿ ನಿಹಾರಿಕಾ ಕೊಣಿದೆಲಾ ಸುಮಾರು ದಿನಗಳ ಹಿಂದೆ ಪಬ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಆಕೆಗೆ ಪೊಲೀಸರ್‍ ಕ್ಲೀನ್ ಚಿಟ್ ಕೊಟ್ಟರು. ಅಂದು ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಆಕೆ ಕಳೆದ 2020 ರಲ್ಲಿ ಚೈತನ್ಯ ಜೊನ್ನಲಗಡ್ಡ ಜೊತೆಗೆ ವಿವಾಹವಾದರು. ಮನೆಯಲ್ಲಿ ಫಿಕ್ಸ್ ಮಾಡಿದಂತೆ ಆಕೆ ವಿವಾಹ ಆದರು. ಮದುವೆಯಾಗಿ ಎರಡು ವರ್ಷಗಳು ಕಳೆಯುತ್ತಾ ಬಂದಿದ್ದು, ಕೆಲವು ದಿನಗಳಿಂದ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿವೆ. ಇಬ್ಬರು ವಿಚ್ಚೇದನ ಪಡೆದುಕೊಳ್ಳಲು ಸಿದ್ದರಾಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಜೊತೆಗೆ ಚೈತನ್ಯ ಸಹ ನಿಹಾರಿಕಾ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಡಿಲೀಟ್ ಮಾಡಿದ್ದು, ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದು, ಈ ರೂಮರ್‍ ಗಳಿಗೆ  ಮತಷ್ಟು ಬಲ ತಂದುಕೊಟ್ಟಿತ್ತು. ಇದಾದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಏನೇ ಪೋಸ್ಟ್ ಹಂಚಿಕೊಂಡರು ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತಿದೆ.

ಇನ್ನೂ ನಿಹಾರಿಕಾ ಸೋಷಿಯಲ್ ಮಿಡಿಯಾ ಪೋಸ್ಟ್ ಗಳ ಬಗ್ಗೆ ಎಲ್ಲರಿಗೂ ಇದೀಗ ಆಸಕ್ತಿ ಹೆಚ್ಚಾಗಿದೆ. ನಿಹಾರಿಕಾ ಜಿಮ್  ನಲ್ಲಿ ವರ್ಕೌಟ್ ಮಾಡುತ್ತಾ ತನ್ನ ಫಿಜಿಕ್ ಕಾಪಾಡಿಕೊಳ್ಳುವ ಕೆಲಸ ದಲ್ಲಿದ್ದಾಳೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಜಿಮ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅದರಲ್ಲಿ ಆಕೆ ತನ್ನ ಜಿಮ್ ಟ್ರೈನರ್‍ ಜೊತೆಗೆ ಸೆಲ್ಫಿ ತೆಗೆದುಕೊಂಡು ಶೇರ್‍ ಮಾಡಿದ್ದಾರೆ. ಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಆಕೆ 5AM club ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ವರುಣ್ ಸಂದೇಶ್ ಪತ್ನಿ ವಿತಿಕ ಸಹ ಅದೇ ಜಿಮ್ ನಲ್ಲಿದ್ದು ಆಕೆಯೊಂದಿಗೂ ಸಹ ಸೆಲ್ಫಿಗೆ ಪೋಸ್ ಕೊಟ್ಟಿದಾರೆ.

ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಹಿಂದೆ ನಿಹಾರಿಕಾ ಜಿಮ್ ಗೆ ತನ್ನ ಪತಿಯೊಂದಿಗೆ ವರ್ಕೌಟ್ ಮಾಡಲು ಬರುತ್ತಿದ್ದರು. ಆದರೆ ಇದೀಗ ನಿಹಾರಿಕಾ ಒಂಟಿಯಾಗಿ ಬಂದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವುದು ಅವರ ವಿಚ್ಚೇದನದ ಬಗ್ಗೆ ಮತಷ್ಟು ರೂಮರ್‍ ಹರಿದಾಡಲು ಕಾರಣವಾಗಿದೆ. ಇನ್ನೂ ನಿಹಾರಿಕಾ ಚೈತನ್ಯ ವಿಚ್ಚೇದನದ ಸುದ್ದಿ ಅಷ್ಟೊಂದು ಸದ್ದು ಮಾಡುತ್ತಿದ್ದರೂ ಸಹ ಮೆಗಾ ಕುಟುಂಬದಿಂದ ಇನ್ನೂ ಯಾವುದೇ ಸ್ಪಷ್ಟನೆ ಬಂದಿಲ್ಲ.

Most Popular

To Top