Film News

ಪ್ರಚಾರಕ್ಕಾಗಿ ಅಷ್ಟೊಂದು ಗಿಮಿಕ್ ಮಾಡೋದಾ, ಮಂಚು ಬ್ರದರ್ಸ್ ಗಲಾಟೆ ಹಿಂದೆ ದೊಡ್ಡ ಟ್ವಿಸ್ಟ್, ಶಾಕ್ ಆದ ನೆಟ್ಟಿಗರು…..!

ಇತ್ತೀಚಿಗೆ ಮಂಚು ಕುಟುಂಬದಲ್ಲಿ ವಿಬೇದಗಳು ನಡೆಯುತ್ತಿವೆ ಎಂದು ಜೋರಾದ ಪ್ರಚಾರ ನಡೆಯುತ್ತಿತ್ತು. ಇದಕ್ಕೆ ಮತಷ್ಟು ಬಲ ಕೊಡುವಂತೆ ಕೆಲವು ದಿನಗಳ ಹಿಂದೆಯಷ್ಟೆ ಮಂಚು ಮನೋಜ್ ಮೇಲೆ ಮಂಚು ವಿಷ್ಣು ಗಲಾಟೆ ಮಾಡಿದ್ದಾನೆ ಎಂದು ಹೇಳುವಂತೆ ವಿಡಿಯೋ ಒಂದನ್ನು ಶೇರ್‍ ಮಾಡಿದ್ದರು. ಈ ವಿಡಿಯೋ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರ ಜೊತೆಗೆ ಮಂಚು ಮನೋಜ್ ಸಹ ಕೆಲವೊಂದು ಟ್ವೀಟ್ ಗಳನ್ನು ಮಾಡಿದ್ದು ಮತಷ್ಟು ಚರ್ಚೆಗಳು ಶುರುವಾದವು. ಬಳಿಕ ಮೋಹನ್ ಬಾಬು ಸಹ ವಾರ್ನ್ ಮಾಡಿದ್ದಾರೆ ಅದಕ್ಕಾಗಿ ವಿಡಿಯೋ ಡಿಲೀಟ್ ಮಾಡಿದ್ದಾರೆ ಎಂಬೆಲ್ಲಾ ಕಥನಗಳು ಕೇಳಿಬಂದವು ಆದರೆ ಅದರ ಹಿಂದೆ ದೊಡ್ಡ ಪ್ಲಾನ್ ಮಾಡಿದ್ದಾರೆ ಮಂಚು ಬ್ರದರ್ಸ್.

ಮಂಚು ವಿಷ್ಣು ಹಾಗೂ ಮನೋಜ್ ನಡುವೆ ಜೋರಾಗಿಯೇ ಗಲಾಟೆ ನಡೆದಿದೆ. ಇಬ್ಬರ ನಡುವಣ ಗಲಾಟೆಯನ್ನು ಸರಿಪಡಿಸಲು ಮೋಹನ್ ಬಾಬು ಹಾಗೂ ಮಂಚು ಲಕ್ಷ್ಮೀ ಸಹ ತುಂಬಾನೆ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ದಿನೇ ದಿನೇ ಈ ಬಗ್ಗೆ ಜೋರಾದ ಚರ್ಚೆಗಳು ನಡೆದವು. ಮಂಚು ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಈ ರಾದ್ದಾಂತ ಯಾವಾಗ ನಿಲ್ಲುತ್ತೆ ಎಂದು ಕಾಯುತ್ತಿದ್ದರು. ಇನ್ನೇನು ಗಲಾಟೆ ತೀವ್ರ ಪರಿಣಾಮ ಪಡೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಮಂಚು ಬ್ರದರ್ಸ್ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಆ ಗಲಾಟೆ ಹಿಂದೆ ಒಂದು ಹೈಡ್ರಾಮ ಇದೆ ಎನ್ನಬಹುದಾಗಿದೆ. ಆ ಮೂಲಕ ಏಪ್ರಿಲ್ ಗೂ ಮುಂಚೆಯೇ ಜನರನ್ನು ಮಂಚು ಬ್ರದರ್ಸ್ ಪೂಲ್ಸ್ ಮಾಡಿದ್ದಾರೆ ಎನ್ನಬಹುದಾಗಿದೆ.

ಇನ್ನೂ ಮಂಚು ಬ್ರದರ್ಸ್ ಗಲಾಟೆ ಎಲ್ಲಾ ಒಂದು ರಿಯಾಲಿಟಿ ಶೋ ಪ್ರಮೋಷನ್ ಗಾಗಿಯಂತೆ. ರಿಯಾಲಿಟಿ ಶೋಗಾಗಿ ಪ್ರಾಂಕ್ ಮಾಡಲಾಗಿದೆಯಂತೆ. ಈ ವಿಚಾರವನ್ನು ಸ್ವತಃ ಮಂಚು ವಿಷ್ಣು ರವರೇ ಹೊರಹಾಕಿದ್ದಾರೆ. ತಮ್ಮ ಸ್ವಂತ ಬ್ಯಾನರ್‍ ನಡಿ ರಿಯಾಲಿಟಿ ಶೋ ಪ್ರಾರಂಭ ಮಾಡುತ್ತಿದ್ದಾರಂತೆ. ಶೀಘ್ರದಲ್ಲೇ ಅದನ್ನು ಪ್ರೇಕ್ಷಕರ ಮುಂದೆ ತರಲಿದ್ದಾರಂತೆ. ಇನ್ನೂ ಈ ರಿಯಾಲಿಟಿ ಶೋ ಗೆ “ಹೌಸ್ ಆಫ್ ಮಂಚೂಸ್” ಎಂದು ಟೈಟಲ್ ಇಟ್ಟಿದ್ದಾರೆ. ಶೀಘ್ರದಲ್ಲೇ ಈ ರಿಯಾಲಿಟಿ ಶೋ ಅನ್ನು ಒಟಿಟಿ ಮೂಲಕ ಸ್ಟ್ರೀಮಿಂಗ್ ಮಾಡುವುದಾಗಿ ವಿಷ್ಣು ತಿಳಿಸಿದ್ದಾರೆ.

ಇನ್ನೂ ಮಂಚು ಬ್ರದರ್ಸ್ ಈ ಗಲಾಟೆಯ ಹಿಂದೆ ಇಷ್ಟೊಂದು ಗಿಮಿಕ್ ಇದೆ ಎಂಬುದನ್ನು ತಿಳಿದ ಬಳಿಕ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನ್ನಾ ಟ್ವಿಸ್ಟ್ ಮೈಂಡ್ ಬ್ಲಾಕ್ ಆಗಿದೆ, ಮಂಚು ಫ್ಯಾಮಿಲಿ ಎಂದರೇ ಅಷ್ಟಾದರೂ ಇರಬೇಕು ಎಂದು ವಿಮರ್ಶೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ಇದು ರಿಯಾಲಿಟಿ ಶೋ ಇರಬಹುದಾ ಅಥವಾ ಆ ವಿಡಿಯೋ ದಿಂದ ಮರ್ಯಾದೆ ಹೋಗಿದೆ ಅದನ್ನು ಕವರ್‍ ಮಾಡಿಕೊಳ್ಳಲು ಇದೊಂದು ಹೊಸ ಗಿಮಿಕ್ ಇರಬಹುದಾ ಎಂದು ಸಹ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Most Popular

To Top