News

ಗಂಡನನ್ನು ಸಾಯಿಸೋಕೆ 50 ಸಾವಿರ ಬಹುಮಾನ ಘೋಷಣೆ ಮಾಡಿ ಹೆಂಡ್ತಿ, ವಾಟ್ಸಾಪ್ ಸ್ಟೇಟಸ್ ಹಾಕಿದ ಪತ್ನಿ…..!

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತಾ ಹೇಳ್ತಾರೆ. ಆದರೆ ಕೆಲವೊಮ್ಮೆ ಇದು ಸುಳ್ಳಾಗುತ್ತದೆ. ಈ ಹಾದಿಯಲ್ಲೇ ಹೆಂಡತಿಯೊಬ್ಬಳು ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದು, ಈ ಕಾರಣದಿಂದ  ಪತಿಯನ್ನು ಕೊಲೆ ಮಾಡೋಕೆ ಆಕೆ ಸಿದ್ದವಾಗಿದ್ದಾಳೆ. ಗಂಡನ ಹತ್ಯೆಗೆ 50 ಸಾವಿರ ಬಹುಮಾನ ಸಹ ಘೋಷಣೆ ಮಾಡಿದ್ದಾರೆ. ಜೊತೆಗೆ ಈ ಆಫರ್‍ ಬಗ್ಗೆ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ್ದಾರೆ. ಈ ಕುರಿತು ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ.

ಆಗ್ರಾದ ಬಹ್ ಜಿಲ್ಲೆಯಲ್ಲಿ ಈ ದಂಪತಿ ಜಗಳವಾಡಿಕೊಂಡಿದ್ದಾರೆ. ಈ ಜಗಳದಿಂದಲೇ ಪತ್ನಿ ತನ್ನ ಪತಿಯ ಹತ್ಯೆಗೆ 50 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ. ಈ ಕುರಿತು ಆಕೆ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಸಂದೇಶ ಶೇರ್‍ ಮಾಡಿದ್ದಾರೆ. ಇದನ್ನು ನೋಡಿದ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಮಹಿಳೆಯ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಪತಿ ನೀಡಿದ ದೂರಿನಂತೆ 2022 ಜುಲೈ ಮಾಹೆಯ 9ನೇ ತಾರೀಖಿನಂದು ಮಧ್ಯಪ್ರದೇಶದ ಭಿಂಡ್ ನ ಹಳ್ಳಿಯೊಂದರಲ್ಲಿ ಮಹಿಳೆಯನ್ನು ವಿವಾಹವಾಗಿದ್ದಾರೆ. ವಿವಾಹವಾದ ಕಡಿಮೆ ದಿನಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದು, ಮದುವೆಯಾದ ಅದೇ ವರ್ಷದ ಡಿಸೆಂಬರ್‍ ಮಾಹೆಯಲ್ಲಿ ಆಕೆ ಗಂಡನ್ನು ತೊರೆದು ತವರು ಮನೆಗೆ ಸೇರಿದ್ದರು.

ಗಂಡನ ಮನೆಯನ್ನು ತೊರೆದ ಆಕೆ ಪೋಷಕರೊಂದಿಗೆ ವಾಸವಿದ್ದಾಳೆ. ಈ ದೂರಿನ ಪ್ರಕಾರ ಮಹಿಳೆ ಭಿಂಡ್ ನ ಪೊಲೀಸ್ ಠಾಣೆಯಲ್ಲಿ ಜೀವನಾಂಶ ದಾವೆ ಹೂಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ತನ್ನ ಮಾವ ಹಾಗೂ ಅತ್ತೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ದೂರಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಹೆಂಡತಿ ತನ್ನ ಗಂಡನನ್ನು ಕೊಲ್ಲುವ ವ್ಯಕ್ತಿಗೆ 50 ಸಾವಿರ ಬಹುಮಾನ ನೀಡುವುದಾಗಿ ವಾಟ್ಸಾಪ್ ಸ್ಟೇಟಸ್ ಹಂಚಿಕೊಂಡಿದ್ದಾಳೆ ಎಂದು ಗಂಡ ದೂರು ನೀಡಿದ್ದಾರೆ.

Most Popular

To Top