ತೆಲುಗು ನಟಿ ಶ್ವೇತಾ ಬಸು ಲೇಟೆಸ್ಟ್ ಬೋಲ್ಡ್ ಪೋಸ್, ವೈರಲ್ ಆದ ಕೊತ್ತಬಂಗಾರು ಲೋಕಂ ನಟಿಯ ಹಾಟ್ ಪೊಟೋಸ್….!

Follow Us :

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕ ರಾತ್ರೋ ರಾತ್ರಿ ಫೇಮಸ್ ಆಗು‌ತ್ತಾರೆ. ಅದೇ ಮಾದರಿಯಲ್ಲಿ ಫೇಡ್ ಔಟ್ ಸಹ ಆಗುತ್ತಿರುತ್ತಾರೆ. ಅಂತಹ ನಟಿಯರಲ್ಲಿ ಕೊತ್ತಬಂಗಾರು ಲೋಕಂ ಸಿನೆಮಾದ ನಟಿ ಶ್ವೇತಾ ಬಸು ಪ್ರಸಾದ್ ಸಹ ಸೇರುತ್ತಾರೆ. ಬಾಲಿವುಡ್ ನ ಮಕ್ಡಿ ಎಂಬ ಸಿನೆಮಾದಲ್ಲಿ ಬಾಲನಟಿಯಾಗಿ ಕೆರಿಯರ್ ಶುರು ಮಾಡಿದರು. ಬಳಿಕ 2008ರಲ್ಲಿ ಆಕೆಯನ್ನು ಕೊತ್ತ ಬಂಗಾರು ಲೋಕಂ ಎಂಬ ಸಿನೆಮಾದ ಮೂಲಕ  ಸೌತ್ ಪ್ರೇಕ್ಷಕರಿಗೆ ಪರಿಚಯಿಸಿದ್ದು ಟಾಲಿವುಡ್ ಸ್ಟಾರ್ ನಿರ್ಮಾಪಕ ದಿಲ್ ರಾಜು. ಈ ಸಿನೆಮಾದ ಮೂಲಕ ಆಕೆ ಭಾರಿ ಫೇಂ ಪಡೆದುಕೊಂಡರು.

ಕೊತ್ತಬಂಗಾರು ಲೋಕಂ ಎಂಬ ತೆಲುಗು ಸಿನೆಮಾದ ಮೂಲಕ ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡ ಈಕೆ ಕಡಿಮೆ ಸಮಯದಲ್ಲೇ ದೊಡ್ಡ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡರು. ಅದರಲ್ಲೂ ಅನೇಕ ಯುವಕರ ಕ್ರಷ್ ಆದರು. ಈ ಸಿನೆಮಾದ ಬಳಿಕ ಆಕೆಗೆ ಸಾಲು ಸಾಲು ಅವಕಾಶಗಳೂ ಸಹ ಹರಸಿ ಬಂದವು. ಆದರೆ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋತವು. ನಟಿ ಶ್ವೇತಾ ಬಸು ಪ್ರಸಾದ್ ಬಾಲನಟಿಯಾಗಿ ಮಕ್ಡಿ ಎಂಬ ಸಿನೆಮಾದಲ್ಲಿ ದ್ವಿಪಾತ್ರ ಅಭಿನಯ ಮಾಡಿದರು. ಇನ್ನೂ ಈ ಸಿನೆಮಾಗಾಗಿ ಆಕೆ ಅಬ್ಡುಲ್ ಕಲಾಂ ರವರಿಂದ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಆಗಿ ಅವಾರ್ಡ್ ಪಡೆದುಕೊಂಡರು. ಇನ್ನೂ ಸಿನೆಮಾಗಳಲ್ಲಿ ಆಕೆಗೆ ಅವಕಾಶಗಳು ಕಡಿಮೆಯಾದ ಸಮಯದಲ್ಲಿ ಒಂದು ಕೆಟ್ಟ ಸಂಘಟನೆ ಸಿನಿರಂಗದ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿತ್ತು. ಆ ಘಟನೆಯಿಂದಾಗಿ ಆಕೆ ಜೀವನದಲ್ಲಿ ಅನೇಕ ತಿರುವುಗಳನ್ನು ಪಡೆದುಕೊಂಡರು. ಬಳಿಕ ಆಕೆಗೆ ಅನೇಕ ನಟಿಯರು ಸರ್ಪೋಟ್ ಮಾಡಿದರು. ಕೆಲವು ದಿನಗಳ ಅಜ್ಞಾತವಾಗಿರುವ ಈಕೆ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಅಲ್ಲಿ ಕೆಲವೊಂದು ಸೀರಿಯಲ್ ಗಳಲ್ಲಿ ಕಾಣಿಸಿಕೊಂಡರು. ಕೆಲವೊಂದು ಸಿನೆಮಾಗಳಲ್ಲಿ ಆಕೆ ಸಹ ನಿರ್ದೇಶಕಿಯಾಗಿಗೂ ಸಹ ಕೆಲಸ ಮಾಡಿದ್ದರು. ಬಳಿಕ 2018ರಲ್ಲಿ ಫಿಲಂ ಮೇಕರ್‍ ರೋಹಿತ್ ಎಂಬಾತನನ್ನು ಮದುವೆಯಾದರು. ಮದುವೆಯಾದ ಒಂದೇ ವರ್ಷದಲ್ಲೇ ಆತನಿಂದ ದೂರವಾದರು.

ಇನ್ನೂ ನಟಿ ಶ್ವೇತಾ ಬಸು ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಆಕೆ ಎಲ್ಲಿ ಹೋದರೂ ಅಲ್ಲಿನ ಕೆಲವೊಂದು ಪೊಟೋಗಳನ್ನು ತೆಗೆದುಕೊಂಡು ಅವುಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕಡಿಮೆ ಸಮಯಲ್ಲೇ ಲಕ್ಷಾಂತರ ವೀಕ್ಷಣೆ ಕಾಣುತ್ತಿರುತ್ತವೆ. ಇದೀಗ ಆಕೆ ಮತ್ತೊಮ್ಮೆ ಬೋಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವೀಲ್ ಲೆಸ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ ಹೈಲೈಟ್ ಆಗುವಂತೆ ಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಆಕೆಯ ಫಾಲೋವರ್ಸ್ ಸೇರಿದಂತೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಕೊನೆಯದಾಗಿ ಆಕೆ ಜೂಬ್ಲಿ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು.