ಬಾಲಕೃಷ್ಣ ರವರ ಮಾಸ್ ಹಾಡಿಗೆ ಭರ್ಜರಿಯಾಗಿ ಕುಣಿದ ಕಾಜಲ್ ಶ್ರೀಲೀಲಾ, ವೈರಲ್ ಆದ ವಿಡಿಯೋ…!

Follow Us :

ನಂದಮೂರಿ ಬಾಲಕೃಷ್ಣ ಹಾಗೂ ನಿರ್ದೇಶಕ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಭಗವಂತ್ ಕೇಸರಿ ಎಂಬ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ.  ಇನ್ನೂ ಈ ಸಿನೆಮಾದ ಶೂಟೀಂಗ ಆರಂಭವಾದಾಗಿನಿಂದ ಚಿತ್ರತಂಡ ಒಂದಲ್ಲ ಒಂದು ರೀತಿಯಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ಈ ಸಿನೆಮಾದಲ್ಲಿ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಹಾಗೂ ಶ್ರೀಲೀಲಾ ನಟಿಸುತ್ತಿದ್ದು, ಈ ಇಬ್ಬರೂ ಬಾಲಕೃಷ್ಣ ರವರ ಸೂಪರ್‍ ಹಿಟ್ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಂದಮೂರಿ ಬಾಲಕೃಷ್ಣ ರವರ ಕೆರಿಯರ್‍ ನಲ್ಲಿ ಭಾರಿ ಸಕ್ಸಸ್ ಕಂಡ ಸಿನೆಮಾ ಎಂದರೇ ಅಖಂಡ ಎಂದು ಹೇಳಬಹುದು. ಈ ಸಿನೆಮಾದ ಬಳಿಕ ಬಾಲಯ್ಯ ಭಾರಿ ಮಟ್ಟದಲ್ಲೇ ಕಂ ಬ್ಯಾಕ್ ಮಾಡಿದರು. ಈ ಸಿನೆಮಾ ಬಾಲಕೃಷ್ಣರವರಿಗೆ ಭಾರಿ ಫೇಂ ತಂದುಕೊಟ್ಟಿತ್ತು. ಬಳಿಕ ಅದೇ ಜೋಷ್ ನಲ್ಲಿ ವೀರಾಸಿಂಹರೆಡ್ಡಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡಿದೆ. ಸದ್ಯ ಬಾಲಕೃಷ್ಣ ಅನೀಲ್ ರಾವುಪೂಡಿ ಜೊತೆಗೆ ಭಗವಂತ್ ಕೇಸರಿ ಎಂಬ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಯ್ಯ ಹ್ಯಾಟ್ರಿಕ್ ಹಿಟ್ ಕನಸಿನಲ್ಲಿದ್ದಾರೆ. ದಸರಾ ಹಬ್ಬಕ್ಕೆ ಈ ಸಿನೆಮಾ ಹೇಗಾದರೂ ಮಾಡಿ ತೆರೆಗೆ ತರಬೇಕೆಂದು ಚಿತ್ರತಂಡ ಶ್ರಮ ವಹಿಸುತ್ತಿದೆ. ಈ ಸಿನೆಮಾದ ಶೂಟಿಂಗ್ ಬಳಿಕ ಬಾಲಯ್ಯ ಹಾಗೂ ಬಾಬಿ ಕಾಂಬಿನೇಷನ್ ನ ಸಿನೆಮಾ ಸಹ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಭಗವಂತ್ ಕೇಸರಿ ಶೂಟಿಂಗ್ ಆರಂಭವಾದಾಗಿನಿಂದ ಏನೋ ಒಂದು ವಿಧದಲ್ಲಿ ಚಿತ್ರತಂಡ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಲೇ ಇದ್ದಾರೆ. ಈ ಹಿಂದೆ ಅನೀಲ್ ರಾವಿಪೂಡಿ ಫೈಟ್ ಮಾಸ್ಟರ್‍ ಗಳ ಜೊತೆಗೆ ಬಾಲಕೃಷ್ಣ ರವರ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದರು. ಇದೀಗ ಕಾಜಲ್ ಅಗರ್ವಾಲ್ ಹಾಗೂ ಶ್ರೀಲೀಲಾ ಸಹ ಭರ್ಜರಿಯಾಗಿ ಕುಣಿದಿದ್ದಾರೆ. ಬಾಲಕೃಷ್ಣರವರ ನರಸಿಂಹನಾಯಡು ಎಂಬ ಸಿನೆಮಾದಲ್ಲಿನ ಚಿಲಕಪಚ್ಚ ಕೋಕ ಎಂಬ ಹಾಡಿಗೆ ಮಾಸ್ ಆಗಿ ಕುಣಿದಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ಭಗವಂತ್ ಕೇಸರಿ ಸಿನೆಮಾದಲ್ಲಿ ಬಾಲಕೃಷ್ಣಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದು, ಶ್ರೀಲೀಲಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡಿತ್ತು. ನಿನ್ನೆಯಷ್ಟೆ ಕಾಜಲ್ ಅಗರ್ವಾಲ್ ಹುಟ್ಟುಹಬ್ಬದ ಅಂಗವಾಗಿ ಆಕೆಯ ಫಸ್ಟ್ ಲುಕ್ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು. ಅದೇ ರೀತಿ ಶ್ರೀಲೀಲಾ ಹುಟ್ಟುಹಬ್ಬದ ಅಂಗವಾಗಿ ಸಹ ಆಕೆಯ ಫಸ್ಟ್ ಲುಕ್ ಪೋಸ್ಟರ್‍ ಸಹ ರಿಲೀಸ್ ಆಗಿತ್ತು. ಇದೀಗ ಕಾಜಲ್ ಅಗರ್ವಾಲ್ ಹಾಗೂ ಶ್ರೀಲೀಲಾ ರವರ ಈ ಮಾಸ್ ಡ್ಯಾನ್ಸ್ ವಿಡಿಯೋ ಮಾತ್ರ ಸಖತ್ ಸದ್ದು ಮಾಡುತ್ತಿದೆ.