Film News

ಮಹೇಶ್ ಬಾಬು ಗುಂಟೂರು ಖಾರಂ ಸಿನೆಮಾದಿಂದ ಔಟ್ ಆದ ಪೂಜಾ ಹೆಗ್ಡೆ, ಪೂಜಾ ಹೆಗ್ಡೆ ಸ್ಥಾನದಲ್ಲಿ ಆ ನಟಿಗೆ ಚಾನ್ಸ್…..!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಗುಂಟೂರು ಖಾರಂ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಅಂದುಕೊಂಡಂತೆ ಎಲ್ಲಾ ಆಗಿದ್ದರೆ ಈ ಸಿನೆಮಾದ ಶೂಟಿಂಗ್ ಬಹುತೇಕ ಭಾಗ ಮುಗಿಯಬೇಕಿತ್ತು. ಕೆಲವೊಂದು ಕಾರಣಗಳಿಂದ ಈ ಸಿನೆಮಾ ತಡವಾಗಿದೆ. ಇನ್ನೂ ಈ ಸಿನೆಮಾದಲ್ಲಿ ಮಹೇಶ್ ಬಾಬು ರವರಿಗೆ ಜೋಡಿಯಾಗಿ ಪೂಜಾ ಹೆಗ್ಡೆಯವರನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಆಕೆಯ ಬದಲಿಗೆ ಬೇರೆ ನಟಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಯೊಂದು ಹರಿದಾಡುತ್ತಿದೆ.

ಕಳೆದ ವರ್ಷದಿಂದ ನಟಿ ಪೂಜಾ ಹೆಗ್ಡೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಾಣುತ್ತಿದ್ದಾರೆ. ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಆದರೆ ಆಕೆಗಿರುವ ಕ್ರೇಜ್ ಮೂಲಕ ಆಕೆ ಟಾಲಿವುಡ್ ನಲ್ಲಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ವಿಜಯ್ ದೇವರಕೋಂಡ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಜನಗಣಮನ ಎಂಬ ಸಿನೆಮಾದಲ್ಲಿ ಪೂಜಾ ಹೆಗ್ಡೆ ನಟಿಸಬೇಕಿತ್ತು. ಕೆಲವೊಂದು ಕಾರಣಗಳಿಂದ ಈ ಸಿನೆಮಾ ಸಹ ಸ್ಥಗಿತಗೊಂಡಿತ್ತು. ಬಳಿಕ ಪೂಜಾ ಹೆಗ್ಡೆ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದರು. ಈ ಬಗ್ಗೆ ಅಧಿಕೃತ ಪ್ರಕಟಣೆ ಸಹ ಹೊರಬಂದಿತ್ತು. ಆದರೆ ಇದೀಗ ಆಕೆಯನ್ನು ಈ ಸಿನೆಮಾದಿಂದ ಹೊರಗಿಡಲಾಗಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಇನ್ನೂ ಪೂಜಾ ಹೆಗ್ಡೆ ಇದೀಗ ಗುಂಟೂರು ಖಾರಂ ಸಿನೆಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಗುಂಟೂರು ಖಾರಂ ಸಿನೆಮಾದ ಶೂಟಿಂಗ್ ಆರಂಭವಾದಾಗಿನಿಂದಲೂ ಸಿನೆಮಾದ ಕಥೆ, ರಿಲೀಸ್ ಡೇಟ್, ಕಲಾವಿದರ ಬದಲಾವಣೆ ಸೇರಿದಂತೆ ಅನೇಕ ಬದಲಾವಣೆಗಳು ನಡೆಯುತ್ತಲೇ ಇದೆ. ಇದೀಗ ಪೂಜಾ ಹೆಗ್ಡೆಯನ್ನು ಈ ಸಿನೆಮಾದಿಂದ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಪೂಜಾ ಹೆಗ್ಡೆ ಕೆಲವೊಂದು ವಿಚಾರಗಳಲ್ಲಿ ಚಿತ್ರತಂಡಕ್ಕೆ ಕಿರಿಕಿರಿ ಮಾಡಿದ್ದರಂತೆ ಆ ಕಾರಣದಿಂದಲೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಪೂಜಾ ಹೆಗ್ಡೆ ಸಹ ಜೂನ್, ಡಿಸೆಂಬರ್‍ ವರೆಗೂ ಆಕೆ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣದಿಂದ ಆಕೆ ಆ ಸಿನೆಮಾದಿಂದ ಹೊರಬಂದಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ಪೂಜಾ ಹೆಗ್ಡೆ  ಗುಂಟೂರು ಖಾರಂ ಸಿನೆಮಾದಿಂದ ದೂರವಾದ ಹಿನ್ನೆಲೆಯಲ್ಲಿ ಆಕೆಯ ಸ್ಥಾನಕ್ಕೆ ಮತ್ತೋರ್ವ ನಟಿಯ ಹೆಸರು ಬಲವಾಗಿ ಕೇಳಿಬರುತ್ತಿದೆ. ಇತ್ತೀಚಿಗೆ ಹ್ಯಾಟ್ರಿಕ್ ಗೆಲುವು ಪಡೆದುಕೊಂಡ ಸಂಯುಕ್ತಾ ಮಿನನ್ ಗುಂಟೂರು ಖಾರಂ ಸಿನೆಮಾದಲ್ಲಿ ಮಹೇಶ್ ಬಾಬು ಜೊತೆಗೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾತ್ರ  ಹೊರಬಂದಿಲ್ಲ. ಇನ್ನೂ ಈ ಸಿನೆಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.13 ರಂದು ಅದ್ದೂರಿಯಾಗಿ ತೆರೆಕಾಣಲಿದೆ.

Most Popular

To Top