Film News

ಆತನೊಂದಿಗೆ ಎರಡು ಭಾರಿ ಮದುವೆಯಾಗಿದೆ ಎಂದ ರಕುಲ್, ಮದುವೆಯ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಬ್ಯೂಟಿ….!

ಸಿನಿರಂಗದ ಸೆಲೆಬ್ರೆಟಿಗಳು ಸಿನೆಮಾಗಳ ಜೊತೆ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳಿಂದಲೂ ಸಹ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ. ಸುಮಾರು ದಿನಗಳಿಂದ ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ನಟ ಜಾಕಿ ಭಗ್ನಾನಿ ಡೇಟಿಂಗ್ ನಲ್ಲಿದ್ದಾರೆ. ಅವರು ಸುದ್ದಿ ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಲೇ ಇರುತ್ತದೆ. ಇದೀಗ ಮತ್ತೊಂದು ರೂಮರ್‍ ಕೇಳಿಬರುತ್ತಿದ್ದು, ಅದರಂತೆ ರಕುಲ್ ಪ್ರೀತ್  ಆತನೊಂದಿಗೆ ನನಗೆ ಎರಡು ಬಾರಿ ಮದುವೆ ಮಾಡಿದ್ದಾರೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗಿದೆ.

ಸಿನಿರಸಿಕರಿಗೆ ಅಷ್ಟೊಂದು ಪರಿಚಯ ಬೇಡದ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಕಳೆದ ವರ್ಷ ಐದಾರು ಸಿನೆಮಾಗಳಲ್ಲಿ ರಕುಲ್ ಪ್ರೀತ್ ನಟಿಸಿದ್ದರು. ಆದರೆ ಈ ಪೈಕಿ ಯಾವುದೇ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ಆಕೆ ಮತ್ತೆ ಸೌತ್ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ವೆಂಕಟಾದ್ರಿ ಎಕ್ಸ್ ಪ್ರೆಸ್, ಲೌಖ್ಯಂ, ಕರೆಂಟ್ ತೀಗ, ಬ್ರೂಸ್ ಲೀ, ಸರೈನೋಡು, ಧ್ರುವಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸೌತ್ ನಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಬಾಲಿವುಡ್ ನಲ್ಲು ಪುಲ್ ಆಕ್ಟೀವ್ ಆಗಿದ್ದಾರೆ. ಇನ್ನೂ ರಕುಲ್ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಆಕೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ತಮ್ಮ ಮದುವೆಯ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಕುಲ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆಗೆ ರಕುಲ್ ಡೇಟಿಂಗ್ ನಲ್ಲಿದ್ದಾರೆ.  ಈ ವಿಚಾರವನ್ನು ಸ್ವತಃ ಆಕೆಯೇ ಹೇಳಿದ್ದರು. ಆಗಾಗ ತನ್ನ ಲವರ್‍ ಜೊತೆಗೆ ವೆಕೇಷನ್ ಗಳಿಗೆ ಹಾರುತ್ತಾ ಎಂಜಾಯ್ ಮಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಅವರಿಬ್ಬರ ಮದುವೆ ಬಗ್ಗೆ ಅನೇಕ ಬಾರಿ ರೂಮರ್‍ ಗಳು ಕೇಳಿಬಂದವು. ಈ ಬಗ್ಗೆ ಇದೀಗ ರಕುಲ್ ಸಹ ರಿಯಾಕ್ಟ್ ಆಗಿದ್ದಾರೆ. ಈ ವೇಳೆ ಮಾತನಾಡಿದ ಆಕೆ ನಾವಿಬ್ಬರೂ ರಿಲೇಷನ್ ಶೀಪ್ ನಲ್ಲಿರುವ ಬಗ್ಗೆ ರಹಸ್ಯವಾಗಿಡಬೇಕೆಂದುಕೊಂಡಿರಲಿಲ್ಲ. ಆ ರೀತಿ ಮಾಡಲು ನಾವು ಚಿಕ್ಕ ಮಕ್ಕಳು ಅಲ್ವಲ್ಲಾ. ಪ್ರೀತಿ ಪ್ರೇಮ ಎಂಬುದು ಎಲ್ಲರ ಜೀವನದಲ್ಲಿ ಸಹಜವಾಗಿ ನಡೆಯುವಂತಹದು. ಇದರಲ್ಲಿ ಬಚ್ಚಿಡಲು ಏನಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಈಗಾಗಲೇ ನಮಗೆ ಎರಡು ಬಾರಿ ಮದುವೆ ಮಾಡಿದ್ದಾರೆ.

ಮೊದಲಿಗೆ ಡಿಸೆಂಬರ್‍ ನಲ್ಲಿ ಮದುವೆ ಎಂದರೂ, ಡಿಸೆಂಬರ್‍ ಕಳೆದ ಬಳಿಕ ಈ ವರ್ಷ ಫೆಬ್ರವರಿ ಮಾಹೆಯಲ್ಲಿ ರಹಸ್ಯವಾಗಿ ಮದುವೆಯಾಗಿದೆ ಎಂದು ಸುದ್ದಿ ಹರಿದಾಡಿತ್ತು. ಆದ್ದರಿಂದ ನಾವು ಮದುವೆ ಮಾಡಿಕೊಂಡ ದಿನ ನಿಜಕ್ಕೂ ಅವರಿಗೆ ತಿಳಿದೇ ತಿಳಿಯುತ್ತದೆ. ಆ ಸುದ್ದಿಗಳು ಬಂದಾಗ ನಾವಿಬ್ಬರೂ ತುಂಬಾ ಚೆನ್ನಾಗಿ ನಗುತ್ತಿದ್ದೆವು ಎಂದು ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

Most Popular

To Top