ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಮರೆಯದ ರಾಮ್ ಚರಣ್-ಉಪಾಸನಾ, ಪ್ರಶಂಸೆ ಮಾಡಿದ ನೆಟ್ಟಿಗರು…!

Follow Us :

ತೆಲುಗು ಸಿನಿರಂಗದ ಸ್ಟಾರ್‍ ಜೋಡಿಗಳಲ್ಲಿ ಒಂದಾದ ರಾಮ್ ಚರಣ್ ಹಾಗೂ ಉಪಾಸನಾ ಅಮೇರಿಕಾದಲ್ಲಿ ನಡೆದ RRR ಈವೆಂಟ್ ನಲ್ಲಿ ಹಾಜರಾಗಿದ್ದರು. ಈ ವೇಳೆ ಈ ಜೋಡಿ ಭಾರತೀಯ ಸಂಪ್ರದಾಯದಂತೆ ಉಡುಗೆ ತೊಟ್ಟು, ಭಾರತೀಯತೆ  ಸಾರಿದರು. ಜೊತೆಗೆ ಒಂದು ಮಿಡಿಯಾ ಸಂಸ್ಥೆ ಮಾಡಿದ ಸಂದರ್ಶನದಲ್ಲಿ ಆ ಜೋಡಿ ಮಾಡಿದ ಕೆಲಸ ಇಡೀ ಭಾರತೀಯರು ಗರ್ವ ಪಡುವಂತಿದೆ. ಜೊತೆಗೆ ಅವರ ಆ ಕೆಲಸಕ್ಕೆ ನೆಟ್ಟಿಗರು ಪ್ರಶಂಸೆ ಮಾಡುತ್ತಿದ್ದಾರೆ.

ಆಸ್ಕಾರ್‍ ಈವೆಂಟ್ ನಲ್ಲಿ ರಾಮ್ ಚರಣ್ ಜೊತೆಗೆ ಉಪಾಸನಾ ಸಹ ಭಾಗಿಯಾಗಿದ್ದರು. ಈ ವೇಳೆ ಅಮೇರಿಕಾದ ಮಿಡಿಯಾ ಒಂದಕ್ಕೆ ಸಂದರ್ಶನ ಕೊಟ್ಟರು. ಈ ವೇಳೆ ಅನೇಕ ವಿಚಾರಗಳನ್ನು ಈ ಜೋಡಿ ಹಂಚಿಕೊಂಡರು. ಇದೇ ವೇಳೆ ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾಗಳು, ಉಪಾಸನಾ ಬಗ್ಗೆ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಯಿತು. ಈ ವೇಳೆ ರಾಮ್ ಚರನ್ ಉಪಾಸನಾ ಸೀತಾರಾಮ ವಿಗ್ರಹಗಳನ್ನು ತೋರಿಸಿದರು. ನಾವು ಪ್ರಪಂಚದಲ್ಲಿ ಯಾವುದೇ ಮೂಲೆಗೆ ಹೋದರೂ ನಾನು ಹಾಗೂ ನನ್ನ ಪತ್ನಿ ಈ ವಿಗ್ರಹಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದೂ ಹೇಳಿದ್ದಾರೆ.

ಸಂದರ್ಶನದಲ್ಲಿ ಚರಣ್ ಮಾತನಾಡುತ್ತಾ ನಾವು ಯಾವುದೇ ದೇಶಕ್ಕೆ ಹೋದರೂ ಸೀತಾರಾಮ ವಿಗ್ರಹಗಳನ್ನು ತೆಗೆದುಕೊಂಡು ಹೋಗುತ್ತೇವೆ.  ಈ ಸಣ್ಣ ದೇಗುಲದ ವ್ಯವಸ್ಥೆ ನಮ್ಮನ್ನು ನಮ್ಮ ಸಂಪ್ರದಾಯ ಹಾಗೂ ನಮ್ಮ ದೇಶದೊಂದಿಗೆ ಕನೆಕ್ಟ್ ಮಾಡುತ್ತದೆ ಎಂಬುದು ನಮ್ಮ ನಂಬಿಕೆ ಎಂದು ಸಂದರ್ಶನದಲ್ಲಿ ರಾಮ್ ಚರಣ್ ತಿಳಿಸಿದ್ದಾರೆ. ಇನ್ನೂ ಈ ಸಂದರ್ಶದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಭಾರತೀಯರು ಈ ಜೋಡಿಯನ್ನು ಪ್ರಶಂಸೆ ಮಾಡುತ್ತಿದ್ದಾರೆ. ಅಮೇರಿಕಾಗೆ ಹೋದರೂ ಸಹ ದೇಶದ ಮೇಲಿನ ಗೌರವ, ಭಕ್ತಿಯನ್ನು ಮೆಚ್ಚಿದ್ದಾರೆ. ಇನ್ನೂ ಮತ್ತೊಂದು ಸಂದರ್ಶನದಲ್ಲೂ ಅಯ್ಯಪ್ಪ ದೀಕ್ಷೆಯ ಪ್ರಾಮುಖ್ಯತೆಯನ್ನು ಹೇಳಿದ್ದರು.

ಇನ್ನೂ ರಾಮ್ ಚರಣ್ ಹಾಗೂ ಉಪಸನಾ ರವರ ಈ ದೇಶಭಕ್ತಿಯನ್ನು ನೆಟ್ಟಿಗರೂ ಹಾಗೂ ಅಭಿಮಾನಿಗಳು ಹೊಗಳುತ್ತಿದ್ದಾರೆ. ಕಾಮೆಂಟ್ ಗಳ ಮೂಲಕ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ರಾಮ್ ಚರಣ್ RRR ಸಿನೆಮಾದ ಬಳಿಕ ಖ್ಯಾತ ನಿರ್ದೇಶಕ ಶಂಕರ್‍ ನಿರ್ದೇಶನದಲ್ಲಿ RC15 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಚರಣ್ ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಿದ್ದು, ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ಚರಣ್ ರವರ ಹುಟ್ಟುಹಬ್ಬದಂದು ಈ ಸಿನೆಮಾದ ಟೈಟಲ್ ರಿವೀಲ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.