Film News

ಮತ್ತೊಮ್ಮೆ ಅನಾರೋಗ್ಯಕ್ಕೆ ತುತ್ತಾದ ಪ್ರಭಾಸ್, ಚಿಕಿತ್ಸೆಗಾಗಿ ವಿದೇಶಕ್ಕೆ ಹೊರಟರೇ?

ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಪ್ರಭಾಸ್ ಸೌತ್ ಸಿನಿರಂಗ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಅಭಿನಯದ ಆದಿಪುರುಷ್ ಸಿನೆಮಾ ಸಹ ಬಿಡುಗಡೆಗೆ ಸಿದ್ದವಾಗಿದೆ. ಸದಾ ಈ ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಸಡನ್ ಆಗಿ ವಿದೇಶಕ್ಕೆ ಹಾರಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ವಿದೇಶಕ್ಕೆ ಹೋಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಸಿನೆಮಾ ಶೂಟಿಂಗ್ ಗಳಿಂದ ಬ್ಯುಸಿಯಾಗಿರುವ ನಟ ಪ್ರಭಾಸ್ ವಿದೇಶಕ್ಕೆ ಹೋಗಿದ್ದಾರೆ. ಮೊದಲಿಗೆ ಎಲ್ಲರೂ ಸಿನೆಮಾದ ಶೂಟಿಂಗ್ ಗಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ ಆರೋಗ್ಯ ಸಮಸ್ಯೆಯಿಂದ  ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗುತ್ತಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಪ್ರಭಾಸ್ ರವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಾಗಿದೆಯಂತೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದೂ ಸಹ ವೈದ್ಯರು ಸಲಹೆ ನೀಡಿದ್ದಾರಂತೆ. ಇದರಿಂದಾಗಿ ಈಗಾಗಲೇ ಶೂಟಿಂಗ್ ನಡೆಯುತ್ತಿರುವ ಸಲಾರ್‍, ಪ್ರಾಜೆಕ್ಟ್ ಕೆ, ರಾಜ್ ಡಿಲಕ್ಸ್ ಸಿನೆಮಾಗಳ ಶೂಟಿಂಗ್ ಸಹ ಸ್ಥಗಿತಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಕಾರಣದಿಂದ ಈ ಸಿನೆಮಾಗಳ ಬಿಡುಗಡೆ ಸಹ ತಡವಾಗಬಹುದು ಎಂದೂ ಸಹ ಹೇಳಲಾಗುತ್ತಿದೆ.

ಪ್ರಭಾಸ್ ಸದ್ಯ ಸಲಾರ್‍ ಮೂವಿ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಕೊನೆಯ ಹಂತಕ್ಕೆ ತಲುಪಿದೆ. ಪ್ರಾಜೆಕ್ಟ್ ಕೆ ಸಿನೆಮಾದ ಸಹ ಅರ್ಧ ಭಾಗದಷ್ಟು ಪೂರ್ಣಗೊಂಡಿದೆ. ಇನ್ನೂ ರಾಜ್ ಡಿಲಕ್ಸ್ ಸಿನೆಮಾದ ಶೂಟಿಂಗ್ ಸಹ ಕೆಲವು ದಿನಗಳ ಹಿಂದೆಯಷ್ಟೆ ಶುರುವಾಗಿದೆ. ಇನ್ನೂ ಸಲಾರ್‍ ಸಿನೆಮಾ ಇದೇ ವರ್ಷದ ಸೆ.28 ರಂದು ಬಿಡುಗಡೆಯಾಗಬೇಕಾಗಿದೆ. ಅದೇ ರೀತಿ ಪ್ರಾಜೆಕ್ಟ್ ಕೆ ಮುಂದಿನ ವರ್ಷ ಜನವರಿ 12 ರಂದು ಬಿಡುಗಡೆಯಾಗುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸದ್ಯ ಪ್ರಭಾಸ್ ರವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿಯ ಕಾರಣದಿಂದ ಈ ಸಿನೆಮಾಗಳ ಶೂಟಿಂಗ್ ತಡವಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಪ್ರಭಾಸ್ ಆರೋಗ್ಯದ ಸುದ್ದಿಯ ಬಗ್ಗೆ ಅಧಿಕೃತ ಮಾಹಿತಿ ನೀಡುವಂತೆ ಅಭಿಮಾನಿಗಳೂ ಸಹ ಕೋರುತ್ತಿದ್ದಾರೆ.

ಇನ್ನೂ ಆದಿಪುರುಷ್ ಟೀಸರ್‍ ಲಾಂಚ್ ಸಮಯದಲ್ಲಿ ಪ್ರಭಾಸ್ ಮೊಣಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರಂತೆ. ಬಳಿಕ ಪ್ರಭಾಸ್ ಸದಾ ಜ್ವರದಿಂದ ಬಳಲುತ್ತಿದ್ದರಂತೆ. ಈ ಕಾರಣದಿಂದ ಪ್ರಭಾಸ್ ಕೆಲವು ದಿನಗಳ ಕಾಲ ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದರಂತೆ. ಇದೀಗ ಪ್ರಭಾಸ್ ವಿದೇಶಗಳಿಗೆ ಚಿಕಿತ್ಸೆಗಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅಭಿಮಾನಿಗಳು ಯಾವುದೇ ರೀತಿಯಲ್ಲೂ ಭಯಪಡುವ ಅಗತ್ಯವಿಲ್ಲ. ಸಾಮಾನ್ಯ ಪರೀಕ್ಷೆಗಾಗಿ ಪ್ರಭಾಸ್ ವಿದೇಶಗಳಿಗೆ ಹೋಗಿದ್ದಾರೆ ಎಂದು ಪ್ರಭಾಸ್ ಟೀಂ ಹೇಳುತ್ತಿದೆ.

Most Popular

To Top