ಸೈಮಾ ವೇದಿಕೆಯಲ್ಲಿ ಎಮೋಷನಲ್ ಆದ ಜೂನಿಯರ್ ಎನ್.ಟಿ.ಆರ್, ರಾಜಮೌಳಿ ಹಾಗೂ ರಾಮ್ ಚರಣ್ ಗೆ ಧನ್ಯವಾದ ತಿಳಿಸಿದ ನಟ…..!

Follow Us :

RRR ಸಿನೆಮಾದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಪಡೆದುಕೊಂಡ ಯಂಗ್ ಟೈಗರ್‍ ಜೂನಿಯರ್‍ ಎನ್.ಟಿ.ಆರ್‍ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಎಮೋಷನಲ್ ಆಗಿದ್ದಾರೆ. ಪ್ರತೀ ವರ್ಷ ಹಬ್ಬದಂತೆ ನಡೆಯುವ ಸೌತ್ ಸಿನಿ ಹಬ್ಬ ಎಂದೇ ಕರೆಯಲಾಗುವ ಸೈಮಾ ಅವಾರ್ಡ್ಸ್ ದುಬೈನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಅನೇಕ ತೆಲುಗು ಸಿನಿರಂಗದ ಸ್ಟಾರ್‍ ನಟರು ನಟಿಯರು ಸೇರಿದಂತೆ ಕಲಾವಿದರು ಸಹ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಎಮೋಷನಲ್ ಆಗಿ ಮಾತನಾಡಿದ್ದಾರೆ.

ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡು ಮಾತನಾಡಿದ ಎನ್.ಟಿ.ಆರ್‍ ಎಮೋಷನಲ್ ಆಗಿದ್ದಾರೆ. RRR ಸಿನೆಮಾದಲ್ಲಿನ ಕೊಮರಂ ಭೀಂ ಪಾತ್ರಕ್ಕೆ ನಾನು ನ್ಯಾಯ ಮಾಡುತ್ತೇನೆ ಎಂದು ಮತ್ತೆ ನಂಬಿದ ರಾಜಮೌಳಿಗೆ ಹಾಗೂ ನನ್ನ ಸಹೋದರ ರಾಮ್ ಚರಣ್ ರವರಿಗೆ ಪ್ರತ್ಯೇಕ ಧನ್ಯವಾದಗಳು ಹೇಳುತ್ತಿದ್ದೇನೆ. ನನ್ನನ್ನು ಅಭಿಮಾನಿಸುವ ಅಭಿಮಾನಿಗಳಿಗೆ ನಾನು ಚಿರ ಋಣಿಯಾಗಿರುತ್ತೇನೆ. ನನ್ನ ಕಣ್ಣಿನಿಂದ ಬಂದತಂಹ ಹನಿ ಕಣ್ಣೀರಿಗೂ ಅವರು ದುಃಖಪಟ್ಟಿದಾರೆ. ನಾನು ನಕ್ಕಾಗ ನನ್ನೊಂದಿಗೆ ನಗುವಂತಹ ನನ್ನ ಅಭಿಮಾನದ ಸಹೋದರರಿಗೆಲ್ಲಾ ಸಾಷ್ಟಾಂಗ ನಮಸ್ಕಾರಗಳು ಎಂದು ಎಮೋಷನಲ್ ಆಗಿ ಮಾತನಾಡಿದ್ದಾರೆ. ಇನ್ನೂ ಎನ್.ಟಿ.ಆರ್‍ ರವರ ಈ ಸ್ಪೀಚ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಉತ್ತಮ ನಟ ಅವಾರ್ಡ್ ಅನ್ನು ಯಂಗ್ ಟೈಗರ್‍ ಎನ್.ಟಿ.ಆರ್‍ ಪಡೆದುಕೊಂಡರು. RRR ಸಿನೆಮಾದ ಕೊಮರಂ ಭೀಮ್ ಪಾತ್ರಕ್ಕಾಗಿ ಎನ್.ಟಿ.ಆರ್‍ ರವರಿಗೆ ಉತ್ತಮ ನಟ ಅವಾರ್ಡ್ ದೊರೆತಿದೆ. ಉತ್ತಮ ನಟ ಅವಾರ್ಡ್ ವಿಭಾಗದಲ್ಲಿ ಮೇಜರ್‍ – ಅಡವಿ ಶೇಷ್, ಸೀತಾರಾಮಂ – ದುಲ್ಕರ್‍ ಸಲ್ಮಾನ್, ಕಾರ್ತಿಕೇಯ-2 – ನಿಖಿಲ್, ಡಿಜೆ ಟಿಲ್ಲು –ಸಿದ್ದು ಜೊನ್ನಲಗಡ್ಡ ರವರನ್ನು ನಾಮಿನೇಟ್ ಮಾಡಲಾಗಿತ್ತು. RRR ಸಿನೆಮಾದಿಂದ ಎನ್.ಟಿ.ಆರ್‍ ಹಾಗೂ ರಾಮ್ ಚರಣ್ ಸಹ ನಾಮಿನೇಟ್ ಆಗಿದ್ದರು. ಕೊನೆಯದಾಗಿ ಎನ್.ಟಿ.ಆರ್‍ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡರು.