ಮೆಗಾಸ್ಟಾರ್ ಚಿರು ಜೊತೆಗೆ ನಟಿಸಲಿದ್ದಾರಂತೆ ಸ್ಟಾರ್ ನಟಿ ಅನುಷ್ಕಾ, ಕ್ರೇಜಿ ಕೊಂಬೋ ಬಹುತೇಕ ಖಚಿತ?

Follow Us :

ಕನ್ನಡ ಮೂಲದ ನಟಿ ಅನುಷ್ಕಾ ಶೆಟ್ಟಿ ತೆಲುಗು ಸಿನೆಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ತೆಲುಗು ಸಿನಿರಂಗದಲ್ಲೇ ಸ್ಟಾರ್‍ ನಟಿಯಾದರು. ಅಕ್ಕಿನೇನಿ ನಾಗಾರ್ಜುನ್ ರವರ ಜೊತೆಗೆ ಸೂಪರ್‍ ಎಂಬ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಅನುಷ್ಕಾ ಕಡಿಮೆ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಕೆಲವು ದಿನಗಳ ಹಿಂದೆಯಷ್ಟೆ ತೆರೆಕಂಡ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ಅನುಷ್ಕಾ ದೇಶದ ಸಿನಿರಂಗದ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ದೇಶದ ಸಿನಿರಂಗದಲ್ಲಿ ಭಾರಿ ಸಕ್ಸಸ್ ಕಂಡ ಸಿನೆಮಾಗಳಲ್ಲಿ ಬಾಹುಬಲಿ ಸಿರೀಸ್ ಸಹ ಒಂದಾಗಿದೆ. ಈ ಸಿನೆಮಾದ ಮೂಲಕ ಅನುಷ್ಕಾ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಈ ಸಿನೆಮಾದ ಬಳಿಕ ಆಕೆ ನಿಶ್ಯಬ್ದಂ ಎಂಬ ಸಿನೆಮಾದಲ್ಲೂ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಕೆಲವು ತಿಂಗಳುಗಳ ಕಾಲ ಸಿನೆಮಾಗಳಿಂದ ದೂರವೇ ಉಳಿದರು. ಕೆಲವು ದಿನಗಳ ಹಿಂದೆಯಷ್ಟೆ ಅನುಷ್ಕಾ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿದೆ. ಯುಎಸ್ ನಲ್ಲೂ ಸಹ ಈ ಸಿನೆಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಸುಮಾರು ವರ್ಷಗಳ ಬಳಿಕ ಈ ಸಿನೆಮಾದ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇದೀಗ ಅನುಷ್ಕಾ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸಲಿದ್ದಾರಂತೆ. ಈ ಸಿನೆಮಾ ಭಾರಿ ಬಜೆಟ್ ನಲ್ಲಿ ತೆರೆಕಾಣಲಿದೆಯಂತೆ. ಸೊಷಿಯೋ ಫ್ಯಾಂಟಸಿ ಕಥೆಯನ್ನು ಆಧರಿಸಿ ಈ ಸಿನೆಮಾ ನಿರ್ಮಾಣ ಮಾಡಲಿದ್ದಾರಂತೆ. ಈ ಸಿನೆಮಾದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಹಿರೋ ಆಗಿ ನಟಿಸಲಿದ್ದಾರೆ. ಈ ಸಿನೆಮಾ ಯುವಿ ಕ್ರಿಯೇಷನ್ ಬ್ಯಾನರ್ ನಡಿ ನಿರ್ಮಾಣವಾಗಲಿದ್ದಾರೆ. ಅನುಷ್ಕಾ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ನಟಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಖಚಿತವಾದರೇ ಮೊದಲ ಬಾರಿಗೆ ಚಿರಂಜೀವಿಯವರ ಜೊತೆಗೆ ಜೋಡಿಯಾಗಿ ಅನುಷ್ಕಾ ನಟಿಸಲಿದ್ದಾರೆ.  ಜೊತೆಗೆ ಈ ಸಿನೆಮಾಗಾಗಿ ಅನುಷ್ಕಾ ಸಹ ಫಿಟ್ ನೆಸ್ ಮೇಲೆ ಹೆಚ್ಚು ದೃಷ್ಟಿಯಿಟ್ಟಿದ್ದಾರೆ ಎನ್ನಲಾಗಿದೆ.

ಇನ್ನೂ ಜಗದೇಕ ವೀರುಡು, ಅತಿಲೋಕ ಸುಂದರಿ ಸಿನೆಮಾದ ಮೂಲಕ ಎವರ್‍ ಗ್ರೀನ್ ಕ್ಲಾಸಿಕಲ್ ಹಿಟ್ ಪಡೆದುಕೊಂಡ ಚಿರಂಜೀವಿ ಮತ್ತೆ ಅಂತಹ ಸಿನೆಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಚಿರಂಜೀವಿಯವರ ಹುಟ್ಟುಹಬ್ಬದಂದು MEGA157 ಸಿನೆಮಾ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಜೊತೆಗೆ ಮೆಗಾಸ್ಟಾರ್‍ ಚಿರಂಜೀವಿಯವರ ಕೆರಿಯರ್ ನಲ್ಲಿ ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗಲಿರುವ ಸಿನೆಮಾ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಈ ಸಿನೆಮಾದಲ್ಲಿ ಅನುಷ್ಕಾ ಸಹ ನಟಿಸಲಿದ್ದಾರೆ ಎಂಬ ಸುದ್ದಿಯಿಂದ ಸಿನೆಮಾಗೆ ಮತಷ್ಟು ಹೈಪ್ ಕ್ರಿಯೇಟ್ ಆಗಿದೆ ಎನ್ನಲಾಗಿದೆ.