Film News

ಆಸ್ಕಾರ್ ಅವಾರ್ಡ್ ಬಗ್ಗೆ ಎನ್.ಟಿ.ಆರ್ ಎಮೋಷನಲ್ ಸ್ಪೀಚ್, ಹೈದರಾಬಾದ್ ಗೆ ಬಂದ ಎನ್.ಟಿ.ಆರ್, ಅಭಿಮಾನಿಗಳ ಭವ್ಯ ಸ್ವಾಗತ…!

ಇಡೀ ವಿಶ್ವವೇ ಮೆಚ್ಚಿದಂತಹ RRR ಸಿನೆಮಾದ ನಾಟು ನಾಟು ಹಾಡು ಆಸ್ಕಾರ್‍ ಅವಾರ್ಡ್ ಪಡೆದುಕೊಂಡಿರುವುದು ಇಡೀ ದೇಶ ಗರ್ವಿಸುವಂತಹ ವಿಚಾರ ಎನ್ನಲಾಗುತ್ತಿದೆ. RRR ಚಿತ್ರತಂಡಕ್ಕೆ ನರೇಂದ್ರ ಮೋದಿ ಸೇರಿದಂತೆ ಭಾರತೀಯ ಸಿನಿರಂಗದ ಸ್ಟಾರ್‍ ಗಳು, ಅಭಿಮಾನಿಗಳು RRR ತಂಡವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಅಮೇರಿಕಾದಿಂದ ಎನ್.ಟಿ.ಆರ್‍ ಹೈದರಾಬಾದ್ ಗೆ ಬಂದಿದ್ದು, ಅವರ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ. ಇನ್ನೂ ಈ ವೇಳೆ ಎನ್.ಟಿ.ಆರ್‍ ಎಮೋಷನಲ್ ಸ್ಪೀಚ್ ಸಹ ಕೊಟ್ಟಿದ್ದಾರೆ.

RRR ಸಿನೆಮಾದ ತಂಡ ಆಸ್ಕಾರ್‍ ಅವಾರ್ಡ್ ಫಂಕ್ಷನ್ ನಲ್ಲಿ ಸಖತ್ ಸದ್ದು ಮಾಡಿದ್ದರು. ಈ ಅವಾರ್ಡ್ ಪಡೆದುಕೊಂಡ ತಂಡ ಅಲ್ಲಿ ಸಖತ್ ಎಂಜಾಯ್ ಮಾಡಿದ್ದರು. ಅವಾರ್ಡ್ ಫಂಕ್ಷನ್ ಗಾಗಿ ಕೆಲವು ದಿನಗಳ ಮುಂಚೆಯೇ ಅಮೇರಿಕಾಗೆ ಹೋಗಿದ್ದರು. ಇನ್ನೂ ಅನೇಕ ಸಂದರ್ಶನಗಳು, ಪ್ರಮೋಷನ್ ಗಳನ್ನೂ ಸಹ ಮಾಡಿದ್ದರು. ಇನ್ನೂ ಆಸ್ಕರ್‍ ಪಡೆದುಕೊಂಡ ಬಳಿಕ ಸ್ಪೇಷಲ್ ಪಾರ್ಟಿಯನ್ನು ಸಹ ಮಾಡಿಕೊಂಡಿದ್ದರು. ಸದ್ಯ ಅಲ್ಲಿಂದ ಪ್ರತಿಯೊಬ್ಬರು ತಾಯ್ನಾಡಿಗೆ ಮರಳುತ್ತಿದ್ದಾರೆ. ನಟ ಎನ್.ಟಿ.ಆರ್‍ ಇಂದು ಬೆಳಿಗ್ಗೆ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಎನ್.ಟಿ.ಆರ್‍ ರವರಿಗೆ ವರ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದಾರೆ. ಜೊತೆಗೆ ಇದೇ ವೇಳೆ ಆಸ್ಕಾರ್‍ ಬಗ್ಗೆ ಎಮೋಷನಲ್ ಸ್ಪೀಚ್ ಕೊಟ್ಟಿದ್ದಾರೆ.

ಜೂನಿಯರ್‍ ಎನ್.ಟಿ.ಆರ್‍ ಮಾತನಾಡುತ್ತಾ RRR ಆಸ್ಕಾರ್‍ ಪಡೆದುಕೊಂಡಿದ್ದು ನಾನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ ಮುಖ್ಯವಾಗಿ ಕೀರವಾಣಿ, ಚಂದ್ರಬೋಸ್ ಆಸ್ಕಾರ್‍ ವೇದಿಕೆಯ ಮೇಲೆ ಆಸ್ಕಾರ್‍ ಪಡೆದುಕೊಂಡಿದ್ದು ನನ್ನ ಜೀವನದಲ್ಲಿ ಸ್ಥಿರವಾಗಿರುವ ಘಟನೆಯಾಗಿದೆ. ಈ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗಿದ್ದು ಸಂತೊಷವಾಗಿದೆ. ನನ್ನ ಜೀವನದಲ್ಲಿನ ಬೆಸ್ಟ್ ಮೂಮೆಂಟ್ಸ್ ಆಗಿದೆ. ನಮ್ಮ ದೇಶದಂತೆ ಈ ಅವಾರ್ಡ್ ಸಹ ಗೌರವದಿಂದ ಕೂಡಿದೆ. ಈ ಅದ್ಬುತವಾದ ಅನುಭವವನ್ನು, ಸಂತೋಷವನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಎಮೋಷನಲ್ ಆಗಿದ್ದಾರೆ. ಜೊತೆಗೆ ನಾನು ಭಾರತೀಯ, ಅದರಲ್ಲೂ ತೆಲುಗು ನಾಡಲ್ಲಿ ಹುಟ್ಟಿದ್ದಕ್ಕಾಗಿ ಗರ್ವಿಸುತ್ತಿದ್ದೇನೆ ಎಂದಿದ್ದಾರೆ.

ಇನ್ನೂ ನಾನು ಇಂತಹ ಘನತೆ ಸಾಧಿಸಲು ಅದಕ್ಕೆ ಕಾರಣ ಅಭಿಮಾನಿಗಳು ಹಾಗೂ ಪ್ರೇಕ್ಷಕರು. ನಮ್ಮನ್ನು ಆದರಿಸಿದ ನಿಮ್ಮಿಂದಲೇ ನಾವು ಆಸ್ಕಾರ್‍ ಪಡೆದುಕೊಳ್ಳಲು ಸಾಧ್ಯವಾಗಿದೆ. ರಾಜಮೌಳಿಯವರ ಕೈಯಲ್ಲಿ ಆಸ್ಕರ್‍ ಅವಾರ್ಡ್ ನೋಡಿದಾಗ ನನ್ನ ಕಣ್ಣಲ್ಲಿ ಕಣ್ಣಿರು ಬಂತಯ. ರಾಜಮೌಳಿಯವರ ಕಷ್ಟ ಕೊಂಚವೂ ವ್ಯರ್ಥವಾಗಿಲ್ಲ ಎಂದು ಅವಾರ್ಡ್ ಪಡೆದುಕೊಳ್ಳಲು ಪ್ರತಿಯೊಬ್ಬರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದರು.

Most Popular

To Top