Film News

ಅಂತಹ ದೃಶ್ಯಗಳಲ್ಲಿ ನಟಿಸಲು ನನಗೆ ಯಾವುದೇ ಸಮಸ್ಯೆಯಿಲ್ಲ ಎಂದ ಮಾಳವಿಕ ನಾಯರ್ ಬೋಲ್ಡ್ ಕಾಮೆಂಟ್ಸ್…..!

ಮೊದಲನೇ ಸಿನೆಮಾದ ಮೂಲಕವೇ ಫೇಂ ಸಂಪಾದಿಸಿಕೊಂಡ ನಟಿಯರ ಸಾಲಿಗೆ ಸೇರುವ ಮಾಳವಿಕಾ ನಟನೆಯ ಮೂಲಕವೇ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡರು. ಮೊದಲನೆ ಸಿನೆಮಾದ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡರು. ಎವಡೇ ಸುಬ್ರಮಣ್ಯಂ ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಈಕೆ ಇದೀಗ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆಕೆಯ ಈ ಹೇಳಿಕೆಗಳು ಇದೀಗ ಹಾಟ್ ಟಾಪಿಕ್ ಆಗಿದೆ.

ನಟಿ ಮಾಳವಿಕಾ ನಾಯರ್‍ ನ್ಯಾಚುರಲ್ ಸ್ಟಾರ್‍ ನಾನಿ ಅಭಿನಯದ ಎವಡೇ ಸುಬ್ರಮಣ್ಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಮೂಲಕವೇ ಆಕೆ ನಟನೆಯೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದರು. ಈ ಸಿನೆಮಾದಲ್ಲಿನ ಆಕೆ ಅಭಿನಯಕ್ಕೆ ನೂರಕ್ಕೆ ನೂರರಷ್ಟು ಮಾರ್ಕ್ಸ್ ಸಹ ಪಡೆದುಕೊಂಡರು. ಬಳಿಕ ಆಕೆ ಕಲ್ಯಾಣ ವೈಬೋಗಂ, ಒರೆಯೇ ಬುಜ್ಜಿಗಾ, ಥ್ಯಾಂಕ್ಯೂ ಮೊದಲಾದ ಸಿನೆಮಾಗಳಲ್ಲಿ ನಟಿಸಿದ್ದರು. ಇದೀಗ ಆಕೆ ಫಲಾನಾ ಅಬ್ಬಾಯಿ, ಫಲಾನಾ ಅಮ್ಮಾಯಿ ಎಂಬ ಸಿನೆಮಾದಲ್ಲಿ ಮತ್ತೊಮ್ಮೆ ನಾಗಶೌರ್ಯ ಜೊತೆಗೆ ನಟಿಸುತ್ತಿದ್ದಾರೆ. ಇದೀಗ ಆಕೆ ಕೆಲವೊಂದು ಹೇಳಿಕೆಗಳನ್ನು ನಿಡಿದ್ದಾರೆ.

ನಟಿ ಮಾಳವಿಕಾ ನಾಯರ್‍ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ಆಸಕ್ತಿಕರವಾದ ಹೇಳಿಕೆಗಳನ್ನು ನೀಡಿದ್ದಾರೆ. ಮೊದಲಿಗೆ ಆಕೆ ತುಂಬಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದು, ಇದೀಗ ಬೋಲ್ಡ್ ಕಾಮೆಂಟ್ಸ್ ಮಾಡಿರುವುದು ಶಾಕ್ ಆಗುವಂತೆ ಮಾಡಿದೆ. ಇನ್ನೂ ಸಂದರ್ಶನದಲ್ಲಿ ಆಕೆ ಅಂತಹ ದೃಶ್ಯಗಳಲ್ಲಿ ನಟಿಸಲು ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ. ಕಿಸ್ ದೃಶ್ಯಗಳು, ಲಿಪ್ ಕಿಸ್, ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ನನಗೆ ಯಾವುದೇ ಸಮಸ್ಯೆವಿಲ್ಲ. ಅದೆಲ್ಲವೂ ಬೇಕು ಎಂದು ಮಾಡುವುದು ಅಲ್ಲ. ಸಿನೆಮಾಗಾಗಿ ಮಾಡುವುದು. ದೃಶ್ಯಕ್ಕೆ ತಕ್ಕಂತೆ ಮಾಡಬೇಕು. ಆದ್ದರಿಂದ ನನಗೆ ಅಂತಹ ದೃಶ್ಯಗಳಲ್ಲಿ ನಟಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಆಕೆ ಹೇಳಿದ್ದಾರೆ. ಸದ್ಯ ಮಾಳವಿಕ ಈ ಬೋಲ್ಡ್ ಕಾಮೆಂಟ್ಸ್ ವೈರಲ್ ಆಗುತ್ತಿವೆ.

ಇನ್ನೂ ಮಾಳವಿಕಾ ನಾಯರ್‍ ಕೆರಿಯರ್‍ ಆರಂಭದಲ್ಲಿ ಸ್ಕಿನ್ ಶೋ ನಿಂದ ದೂರವೇ ಇದ್ದಾರೆ. ಆದರೆ ಇದೀಗ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಇಂಟೆನ್ಸ್ ದೃಶ್ಯಗಳಲ್ಲಿ ಸಹ ನಟಿಸುತ್ತಿದ್ದಾರೆ. ಇದಕ್ಕೆ ಆಕೆಯ ಹೊಸ ಸಿನೆಮಾ ಫಲಾನಾ ಅಬ್ಬಾಯಿ, ಫಲಾನಾ ಅಮ್ಮಾಯಿ ಸಿನೆಮಾ ಸಾಕ್ಷಿಯಾಗಲಿದೆ. ಈ ಸಿನೆಮಾದ ಟೀಸರ್‍ ಹಾಗೂ ಟ್ರೈಲರ್‍ ಸಹ ಈಗಾಗಲೇ ಬಿಡುಗಡೆಯಾಗಿದ್ದು. ಇದರಲ್ಲಿ ಆಕೆ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ.

Most Popular

To Top