Film News

ಶೂಟಿಂಗ್ ಸಮಯದಲ್ಲಿ ಅಪಘಾತಕ್ಕೀಡಾದ ನಟ ಅಜಿತ್ ಕಾರು, ಭಯಾನಕ ವಿಡಿಯೋ ವೈರಲ್…..!

ಕಾಲಿವುಡ್ ನಟ ಅಜಿತ್ ಕುಮಾರ್‍ ಸೌತ್ ನಲ್ಲಿ ಸ್ಟಾರ್‍ ಇಮೇಜ್ ಪಡೆದುಕೊಂಡಿದ್ದಾರೆ. ವಿವಾದಗಳಿಗೆ ದೂರವಾಗಿ ಪ್ರಶಾಂತತೆಯಿಂದ ಜೀವಿಸಲು ಇಷ್ಟಪಡುತ್ತಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಫಾರಿನ್ ಟ್ರಿಪ್ಸ್, ಬೈಕ್ ಟ್ರಿಪ್ ಗಳನ್ನು ಕೈಗೊಳ್ಳುತ್ತಾ ಬ್ಯುಸಿಯಾಗಿ ಸಮಯ ಕಳೆಯುತ್ತಿರುತ್ತಾರೆ. ವಯಸ್ಸಾದರೂ ಸಹ ಅವರು ತಮ್ಮ ಸಿನೆಮಾಗಳಲ್ಲಿ ಡ್ಯಫ್ ಇಲ್ಲದೇ ಅನೇಕ ಸಾಹಸ ದೃಶ್ಯಗಳಲ್ಲಿ ಚಿತ್ರೀಕರಣ ನಡೆಸುತ್ತಿರುತ್ತಾರೆ. ಇದೀಗ ಶೂಟಂಗ್ ಸಮಯದಲ್ಲಿ ಅಜಿತ್ ಕುಮಾರ್‍ ಕಾರು ಅಪಘಾತವಾಗಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ತಮಿಳು ಸ್ಟಾರ್‍ ನಟ ಅಜಿತ್ ಕುಮಾರ್‍ ಡ್ಯೂಪ್ ಬಳಸದೇ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಚೇಸಿಂಗ್ ಸೇರಿದಂತೆ ಹಲವು ಸಾಹಸ ದೃಶ್ಯಗಳಲ್ಲಿ ಅವರೇ ಸ್ವತಃ ನಟಿಸುತ್ತಾರೆ. ಅನೇಕ ಬಾರಿ ಅಂತಹ ದೃಶ್ಯಗಳಲ್ಲಿ ನಟಿಸುವಾಗ ಗಾಯಗೊಂಡಿದ್ದಾರೆ. ಆದರೆ ಅವರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎನ್ನಬಹುದು. ಕಳೆದ ವರ್ಷ ಅಜುತ್ ಕುಮಾರ್‍ ರವರು ವಿದಾಮುಯಾರ್ಚಿ ಎಂಬ ಸಿನೆಮಾದ ಚಿತ್ರೀಕರಣದ ವೇಳೆ ಕಾರು ಅಪಘಾತ ಮಾಡಿಕೊಂಡಿದ್ದು, ಭಾರಿ ಸುದ್ದಿಯಾಗಿತ್ತು. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಜಿತ್ ಕುಮಾರ್‍ ಶೂಟಿಂಗ್ ಸಮಯದಲ್ಲಿ ಹೇಗೆ ಅಪಘಾತಕ್ಕೀಡಾದರು ಎಂಬುದನ್ನು ಅವರ ಮ್ಯಾನೇಜರ್‍ ಸುರೇಶ್ ಚಂದ್ರ ಎಂಬುವವರು ಬಹಿರಂಗಪಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಅಜಿತ್ ಕುಮಾರ್‍ ಹಾಗೂ ಆರವ್ ರವರು ಕಾರ ಚೇಸ್ ದೃಶ್ಯವನ್ನು ಶೂಟ್ ಮಾಡುತ್ತಿದ್ದರು. ಅಜಿತ್ ಕುಮಾರ್‍ ರವರು ಓಡಿಸುತ್ತಿದ್ದ ಕಾರು ಸ್ಕಿಡ್ ಆಗಿದೆ. ಭಾರಿ ದುರಂತ ಆಗಬೇಕಾಗಿದ್ದನ್ನು ಅಜಿತ್ ರವರು ಸಾಧ್ಯವಾದಷ್ಟು ತಪ್ಪುವಂತೆ ಮಾಡಿದ್ದಾರೆ. ಈ ವೇಳೆ ಇಬ್ಬರು ನಟರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಜಿತ್ ಅಭಿಮಾನಿಗಳು ಮಾತ್ರವಲ್ಲದೇ ಅನೇಕರು ಅವರ ಸಾಹಸವನ್ನು ಮನಸಾರೆ ಕೊಂಡಾಡುತ್ತಿದ್ದಾರೆ. ಇನ್ನೂ ವಿದಾಮುಯಾರ್ಚಿ ಸಿನೆಮಾದಲ್ಲಿ ಅಜಿತ್ ಕುಮಾರ್‍ ಜೊತೆಗೆ ತ್ರಿಷಾ, ಅರ್ಜುನ್, ಆರವ್, ರೆಜಿನಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನೆಮಾದ ಶೂಟಿಂಗ್ ಅಕ್ಟೋಬರ್‍ 2023 ರಿಂದ ಅಜೆರ್ಬೈಜಾನ್ ಎಂಬ ಪ್ರದೇಶದಲ್ಲಿ ನಡೆಸಲಾಗುತ್ತಿದೆ.

Most Popular

To Top