ಕೈ ಮೇಲೆ ತಮನ್ನಾ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ, ಅದನ್ನು ನೋಡಿ ಕಣ್ಣೀರಾಕಿದ ಮಿಲ್ಕಿ ಬ್ಯೂಟಿ ತಮನ್ನಾ….!

Follow Us :

ಸುಮಾರು ಎರಡು ದಶಕಗಳ ಕಾಲ ಸೌತ್ ಸಿನಿರಂಗವನ್ನು ಗ್ಲಾಮರ್‍ ಮೂಲಕ ಆಳಿದಂತಹ ನಟಿ ತಮನ್ನಾ ಭಾಟೀಯ ಸದ್ಯ ಬಾಲಿವುಡ್ ನಲ್ಲಿ ಬೋಲ್ಡ್ ಪಾತ್ರಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ತಮನ್ನಾ ಇದೀಗ ತನ್ನ ಅಭಿಮಾನಿ ಮಾಡಿದ ಕೆಲಸಕ್ಕಾಗಿ ಕಣ್ಣೀರಾಕಿದ್ದಾರೆ. ತಮನ್ನಾ ಡೈ ಹಾರ್ಡ್ ಫ್ಯಾನ್ ಒಬ್ಬ ತನ್ನ ಕೈ ಮೇಲೆ ತಮನ್ನಾ ಪೊಟೋ ಅನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ ಅದನ್ನು ನೋಡಿ ಆಕೆ ಭಾವುಕಳಾಗಿದ್ದಾಳೆ.

ಸುಮಾರು 70 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿರುವ ತಮನ್ನಾ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಸದ್ಯ 34 ವರ್ಷದ ತಮನ್ನಾ ಈಗಲೂ ಸಹ ತುಂಬಾನೆ ಬೇಡಿಕೆಯನ್ನು ಹೊಂದಿದ್ದಾರೆ. ಜೊತೆಗೆ ಸಂಭಾವನೆಯನ್ನು ಸಹ ಏರಿಸಿದ್ದಾರೆ. ಸೌತ್ ಸಿನಿರಂಗದಲ್ಲಿ ಗ್ಲಾಮರಸ್ ಡ್ಯಾನ್ಸ್ ಮೂಲಕ ಅನೇಕ ವರ್ಷಗಳಿಂದ ಯುವಕರ ಕನಸಿನ ರಾಣಿಯಾಗಿ ಕ್ರೇಜ್ ಪಡೆದುಕೊಂಡ ತಮನ್ನಾ ರವರ ಮಾದರಿಯಲ್ಲಿ ಬೇರೆ ಯಾವುದೇ ನಟಿ ಕ್ರೇಜ್ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದು. ತನ್ನ ಗ್ಲಾಮರ್‍ ಮೂಲಕ ಸಿನಿರಂಗವನ್ನು ಆಳಿದಂತಹ ನಟಿಯಾಗಿದ್ದಾರೆ. ಮಿಲ್ಕಿ ಬ್ಯೂಟಿ ಎಂದೇ ಫೇಂ ಪಡೆದುಕೊಂಡ ತಮನ್ನಾ ತೆಲುಗಿನ ಸ್ಟಾರ್‍ ನಟರಾದ ಪವನ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್‍ ಎನ್.ಟಿ.ಆರ್‍, ರಾಮ್ ಚರಣ್ ರವರಂತಹ ಅನೇಕರೊಂದಿಗೆ ನಟಿಸಿದ್ದಾರೆ. ಹ್ಯಾಪಿಡೇಸ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ತಮನ್ನಾ ರಚ್ಚಾ ಸಿನೆಮಾದ ಮೂಲಕ ಅನೇಕ ಯುವಕರ ಕನಸಿನ ರಾಣಿಯಾದರು ಎನ್ನಬಹುದಾಗಿದೆ.

ಇನ್ನೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ರವರನ್ನು ನೋಡಿದರೇ ಅಭಿಮಾನಿಗಳು ಪುಲ್ ಖುಷಿಯಾಗುತ್ತಾರೆ. ಕೆಲವರ ಅಭಿಮಾನವಂಗತೂ ಅತಿರೇಕಕ್ಕೆ ಹೋಗಿರುತ್ತದೆ. ತಮನ್ನಾ ಫ್ಯಾನ್ಸ್ ಅನೇಕರು ಆಕೆಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ ಯುವಕನೋರ್ವ ತಮನ್ನಾ ಭಾವಚಿತ್ರವನ್ನೇ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅದನ್ನು ತಮನ್ನಾ ರವರಿಗೆ ಆತ ತೋರಿಸಿದ್ದಾನೆ. ತಮನ್ನಾ ನೋಡಲು ಮುಂಬೈ ಏರ್‍ ಪೋರ್ಟ್‌ಗೆ ಬಂದಿದ್ದಾನೆ. ತಮನ್ನಾ ರನ್ನು ನೋಡಿದ ಕೂಡಲೇ ಆ ಅಭಿಮಾನಿ ಕಣ್ಣೀರಾಕಿದ್ದಾನೆ. ಇದನ್ನು ನೋಡಿದ ತಮನ್ನಾ ಸಹ ಭಾವುಕರಾಗಿದ್ದಾರೆ. ತನ್ನ ಮೇಲೆ ಅಷ್ಟೊಂದು ಅಭಿಮಾನ ತೋರಿದ್ದಕ್ಕೆ ತಮನ್ನಾ ಸಹ ಧಣ್ಯವಾದ ತಿಳಿಸಿದ್ದಾರೆ. ಅಂತಹ ಅಭಿಮಾನಿಗಳನ್ನು ಪಡೆದುಕೊಂಡ ನೀವು ತುಂಬಾ ಅದೃಷ್ಟವಂತರು ಎಂದು ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.