ನಂಗೆ ಪತಿಯೂ ಬೇಕು, ಪ್ರಿಯಕರನೂ ಬೇಕು ಎಂದು ವಿದ್ಯುತ್ ಕಂಬ ಏರಿ ಪ್ರತಿಭಟನೆ ನಡೆಸಿದ ಮಹಿಳೆ, ವೈರಲ್ ಆದ ವಿಡಿಯೋ….!

Follow Us :

ಸಮಾಜದಲ್ಲಿ ವಿವಿಧ ಕಾರಣಗಳಿಂದ ವಿವಾಹೇತರ ಸಂಬಂಧಗಳನ್ನು ಇಟ್ಟುಕೊಂಡಿರುತ್ತಾರೆ. ಅಂತಹುದೇ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ. ಹಣದ ಕೊರತೆಯ ಜೊತೆಗೆ 7 ವರ್ಷಗಳ ವಿವಾಹೇತರ ಸಂಬಂಧ ಇಟ್ಟುಕೊಂಡ ಮಹಿಳೆಯೊಬ್ಬಳು ತನಗೆ ಗಂಡನೂ ಬೇಕು, ಪ್ರೇಮಿಯೂ ಬೇಕು ಎಂದು ವಿದ್ಯುತ್ ಕಂಬವನ್ನೇರಿ ಪ್ರತಿಭಟನೆ ನಡೆಸಿದ ವಿಚಿತ್ರ ಘಟನೆಯೊಂದು ನಡೆದಿದೆ.

ಲಕ್ನೋದ ಗೋರಖ್ ಪುರದ ಪಿಪ್ರೈಚ್ ನಲ್ಲಿ 34 ವರ್ಷದ ಮೂರು ಮಕ್ಕಳನ್ನು ಹೊಂದಿರುವ ತಾಯಿಯೊಬ್ಬಳು ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದರು. ಈ ಸಂಬಂಧದ ಬಗ್ಗೆ ಪತಿಗೆ ತಿಳಿದ ಬಳಿಕ ಆಕೆ ವಿದ್ಯುತ್ ಕಂಬವನ್ನೇರಿ ದೊಡ್ಡ ರಾದ್ದಾಂತ ಸೃಷ್ಟಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ತನ್ನ ಪತಿ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದಳು. ಬಳಿಕ ಆಕೆ ಪಕ್ಕದ ಗ್ರಾಮದ ವ್ಯಕ್ತಯೊಬ್ಬನೋಂದಿಗೆ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿದೆ. ಕಳೆದ 7 ವರ್ಷಗಳಿಂದ ಆಕೆ ತನ್ನ ಪತಿಗೆ ತಿಳಿಯದಂತೆ ಇಬ್ಬರು ಸಂಬಂಧ ಮುಂದುವರೆಸುತ್ತಿದ್ದರು ಎನ್ನಲಾಗಿದೆ.  ಆದರೆ ಇತ್ತೀಚಿಗೆ ಮಹಿಳೆಯ ಪತಿ ರಾಮ್ ಗೋವಿಂದ್ ಗೆ ಈ ಸುದ್ದಿ ತಿಳಿದಿದೆ.

ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿ ಆಕೆಯೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಆಕೆ ಪ್ರಿಯತಮನಿಗೂ ಮನೆಯಲ್ಲಿ ಇರೋಕೆ ಅವಕಾಶ ನೀಡಬೇಕು ಜೊತೆಗೆ ಮನೆಯ ಆರ್ಥಿಕತೆಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾಳೆ. ಅದನ್ನು ಕೇಳಿದ ಪತಿಗೆ ಕೋಪ ಏರಿದ್ದು, ಕೂಡಲೇ ಮನೆಯಿಂದ ಹೊರ ಹೋಗಿದ್ದಾನೆ. ಬಳಿಕ ನನಗೆ ಪತಿ ಹಾಗೂ ಪ್ರಿಯಕರ ಇಬ್ಬರೂ ಬೇಕು ಎಂದು ಮನೆಯ ಪಕ್ಕದಲ್ಲೇ ಇರುವಂತಹ ವಿದ್ಯುತ್ ಕಂಬವನ್ನೇರಿ ಪ್ರತಿಭಟನೆ ನಡೆಸಿದ್ದಾಳೆ. ಇನ್ನೂ ಈ ಸನ್ನಿವೇಶವನ್ನು ನೋಡಿದ ಅನೇಕರು ಶಾಕ್ ಆಗಿದ್ದಾರೆ. ಕೂಡಲೇ ಸ್ಥಳಿಯರು ಆಕೆಯನ್ನು ಕಂಬದಿಂದ ಇಳಿಯುವಂತೆ ಮನವಿ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ವಿದ್ಯುತ್ ಇಲಾಖೆ ತಂಡ ಕಂಬದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ. ಮಹಿಳೆಯ ಮನವೊಲಿಸಿ ಕಂಬದಿಂದ ಕೆಳಗೆ ಇಳಿಸಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.