Film News

ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ಕೊಟ್ಟ ಶ್ರೀಲೀಲಾ, ದಳಪತಿ ವಿಜಯ್ ಸಿನೆಮಾದಲ್ಲಿ ಸ್ಪೇಷಲ್ ಹಾಡಿನಲ್ಲಿ ಶ್ರೀಲೀಲಾ…..!

ಕನ್ನಡ ಮೂಲದ ನಟಿ ಶ್ರೀಲೀಲಾ ಕಡಿಮೆ ಸಮಯದಲ್ಲೇ ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡರು. ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಪೆಳ್ಳಿ ಸಂದಡಿ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ರವಿತೇಜ ರವರ ಧಮಾಕಾ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡಿದ್ದರು. ಆದರೆ ಇತ್ತೀಚಿಗೆ ತೆರೆಕಂಡ ಆಕೆಯ ಸಿನೆಮಾಗಳು ಫ್ಲಾಪ್ ಆದವು. ಇದರಿಂದ ಆಕೆಗೆ ಆಫರ್‍ ಗಳು ಸಹ ಕಡಿಮೆಯಾದವು ಎನ್ನಲಾಗಿದೆ. ಸದ್ಯ ಆಕೆಯ ಕೈಯಲ್ಲಿ ಎರಡು ಸಿನೆಮಾಗಳು ಮಾತ್ರ ಇದೆ.

ನಟಿ ಶ್ರೀಲೀಲಾ ತನ್ನ ಭರ್ಜರಿ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಆಕೆಯ ಡ್ಯಾನ್ಸ್ ಅನ್ನು ಸ್ಟಾರ್‍ ನಟ ಮಹೇಶ್ ಬಾಬು ರವರೇ ಕೊಂಡಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಆಕೆ ಪುಲ್ ಬ್ಯುಸಿಯಾದರು. ಐದಾರು ಸಿನೆಮಾಗಳಿಗೆ ಆಕೆಯ ಕ್ರೇಜ್ ಸೀಮಿತವಾಯ್ತಾ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಸೋಲುಗಳನ್ನು ಕಂಡ ಶ್ರೀಲೀಲಾ ಗೆ ಆಫರ್‍ ಗಳು ಕಡಿಮೆಯಾಗಿದೆ. ಈ ನಡುವೆ ಆಕೆ ಕಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕಾಲಿವುಡ್ ನ ಸೀನಿಯರ್‍ ನಟರೊಂದಿಗೆ ಆಕೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಪೈಕಿ ಅಜಿತ ಸಿನೆಮಾ ಒಂದಾಗಿದೆ. ಗುಡ್ ಬ್ಯಾಡ್ ಅಗ್ಲಿ ಎಂಬ ಸಿನೆಮಾದಲ್ಲಿ ಜಾನ್ವಿ ಕಪೂರ್‍ ಹೆಸರು ಕೇಳಿಬಂದಿತ್ತು. ಸದ್ಯ ಆಕೆಯ ಬದಲಿಗೆ ಶ್ರೀಲೀಲಾ ಹೆಸರು ಬಲವಾಗಿ ಕೇಳಿಬರುತ್ತಿದೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಮತ್ತೊಂದು ರೂಮರ್‍ ಸಹ ಬಲವಾಗಿ ಕೇಳಿಬರುತ್ತಿದೆ. ಕಾಲಿವುಡ್ ಸ್ಟಾರ್‍ ನಟ ದಳಪತಿ ವಿಜಯ್ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಯಂಗ್ ಬ್ಯೂಟಿ ಮೀನಾಕ್ಷಿ ಚೌದರಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದಲ್ಲಿನ ಐಟಂ ಸಾಂಗ್ ಗಾಗಿ ಶ್ರೀಲೀಲಾ ರವರನ್ನು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಆಫರ್‍ ಗೆ ಶ್ರೀಲೀಲಾ ಎಸ್ ಹೇಳ್ತಾರಾ ನೋ ಹೇಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಕೆಲವರು ಮಾತ್ರ ಸ್ಟಾರ್‍ ನಟನ ಜೊತೆಗೆ ಐಟಂ ಸಾಂಗ್ ಆಗಿರುವುದರಿಂದ ಆಕೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸಿನೆಮಾದ ಜೊತೆಗೆ ಆಕೆ ರಾಮ್ ಚರಣ್ ರವರ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎನ್ನಲಾಗಿದೆ. ಖ್ಯಾತ ನಿರ್ದೇಶಕ ಬುಚ್ಚಿಬಾಬು ಹಾಗೂ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಸಿನೆಮಾ ಘೋಷಣೆಯಾಗಿದೆ. ಈ ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಾಯಕಿಯಾಗಿದ್ದಾರೆ. ಈ ಸಿನೆಮಾದಲ್ಲಿ ಮತ್ತೊಂದು ಹಿರೋಯಿನ್ ಸಹ ಇರಲಿದ್ದು, ಆ ಪಾತ್ರಕ್ಕಾಗಿ ಶ್ರೀಲೀಲಾ ರವರನ್ನು ಸಂಪರ್ಕ ಮಾಡಲಾಗಿದೆಯಂತೆ. ಈ ರೀತಿಯಾಗಿ ಆಕೆ ಪ್ರಮುಖ ಪಾತ್ರಗಳ ಅವಕಾಶಗಳು ಬರುತ್ತಿದೆ. ಸಿನೆಮಾದಲ್ಲಿ ನಾಯಕಿಯ ಪಾತ್ರವಲ್ಲದ ಕಾರಣದಿಂದ ಆಕೆ ಒಪ್ಪುತ್ತಾರಾ ಅಥವಾ ರಿಜೆಕ್ಟ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top