Film News

ಹನ್ಸಿಕಾ ಪ್ರೀತಿಗಾಗಿ ಕೋಟಿಗಟ್ಟಲೇ ಖರ್ಚು ಮಾಡಿದ್ರಂತೆ ಆ ನಟ, ಎರಡು ತಿಂಗಳಿಗೆ ಆತ ಕೋಟಿಗಟ್ಟಲೇ ಕಳೆದುಕೊಂಡಿದ್ದರಂತೆ…!

ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಹನ್ಸಿಕಾ ಸಹ ಒಬ್ಬರಾಗಿದ್ದಾರೆ. ತೆಲುಗಿನ ದೇಶಮುದುರು ಎಂಬ ಸಿನೆಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸಿದ ಹನ್ಸಿಕಾ ಮೊಟ್ವಾನಿ ಕಡಿಮೆ ಸಮಯದಲ್ಲೇ ಅನೇಕ ಯುವಕರ ಕನಸಿನ ರಾಣಿಯಾದರು. ಈ ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಸಹ ಪಡೆದುಕೊಂಡರು. ತೆಲುಗಿನಲ್ಲಿ ಸಂಚಲನ ಸೃಷ್ಟಿಸಿ, ಬಳಿಕ ಕಾಲಿವುಡ್ ನಲ್ಲಿ ಸೆಟಲ್ ಆದರು. ಆಗಾಗ ತೆಲುಗು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಹನ್ಸಿಕಾ ಕುರಿತಂತೆ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಸುದ್ದಿಯಾದರು ಏನು ಎಂಬ ವಿಚಾರಕ್ಕೆ ಬಂದರೇ,

ಟೀನೇಜ್ ನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಗ್ಲಾಮರ್‍ ಪರವಾಗಿ ಭಾರಿ ಫೇಂ ಸಂಪಾದಿಸಿಕೊಂಡರು. ಇಂದಿಗೂ ಸಹ ಆಕೆ ಗ್ಲಾಮರ್‍ ಕೊಂಚ ಕೂಡ ಕಡಿಮೆಯಾಗಿಲ್ಲ ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸೌತ್ ನಲ್ಲಿ ಹನ್ಸಿಕಾ ಲವ್ ಸ್ಟೋರಿ ಎಂದ ಕೂಡಲೇ ಕೇಳಿಬರೋದು ಕಾಲಿವುಡ್ ನಟ ಶಿಂಬು ಜೊತೆಗಿನ ಪ್ರೇಮಾಯಣ. ಅವರಿಬ್ಬರ ರೂಮರ್‍ ಜೋರಾಗಿಯೇ ಕೇಳಿಬಂದಿತ್ತು. ಅವರ ಬಗ್ಗೆ ಕಾಲಿವುಡ್ ನಲ್ಲಿ ಜೋರಾಗಿಯೇ ಸುದ್ದಿ ಕೇಳಿಬಂದಿತ್ತು.  ಜೊತೆಗೆ ಆಕೆಗಾಗಿ ಕೊಟ್ಯಂತರ ರೂಪಾಯಿ ಖರ್ಚು ಮಾಡಿದ್ದರಂತೆ. ಕೇವಲ ಎರಡೇ ತಿಂಗಳಲ್ಲಿ ಭಾರಿ ಖರ್ಚು ಮಾಡಿಕೊಂಡಿದ್ದರಂತೆ ಎಂಬ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಟಿ.ರಾಜೇಂದರ್‍ ದೊಡ್ಡ ಮಗ ಶಿಂಭು ತನ್ನ ತಂದೆಯ ನಿರ್ದೇಶನದಲ್ಲಿ ಕೆಲವೊಂದು ಸಿನೆಮಾಗಳಲ್ಲಿ ಬಾಲನಟನಾಗಿ ನಟಿಸಿದ್ದರು. ಟಿನೇಜ್ ಬಂದ ಕೂಡಲೇ ಆತ ಹಿರೋ ಆಗಿ ತುಂಬಾ ಫೇಂ ಪಡೆದುಕೊಂಡರು ಅದೇ ರೀತಿ ವಿವಾದಗಳಿಗೂ ಗುರಿಯಾಗಿದ್ದರು.

ಸಿನೆಮಾದ ಒಂದರ ಶೂಟಿಂಗ್ ಸಮಯದಲ್ಲಿ ಶಿಂಬು ಹಾಗೂ ಹನ್ಸಿಕಾ ನಡುವೆ ಪ್ರೀತಿ ಹುಟ್ಟಿತ್ತು. ಈ ಪ್ರೀತಿ ಹುಟ್ಟಿದ ಎರಡೇ ತಿಂಗಳಲ್ಲಿ ಇಬ್ಬರ ನಡುವೆ ಬ್ರೇಕಪ್ ಸಹ ಆಯ್ತು ಎಂದು ಹೇಳಲಾಗಿತ್ತು. ಅದಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೂ ತಿಳಿಯದು. ಈ ವಿಚಾರದ ಬಗ್ಗೆ ಶಿಂಬು ಅಥವಾ ಹನ್ಸಿಕಾ ಇಬ್ಬರೂ ಹೇಳಲಿಲ್ಲ. ಆದರೆ ಹನ್ಸಿಕಾ ಶಿಂಬು ಮೇಲಿನ ತನ್ನ ಪ್ರೀತಿಯ ಬಗ್ಗೆ ಮಾತನಾಡಿದಾಗ ಆಕೆ ತನ್ನ ಮೊದಲ ಪ್ರೀತಿಯನ್ನು ಮರೆಯಲು 10 ವರ್ಷ ಬೇಕಾಯ್ತು ಎಂದು ನೋವು ಪಟ್ಟಿದ್ದರು. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿತ್ತು. ಜೊತೆಗೆ ಇಬ್ಬರೂ ಮದುವೆಯಾಗಬೇಕೆಂದುಕೊಂಡಿದ್ದರಂತೆ. ಆದರೆ ಕೊನೆಗೆ ಅವರ ನಡುವೆ ಬ್ರೇಕಪ್ ಆಗಿ ಬೇರೆ ಬೇರೆಯಾದರು. ಇದೀಗ ಶಿಂಬು ಹನ್ಸಿಕಾ ರನ್ನು ಲವ್ ಮಾಡಲು ತುಂಬಾನೆ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

Most Popular

To Top