Film News

ಮಹೇಶ್ ಬಾಬು ನಮ್ರತಾ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೊಟೋಸ್ ಶೇರ್, ನಮ್ರತಾಗೆ ಕಾಸ್ಟ್ಲಿಗಿಫ್ಟ್ ಕೊಟ್ಟ ಮಹೇಶ್….!

ಟಾಲಿವುಡ್ ಸಿನಿರಂಗದಲ್ಲಿ ಮುದ್ದಾದ ಹಾಗೂ ದಂಪತಿ ಎಂದರೇ ಹೀಗಿರಬೇಕು ಎಂದು ಅನೇಕರಿಗೆ ಮಾದರಿಯಾದ ಜೋಡಿ ಮಹೇಶ್ ಬಾಬು ಹಾಗೂ ನಮ್ರತಾ. ಈ ಜೋಡಿ ಅದೆಷ್ಟೋ ಮಂದಿಗೆ ಸ್ಪೂರ್ತಿಯಾಗಿದ್ದಾರೆ. ಈ ಜೋಡಿ ಮದುವೆಯಾಗಿ 18 ವರ್ಷ ಪೂರೈಸಿದ್ದು, ವಿವಾಹ ವಾರ್ಷಿಕೋತ್ಸವ ವನ್ನು ಅದ್ದೂರಿಯಾಗಿ ಆಚರಸಿದ್ದಾರೆ. ಇನ್ನೂ ಈ ಜೋಡಿಗೆ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಇನ್ನೂ ನಮ್ರತಾ ಕೆಲವೊಂದು ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ವೈರಲ್ ಆಗಿದೆ.

ಮಹೇಶ್ ಬಾಬು ಹಾಗೂ ನಮ್ರತಾ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲು ಸ್ಪೇನ್ ಗೆ ಹಾರಿದ್ದಾರೆ. ಇನ್ನೂ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇಬ್ಬರೂ ಕ್ಯೂಟ್ ಆಗಿ ಶುಭ ಕೋರಿಕೊಂಡಿದ್ದಾರೆ. 18 ವರ್ಷಗಳ ಕಾಲ ಸಂತೋಷದಿಂದ ಜೀವನ ಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ನಮ್ರತಾ ಸಹ ಪೋಸ್ಟ್ ಮಾಡಿದ್ದು, 18 ವರ್ಷಗಳ ಹಿಂದೆ ನಾವು ತೆಗೆದುಕೊಂಡ ಅತ್ಯತ್ತಮ ನಿರ್ಣಯ ಸ್ವೀಕರಿಸಬೇಕೆಂದು ಮಹೇಶ್ ಬಾಬುರವರಿಗೆ ವಿವಾಹ ವಾರ್ಷಿಕೋತ್ಸವ ಶುಭಾಷಯಗಳು ಎಂದು ಹೇಳಿದ್ದಾರೆ. ಇನ್ನೂ ಮಹೇಶ್ ಬಾಬು ಸಹ  ನಾವು 18 ವರ್ಷಗಳು ಕೊಂಚ ಕ್ರೇಜಿಯಾಗಿ, ತುಂಬಾ ಪ್ರೀತಿಯಿಂದ ಕಳೆದಿದ್ದೇವೆ. ಈ ಪ್ರಯಾಣ ಸದಾ ಇದೇ ರೀತಿ ಸಾಗಬೇಕೆಂದು ಕೋರುತ್ತಿದ್ದೇನೆ. ವಾರ್ಷಿಕೋತ್ಸವ ಶುಭಾಷಯಗಳು ನಮ್ರತಾ ಶಿರೋಡ್ಕರ ಘಟ್ಟಮನೇನಿ ಎಂದು ವಿಶ್ ಮಾಡಿದ್ದಾರೆ.

ಇನ್ನೂ ಮಹೇಶ್ ಬಾಬು ತನ್ನ ಪ್ರೀತಿಯ ಪತ್ನಿಗೆ ದುಬಾರಿ ಬೆಲೆಯ ನೆಕ್ಲೇಸ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇನ್ನೂ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡುವ ನಿಟ್ಟಿನಲ್ಲಿ ಸ್ಪೇನ್ ನಲ್ಲಿ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ನಮ್ರತಾ ಸಹ ಹಂಚಿಕೊಂಡಿದ್ದಾರೆ. ಮಹೇಶ್ ಬಾಬುಗೆ ನಮ್ರತಾ ಮುದ್ದಾಡಿದ್ದಾರೆ. ಈ ರೊಮ್ಯಾಂಟಿಕ್ ಪಿಕ್ಸ್ ಇದೀಗ ವೈರಲ್ ಆಗುತ್ತಿದೆ. ಅವರಿಬ್ಬರೂ ತುಂಬಾ ಸಂತೋಷವಾಗಿದ್ದಾರೆ. ಮಹೇಶ್ ಬಾಬು ಸಹ ಸಮ್ರತಾ ಜೊತೆಗೆ ಪೊಟೋ ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಪ್ರೀತಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಶೋ ಮಾಡಿದ್ದಾರೆ.

ಇನ್ನೂ ಮಹೇಶ್ ಬಾಬು ಹಾಗೂ ನಮ್ರತಾ ವಂಶಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಬಳಿಕ ಇಬ್ಬರೂ ಪ್ರೀತಿಯಲ್ಲಿ ಬಿದ್ದರಂತೆ. ಐದು ವರ್ಷಗಳ ಕಾಲ ಪ್ರೀತಿ ಮಾಡಿ ಬಳಿಕ ದೊಡ್ಡವರ ಸಮ್ಮತಿಯೊಂದಿಗೆ ಕಳೆದ 2005 ರಲ್ಲಿ ಮದುವೆಯಾದರು. ಇನ್ನೂ ಮಹೇಶ್ ಬಾಬು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರೇ, ಮನೆಯನ್ನು ಹಾಗೂ ಮಹೇಶ್ ಬಾಬು ರವರ ಬ್ಯುಸಿನೆಸ್ ಅನ್ನು ಸಹ ನಮ್ರತಾ ನೋಡಿಕೊಳ್ಳುತ್ತಿರುತ್ತಾರೆ.

Most Popular

To Top