Film News

ಆ ಕಾಮೆಂಟ್ ಗಳು ನನ್ನನ್ನು ತುಂಬಾ ನೋಯಿಸುತ್ತವೆ ಎಂದ ಸ್ಟಾರ್ ಕಿಟ್ ಜಾನ್ವಿ ಕಪೂರ್….!

ಸಿನೆಮಾ ಸೆಲೆಬ್ರೆಟಿಗಳಿಗೆ ಟ್ರೋಲ್ ಗಳು ಸರ್ವೆ ಸಾಮಾನ್ಯ ಎಂದು ಹೇಳಬಹುದಾಗಿದೆ. ಸಿನಿರಂಗದ ಅತಿಲೋಕ ಸುಂದರಿ ಎಂದೆ ಖ್ಯಾತಿ ಪಡೆದುಕೊಂಡಿದ್ದ ದಿವಂಗತ ಶ್ರೀದೇವಿ ಪುತ್ರಿಯಾಗಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ಜಾನ್ವಿ ಕಪೂರ್‍ ಸಹ ಇಂತಹ ವಿಮರ್ಶೆಗಳು, ಟ್ರೋಲ್ ಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಕೆಲವೊಂದು ಕಾಮೆಂಟ್ ಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ಆ ಒಂದು ಕಾಮೆಂಟ್ ಮಾತ್ರ ಜಾನ್ವಿ ಕಪೂರ್‍ ಗೆ ತುಂಬಾ ನೋವು ಕೊಡುತ್ತದೆಯಂತೆ. ಈ ವಿಚಾರವನ್ನು ಜಾನ್ವಿ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಇನ್ನೂ ಸಂದರ್ಶನದಲ್ಲಿ ಮಾತನಾಡುತ್ತಾ ಜಾನ್ವಿ ಟ್ರೋಲ್ ಗಳ ಬಗ್ಗೆ ಕೋಪಗೊಂಡಿದ್ದಾರೆ. ನಾವು ಎಷ್ಟೆ ಕಷ್ಟ ಪಟ್ಟರೂ ತಪ್ಪುಗಳನ್ನು ಅದರಲ್ಲಿ ನೋಡುತ್ತಿರುತ್ತಾರೆ. ನಾವು ಏನು ಮಾಡಿದರೂ ಸಹ ಅದರಲ್ಲಿ ತಪ್ಪುಗಳನ್ನು ಹುಡುಗಿ ಕಠಿಣ ಪದಗಳಿಂದ ನಮ್ಮನ್ನು ಚುಚ್ಚುತ್ತಿರುತ್ತಾರೆ. ನಮ್ಮನ್ನು ಎಷ್ಟು ಟ್ರೋಲ್ ಮಾಡಿದರೇ ಅವರಿಗೆ ಅಷ್ಟು ಸಂತೋಷ. ವಿಮರ್ಶೆ ಮಾಡುತ್ತಾ ಅವರು ಸಂತೋಷ ಪಡುತ್ತಾರೆ. ಅದರಿಂದ ನಮ್ಮ ಮೇಲೆ ಮಾಡುವ ಕಾಮೆಂಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಇಂತಹ ಕೆಲವೊಂದು ಕಾಮೆಂಟ್ ಗಳನ್ನು ನೋಡಿ ಜನರು ಸಹ ಬೇಸರಗೊಳ್ಳುತ್ತಾರೆ. ಇದರಲ್ಲಿ ದುರದೃಷ್ಟ ಏನು ಅಂದರೇ ನಮ್ಮ ಮೇಲೆ ಬರುವಂತಹ ಟ್ರೋಲ್ ಗಳು ಸಹ ಪ್ರಜೆಗಳನ್ನು ಬೇಸರ ಆಗುವಂತೆ ಮಾಡುತ್ತವೆ. ನಾನು ಸಿನಿರಂಗದಲ್ಲಿ ಎಂಟ್ರಿ ಕೊಟ್ಟಾಗಿನಿಂದ ಅನೇಕ ವಿಮರ್ಶೆಗಳನ್ನು ಎದುರಿಸಿದ್ದೇನೆ ಎಂದಿದ್ದಾರೆ ಜಾನ್ವಿ ಕಪೂರ್‍.

ನಾನು ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ನಾನು ನೆಪೊ ಕಿಡ್ ಎಂದು ಅನೇಕರು ಟ್ರೋಲ್ ಮಾಡುತ್ತಾರೆ. ನನ್ನ ಸಿನೆಮಾ ಬಿಡುಗಡೆಯಾದಾಗಲೆಲ್ಲಾ ನೆಪೊಕಿಡ್, ನಿನಗೆ ನಟನೆ ಬಾರದಿದ್ದಾಗ ಸಿನೆಮಾಗಳಲ್ಲಿ ಏಕೆ ನಟಿಸುತ್ತೀಯಾ ಎಂದು ಕಾಮೆಂಟ್ ಮಾಡುತ್ತಾರೆ. ಈ ಕಾಮೆಂಟ್ ಗಳನ್ನು ನೋಡಿದಾಗ ನಾನು ತುಂಬಾನೆ ನೋವನ್ನು ಪಟ್ಟೆ. ಆದರೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬರುವ ಟ್ರೋಲ್ ಗಳನ್ನು ನೋಡಿ ನಗುತ್ತೇನೆ. ನನ್ನ ಬಲ, ಬಲಹೀನತೆ, ನಾನು ಹೇಗೆ ನಟಿಸುತ್ತೇನೆ ಎಂಬುದು ನನಗೆ ತಿಳಿದಿದೆ. ಆದ್ದರಿಂ ಅಂತಹ ಅಸಂಬದ್ದ  ಟ್ರೋಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇದೀಗ ನಾನು ನಟಿಸಿದ ಸಿನೆಮಾಗಳಲ್ಲಿ ನನ್ನನ್ನು ನಾನು ನಿರೂಪಿಸಿಕೊಳ್ಳುತ್ತಿದ್ದೇನೆ. ನನಗೂ ಸಹ ಅವಕಾಶಗಳು ಹರಿದುಬರುತ್ತಿವೆ ಎಂದು ಜಾನ್ವಿ ಕಪೂರ್‍ ತಿಳಿಸಿದ್ದಾರೆ.

ಇನ್ನೂ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಪಾಪ್ಯುಲರ್‍ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಾರೆ. ಇನ್ನೂ ಜಾನ್ವಿ ಕಪೂರ್‍ ಶೀಘ್ರದಲ್ಲೇ ಜೂನಿಯರ್‍ ಎನ್.ಟಿ.ಆರ್‍ ರವರ ಸಿನೆಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಇನಷ್ಟೆ ಅಧಿಕೃತವಾದ ಮಾಹಿತಿ ಹೊರಬರಬೇಕಿದೆ.

Most Popular

To Top