ಸ್ಟಾರ್ ಲೇಡಿ ವಿಲನ್ ವರಲಕ್ಷ್ಮೀ ಶರತ್ ಕುಮಾರ್ ಗೆ ಘೋರ ಅವಮಾನ, ಅದು ಗಂಡಸರಂತಿದೆ ಎಂದು ವಿಮರ್ಶೆ?

Follow Us :

ಸಿನೆಮಾ ನಟಿಯರಿಗೆ ಬಾಡಿ ಶೇಮಿಂಗ್ ಬಗ್ಗೆ ಆಗಾಗ ಅನೇಕ ವಿಮರ್ಶೆಗಳು ಎದುರಾಗಿರುತ್ತವೆ. ಅನೇಕ ಸ್ಟಾರ್‍ ನಟಿಯರೂ ಸಹ ಬಾಡಿಶೇಮಿಂಗ್ ನಿಂದ ಹೊರತಾಗಿಲ್ಲ. ಸೌತ್ ಸಿನಿರಂಗದಲ್ಲಿ ಸ್ಟಾರ್‍ ಲೇಡಿ ವಿಲನ್ ಆಗಿಯೇ ಖ್ಯಾತಿ ಪಡೆದುಕೊಂಡ ವರಲಕ್ಷ್ಮೀ ಶರತ್ ಕುಮಾರ್‍ ರವರಿಗೂ ಸಹ ಬಾಡಿ ಶೇಮಿಂಗ್ ಎದುರಾಗಿದೆ. ತನ್ನಲ್ಲಿ ಅದು ಗಂಡಸರಂತಿದೆ ಎಂದು ಆಕೆಯನ್ನು ಅವಮಾನಿಸಿದ್ದರಂತೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,

ನಟಿ ವರಲಕ್ಷ್ಮೀ ಸ್ಟಾರ್‍ ಕಿಡ್ ಆಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆ ತನ್ನದೇ ಆದ ಪ್ರತಿಭೆಯ ಮೂಲಕ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ನಟಿಯರು ಹಿರೋಯಿನ್ ಆಗಿ ಗ್ಲಾಮರಸ್ ಪಾತ್ರಗಳನ್ನು ಪೋಷಣೆ ಮಾಡಲು ಇಂಟ್ರಸ್ಟ್ ತೋರಿಸುತ್ತಿರುತ್ತಾರೆ. ಆದರೆ ವರಲಕ್ಷ್ಮೀ ಮಾತ್ರ ವಿಲನ್ಸ್ ಹಾಗೂ ವಿಭಿನ್ನವಾದ ಪಾತ್ರಗಳಲ್ಲೇ ಹೆಚ್ಚು ಇಂಟ್ರಸ್ಟ್ ತೋರಿಸುತ್ತಿದ್ದಾರೆ. ತಮಿಳು ನಟ ವಿಜಯ್ ಅಭಿನಯದ ಸರ್ಕಾರ್‍, ಮಾಸ್ ಮಹಾರಾಜ ರವಿತೇಜ ಅಭಿನಯದ ಕ್ರಾಕ್, ಸಮಂತಾ ಅಭಿನಯದ ಯಶೋಧ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಆಕೆ ವಿಲನ್ ಪಾತ್ರ ಪೋಷಣೆ ಮಾಡಿದ್ದಾರೆ. ಇದೀಗ ವರಲಕ್ಷ್ಮೀ ಸೌತ್ ನಲ್ಲಿ ಸ್ಟಾರ್‍ ಲೇಡಿ ವಿಲನ್ ಆಗಿ ಬಹುಬೇಡಿಕೆಯನ್ನು ಪಡೆದುಕೊಂಡಿದ್ದಾರೆ.

ನಟಿ ವರಲಕ್ಷ್ಮೀ ಶರತ್ ಕುಮಾರ್‍ ಗೆ ಕೆರಿಯರ್‍ ಆರಂಭದಲ್ಲಿ ಘೋರವಾದ ಅವಮಾನವಾಗಿತ್ತಂತೆ. ಕೆರಿಯರ್‍ ಆರಂಭದಲ್ಲಿ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಹೇಳುತ್ತಿದ್ದರಂತೆ. ಆ ಸಮಯದಲ್ಲಿ ಕೆಲವು ನಿರ್ದೇಶಕರು ನಿನ್ನ ಕಂಠ ಸರಿಯಿಲ್ಲ. ನಿನ್ನ ಕಂಠ ಗಂಡಸರ ಕಂಠದಂತಿದೆ ಎಂದು ಅವಮಾನಿಸಿದ್ದರಂತೆ. ಇನ್ನೂ ಈ ಕಾಮೆಂಟ್ ಕಾರಣದಿಂದ ವರಲಕ್ಷ್ಮೀ ತುಂಬಾ ನೋವನ್ನು ಅನುಭವಿಸಿದ್ದರಂತೆ. ಆದರೆ ಕೆಲವೇ ದಿನಗಳಲ್ಲಿ ತನ್ನ ಕಂಠಕ್ಕೆ ಹಾಗೂ ನಟನೆಗೆ ಭಾರಿ ಪ್ಯಾನ್ ಫಾಲೋಯಿಂಗ್ ಸಹ ದೊರೆಯಿತಂತೆ. ಇದೀಗ ಆಕೆಯ ಕಂಠಕ್ಕೂ ಸಹ ಭಾರಿ ಫ್ಯಾನ್ಸ್ ಇದ್ದಾರಂತೆ. ಕೇವಲ ಸಿನೆಮಾ ಇಂಡ್ರಸ್ಟಿಯಲ್ಲಿ ಕೆಲಸಕ್ಕೆ ಬಾರದವರು ಅವರ ಬಿಹೇವಿಯರ್‍ ಕಾರಣದಿಂದ ಸೆಲೆಬ್ರೆಟಿಗಳನ್ನು ಕಿರಿಕಿರಿ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಆಕೆ ಮಾಡಿದ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ನಟಿ ವರಲಕ್ಷ್ಮೀ ಕಾಲಿವುಡ್ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ. ಆಕೆ ಸ್ಟಾರ್‍ ಕಿಡ್ ಆದರೂ ಸಹ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಡಮ್ ಪಡೆದುಕೊಂಡಿದ್ದಾರೆ. ಸೌತ್ ನ ಸ್ಟಾರ್‍ ನಟರ ಸಿನೆಮಾಗಳಲ್ಲಿ ಆಕೆ ವಿಲನ್ ಆಗಿ ಮೊದಲ ಆಯ್ಕೆಯಾಗಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ನೆಗೆಟೀವ್ ರೋಲ್ ಗಳ ಮೂಲಕ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ.