ತಿಮ್ಮಪ್ಪನ ದರ್ಶನ ಪಡೆದ ಕ್ರೇಜಿ ಬ್ಯೂಟಿ ಶ್ರೀಲೀಲಾ, ತಾಯಿಯೊಂದಿಗೆ ದರ್ಶನ ಪಡೆದ ಶ್ರೀಲೀಲಾ, ವೈರಲ್ ಆದ ಪೊಟೋಸ್…..!

Follow Us :

ಕಳೆದ ಎರಡು ವರ್ಷಗಳ ಹಿಂದೆ ನಟಿ ಶ್ರೀಲೀಲಾ ಅಂದರೇ ತೆಲುಗಿನಲ್ಲಿ ಯಾರಿಗೂ ತಿಳಿದೇ ಇರಲಿಲ್ಲ ಎನ್ನಬಹುದು. ಪೆಳ್ಳಿ ಸಂದಡಿ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡರು. ಸದ್ಯ ತೆಲುಗಿನಲ್ಲಿ ಸ್ಟಾರ್‍ ನಟಿಯರಿಗೂ ಪೈಪೋಟಿ ಕೊಡುತ್ತಿರುವ ನಟಿಯಾಗಿ ಫೇಂ ಪಡೆದುಕೊಂಡಿದ್ದಾರೆ ಶ್ರೀಲೀಲಾ. ಇದೀಗ ಶ್ರೀಲೀಲಾ ತನ್ನ ತಾಯಿಯ ಜೊತೆಗೆ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಯಂಗ್  ಬ್ಯೂಟಿ ಶ್ರೀಲೀಲಾ ಬಹುತೇಕ ಹೋಮ್ಲಿ ನಟಿಯಾಗಿಯೇ ಕಾಣಿಸಿಕೊಂಡಿದ್ದರು. ಸ್ಕಿನ್ ಶೋ ಬಗ್ಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಇದೀಗ ಆಕೆ ತನ್ನ ಗ್ಲಾಮರ್‍ ಶೋ ಮಾಡಲು ಸಹ ಸಿದ್ದವಾಗುತ್ತಿದ್ದಾರೆ. ಧಮಾಕಾ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಟಾಲಿವುಡ್ ಸಿನಿರಂಗವನ್ನು ಶೇಕ್ ಮಾಡುವಂತೆ, ಸ್ಟಾರ್‍ ನಟಿಯರನ್ನೂ ಸಹ ಮೀರಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಮುನ್ನುಗ್ಗುತ್ತಿದ್ದಾರೆ.  ಕೊನೆಯದಾಗಿ ಆಕೆ ಪ್ರಿನ್ಸ್ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಸಹ ಪಡೆದುಕೊಂಡಿದೆ. ಜೊತೆಗೆ ಶ್ರೀಲೀಲಾ ಸೋಷಿಯಲ್ ಮಿಡಿಯಾದಲ್ಲೂ ಸಹ ತುಂಬಾನೆ ಆಕ್ಟೀವ್ ಆಗಿರುತ್ತಾರೆ.  ಬ್ಯಾಕ್ ಟು ಬ್ಯಾಕ್ ಅಪ್ಡೇಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಇನ್ನೂ ನಟಿ ಶ್ರೀಲೀಲಾ ತಮ್ಮ ತಾಯಿಯ ಜೊತೆಗೆ ತಿರುಮಲಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆ ವಿಐಪಿ ದರ್ಶನದ ವೇಳೆ ಕುಟುಂಬಸ್ಥರೊಂದಿಗೆ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಬಳಿಕ ರಂಗನಾಯಕುಲ ಮಂಟಪದಲ್ಲಿ ವೇದ ವಿದ್ವಾಂಸರು ವೇದಾಶಿರ್ವಚನ ನೀಡಿ, ದೇವಸ್ಥಾನದ ಅಧಿಕಾರಿಗಳು ಶ್ರೀಲೀಲಾ ರವರಿಗೆ ತೀರ್ಥ ಪ್ರಸಾದ ನೀಡಿದ್ದಾರೆ. ಬಳಿಕ ದೇವಾಲಯದ ಹೊರಗೆ ಶ್ರೀಲೀಲಾ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದು ತುಂಬಾ ಸಂತೋಷ ತಂದಿದೆ ಎಂದಿದ್ದಾರೆ. ಇನ್ನೂ ಶ್ರೀಲೀಲಾ ರವರನ್ನು ಕಂಡ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಜೊತೆಗೆ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದಿದ್ದಾರೆ. ಸದ್ಯ ಆಕೆಯ ತಿರುಮಲ ಭೇಟಿಯ ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.