ನಿನ್ನನ್ನು ಸಾವಿತ್ರಿ, ಸೌಂದರ್ಯ ರಂತೆ ಊಹಿಸಿಕೊಂಡಿದ್ದೆವು, ಈ ರೀತಿ ಮಾಡಿದ್ದು ಏಕೆ ಎಂದ ಅನುಪಮಾ ಅಭಿಮಾನಿ, ನೋವಿನ ನುಡಿಗಳನ್ನಾಡಿದ ಅನುಪಮ ಡೈ ಹಾರ್ಡ್ ಅಭಿಮಾನಿ….!

Follow Us :

ಸಿನಿರಂಗದಲ್ಲಿ ಮೊದಲಿಗೆ ಹೋಮ್ಲಿಯಾಗಿ ಕಾಣಿಸಿಕೊಂಡ ಅನುಪಮಾ ಪರಮೇಶ್ವರನ್ ಸದ್ಯ ಬೋಲ್ಡ್ ಅವತಾರ ತಾಳಿದ್ದಾರೆ. ಮಲಯಾಳಂ ಮೂಲದ ಅನುಪಮಾ ರನ್ನು ಆಕೆಯ ಅಭಿಮಾನಿಗಳು ಹೋಮ್ಲಿ ಬ್ಯೂಟಿಯಾಗಿಯೇ ಅಭಿಮಾನಿಸಿದ್ದರು. ಆದರೆ ಇತ್ತೀಚಿಗೆ ಅನುಪಮಾ ತುಂಬಾನೆ ಬೋಲ್ಡ್ ಆಗುತ್ತಿದ್ದಾರೆ. ಅದರಲ್ಲೂ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಲಿಪ್ ಲಾಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿರಂಗಕ್ಕೆ ದೊಡ್ಡ ಶಾಕ್ ನೀಡಿದ್ದರು. ಆಕೆಯನ್ನು ನೋಡಿದ ಅನೇಕರು ಅಷ್ಟಕ್ಕೂ ಅದು ಅನುಪಮಾ ರವರೇನಾ ಎಂದು ಅನುಮಾನ ಬರುವಂತೆ ಮಾಡಿದ್ದರು. ಇದರಿಂದ ಅನುಪಮಾ ಅಭಿಮಾನಿಗಳು ಭಾರಿ ನೋವು ಅನುಭವಿಸಿದ್ದಾರೆ. ಇದೀಗ ಅಭಿಮಾನಿಯೋರ್ವ ವಿಡಿಯೋ ಮೂಲಕ ನೋವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಭಿಮಾನಿಯೋರ್ವ ತನ್ನ ನೋವನ್ನು ವ್ಯಕ್ತಪಡಿಸಿದ್ದಾರೆ. ಅನುಪಮಾ ನಿಮ್ಮನ್ನು ನಾವು ಸಾವಿತ್ರಿಯವರಂತೆ, ಸೌಂದರ್ಯರವರಂತೆ ಊಹಿಸಿಕೊಂಡಿದ್ದೆವು. ಆದರೆ ನೀವು ಈ ರೀತಿ ಮಾಡಿದ್ದೇಕೆ ಎಂದು ನೋವು ಹಂಚಿಕೊಂಡಿದ್ದಾರೆ. ಇದರಿಂದ ನನ್ನ ಹಾರ್ಟ್ ಬ್ರೇಕ್ ಆಗಿದೆ, ನೋಡೋಕೆ ಆಗ್ತಾಯಿಲ್ಲ. ಇಷ್ಟವಾಗುತ್ತಿಲ್ಲ ಎಂದು ನೋವಿನಿಂದ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. ಏನ್ರಿ ಅನುಪಮಾ ರವರವೇ ಅ ಆ ಸಿನೆಮಾ ನೋಡಿ ನಿಮ್ಮನ್ನು ಇಷ್ಟಪಡದೇ ಇರುವಂತಹವರು ಇರುತ್ತಾರಾ? ಶತಮಾನಂ ಭವತಿ ಸಿನೆಮಾದಲ್ಲಿ ಅಷ್ಟಕ್ಕೂ ನಾದಿನಿ ಹೇಗಿರಬೇಕು ಎಂಬುದು ಅಂದರೇ ನಿಮ್ಮಂತೆ ಇರಬೇಕು ಅನ್ನೋ ತರಹ ನಟಿಸಿದ್ದೀರಾ. ಅ ಆ, ಶತಮಾನಂ ಭವತಿ, ಉನ್ನದಿ ಒಕ್ಕಟೆ ಜಿಂದಗಿ, ಹಲೋ ಗುರು ಪ್ರೇಮಕೋಸಮೇ ಮೊದಲಾದ ಸಿನೆಮಾದಲ್ಲಿ ನಟಿಸಿ ಎಲ್ಲರನ್ನೂ ಮೆಚ್ಚುವಂತೆ ಮಾಡಿದ್ರಿ.

ಇದೀಗ ಎಂತಹ ಸಿನೆಮಾಗಳನ್ನು ಮಾಡುತ್ತಿದ್ದೀರಾ, ರೌಡಿ ಬಾಯ್ಸ್, ಟಿಲ್ಲು 2 ಸಿನೆಮಾಗಳು ಏಕೆ ಬೇಕಿತ್ತು ನಿಮಗೆ. ಈ ಹಿಂದೆ ಸಾವಿತ್ರಿಯವರು, ಸೌಂದರ್ಯರವರು ಎಂತಹ ಸಿನೆಮಾಗಳು ಮಾಡಿದ್ದಾರೆ. ನಾವು ನಿಮ್ಮ ಅವರಂತೆ ಅಂದುಕೊಂಡಿದ್ದೇವು. ಆದರೆ ಇದೀಗ ನೀವು ಮಾಡುತ್ತಿರುವ ಸಿನೆಮಾಗಳು ನಮಗೆ ಇಷ್ಟವಾಗುತ್ತಿಲ್ಲ. ದಯಮಾಡಿ ಒಳ್ಳೆಯ ಪಾತ್ರಗಳಿರುವ ಸಿನೆಮಾಗಳನ್ನು ಮಾಡಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅನೇಕರು ಈ ವಿಡಿಯೋ ಗೆ ಬೆಂಬಲ ಸಹ ಸೂಚಿಸುತ್ತಿದ್ದಾರೆ. ಆದರೆ ಮತ್ತೆ ಕೆಲವರು ಈ ವಿಡಿಯೋ ಒಗ್ಗೆ ವಿಮರ್ಶೆ ಸಹ ಮಾಡುತ್ತಿದ್ದಾರೆ. ಇನ್ನೂ ಟಿಲ್ಲು ಸ್ಕ್ವೇರ್‍ ಸಿನೆಮಾದಲ್ಲಿ ಅನುಪಮಾ ನೆಕ್ಸ್ಟ್ ಲೆವೆಲ್ ಗ್ಲಾಮರ್‍ ಶೋ ಮಾಡಿದ್ದಾರೆ. ಜೊತಗೆ ಲಿಪ್ ಲಾಕ್ ದೃಶ್ಯಗಳಲ್ಲಿ ಸಹ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಈ ಸಿನೆಮಾದ ಟ್ರೈಲರ್‍ ಕೆಲವು ದಿನಗಳ ಹಿಂದೆಯಷ್ಟೆ ರಿಲೀಸ್ ಆಗಿದ್ದು, ಅದರಲ್ಲಿನ ಲಿಪ್ ಲಾಕ್ ದೃಶ್ಯಗಳು ಭಾರಿ ವೈರಲ್ ಆಗುತ್ತಿವೆ.