ಪಾಪರಾಜಿಗಳ ಮೇಲೆ ಕೋಪಗೊಂಡ ಜೂನಿಯರ್ ಎನ್.ಟಿ.ಆರ್, ವೈರಲ್ ಆದ ವಿಡಿಯೋ….!

Follow Us :

ಸಿನೆಮಾ ಸೆಲೆಬ್ರೆಟಿಗಳು ಅತಿ ಹೆಚ್ಚು ಅಭಿಮಾನಿಗಳಿರುತ್ತಾರೆ. ಕೆಲವೊಮ್ಮೆ ಅಭಿಮಾನ ಅತಿರೇಕಕ್ಕೆ ಹೋಗುತ್ತದೆ. ಜೊತೆಗೆ ಆಗಾಗ ಪಾಪರಾಜಿಗಳ ಮೇಲೆ ಸಹ ಅಸಹನೆ ವ್ಯಕ್ತಪಡಿಸುತ್ತಿರುತ್ತಾರೆ. ಈ ಕಾರಣದಿಂದ ಕೆಲವೊಮ್ಮೆ ಸೆಲೆಬ್ರೆಟಿಗಳು ತಾಳ್ಮೆ ಕಳೆದುಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೆ ಜೂನಿಯರ್‍ ಎನ್.ಟಿ.ಆರ್‍ ಪಾಪರಾಜಿಗಳ ಮೇಲೆ ತೀವ್ರ ಅಸಮಧಾನ ವ್ಯಕ್ತಪಡಿಸಿ ಆಕ್ರೋಷಗೊಂಡಿದ್ದಾರೆ.

ಇತ್ತೀಚಿಗೆ ನಟ ಜೂನಿಯರ್‍ ಎನ್.ಟಿ.ಆರ್‍ ಸ್ಟಾರ್‍ ಹೋಟೆಲ್ ಒಂದಕ್ಕೆ ಬಂದಾಗ ಅಂತಹ ಕಿರಿಕಿರಿಯನ್ನು ಎದುರಿಸಿದ್ದಾರೆ. ಈ ಸಮಯದಲ್ಲಿ ಅವರು ಪೋನ್ ಕಾಲ್ ನಲ್ಲಿ ಸಹ ಬ್ಯುಸಿಯಾಗಿದ್ದರು. ಅವರ ವಿಡಿಯೋ ಹಾಗೂ ಪೊಟೋಗಳಿಗಾಗಿ ನಟನನ್ನು ಹಿಂಬಾಲಿಸಿದ್ದರು. ತಿರುಗಿ ನೋಡಿದಾಗ ಅವರನ್ನು ಓಯ್ ಎಂದು ಕೂಗಿದ್ದಾರೆ. ಅವರನ್ನು ಹಿಂದೆ ಸರಿಯುವಂತೆ ಸಹ ಕೇಳಿದರು. ಈ ವೇಳೆ ಜೂನಿಯರ್‍ ಎನ್.ಟಿ.ಆರ್‍ ಆಕ್ರೋಷಗೊಂಡಿದ್ದಾರೆ. ಪಾಪರಾಜಿಗಳ ಮೇಲೆ ಕೋಪಗೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೂನಿಯರ್‍ ಎನ್.ಟಿ.ಆರ್‍ ವಾರ್‍-2 ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಮೊದಲ ಶೆಡ್ಯೂಲ್ಡ್ ಶೂಟಿಂಗ್ ಪೂರ್ಣಗೊಳಿಸಿ ಹೈದರಾಬಾದ್ ಗೆ ವಾಪಸ್ಸಾಗಿದ್ದರು. ಮೂರು ದಿನಗಳ ಹಿಂದೆ ಮತ್ತೆ ಎರಡನೇ ಶೆಡ್ಯೂಲ್ಡ್ ಗಾಗಿ ಮುಂಬೈಗೆ ಹೋಗಿದ್ದು, ಅಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ.

ಶೂಟಿಂಗ್ ಮುಗಿದ ಬಳಿಕ ಹೋಟೆಲ್ ಗೆ ಹೋಗುತ್ತಿದ್ದಾಗ ಜೂನಿಯರ್‍ ಎನ್.ಟಿ.ಆರ್‍ ರವರ ಅನುಮತಿಯಿಲ್ಲದೇ ಪೊಟೋ ತೆಗೆಯಲು ಪೊಟೋಗ್ರಾಪರ್ಸ್ ಮುಂದಾದರು. ಈ ಕಾರಣದಿಂದ ಎನ್.ಟಿ.ಆರ್‍ ಅವರ ಮೇಲೆ ಸೀರಿಯಸ್ ಆಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನಾರ್ತ್ ಮೂಲದ ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಅವರ ವಿರುದ್ದ ನೆಗೆಟೀವ್ ಪ್ರಚಾರ ಶುರು ಮಾಡಿದ್ದಾರೆ. ಸೌತ್ ನವರು ಇಷ್ಟೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಎನ್.ಟಿ.ಆರ್‍ ಅಭಿಮಾನಿಗಳು ಮಾತ್ರ ಈ ಅಪಪ್ರಚಾರವನ್ನು ತಳ್ಳಿಹಾಕಿದ್ದಾರೆ. ಇನ್ನೂ ಎನ್.ಟಿ.ಆರ್‍ ರವರು ವಾರ್‍-2 ಸಿನೆಮಾದಲ್ಲಿನ ತಮ್ಮ ಲುಕ್ ಸೀಕ್ರೇಟ್ ಆಗಿ ಇಡಲು ಈ ರೀತಿಯಾಗಿ ಮಿಡಿಯಾದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಸದ್ಯ ಜೂನಿಯರ್‍ ಎನ್.ಟಿ.ಆರ್‍ ರವರ ಬಹುನಿರೀಕ್ಷಿತ ದೇವರ ಸಿನೆಮಾದ ಶೂಟಿಂಗ್ ಸಹ ಮುಗಿದಿದ್ದು, ಶೀಘ್ರದಲ್ಲೇ ಸಿನೆಮಾ ತೆರೆಗೆ ಬರಲಿದೆ.